Sunday, April 20, 2025
Google search engine

Homeಸ್ಥಳೀಯಮೈಸೂರಿನಲ್ಲಿ ಕ್ರಿಸ್‌ಮಸ್ ಸಂಭ್ರಮ

ಮೈಸೂರಿನಲ್ಲಿ ಕ್ರಿಸ್‌ಮಸ್ ಸಂಭ್ರಮ

ಮೈಸೂರು : ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಸೆಂಟ್ ಫಿಲೋಮಿನಾ ಚರ್ಚ್‌ನಲ್ಲಿ ಕ್ರಿಸ್‌ಮಸ್ ಸಂಭ್ರಮ ಮನೆ ಮಾಡಿದ್ದು, ವಿಶೇಷ ಪ್ರಾರ್ಥನೆ ಮಾಡಲಾಯಿತು. ಭಾನುವಾರ ಮಧ್ಯರಾತ್ರಿ ೧೨ ಗಂಟೆಯಿಂದ ಕ್ರಿಸ್‌ಮಸ್ ಸಂಭ್ರಮ ಪ್ರಾರಂಭವಾಯಿತು. ಜನರು ಕ್ರಿಸ್‌ಮಸ್ ಶುಭಾಶಯವನ್ನು ಪರಸ್ಪರ ವಿನಿಮಯ ಮಾಡಿಕೊಂಡರು.

ಕ್ಯಾಥೋಲಿಕ್‌ನ ಪ್ರಧಾನ ಚರ್ಚ್ ಆದ ಸೆಂಟ್ ಫಿಲೋಮಿನಾದಲ್ಲಿ ಮೈಸೂರಿನ ಧರ್ಮ ಕ್ಷೇತ್ರದ ಆಡಳಿತಾಧಿಕಾರಿ ಬರ್ನಾಡ್ ಮೋರಿಸ್ ನೇತೃತ್ವದಲ್ಲಿ ಪೂಜೆ ಪ್ರಾರಂಭಿಸಲಾಯಿತು. ಬಳಿಕ, ಕ್ರಿಸ್‌ಮಸ್ ಜಾಗರಣೆ, ಬಲಿ ಪೂಜೆ ಸಲ್ಲಿಕೆ, ರಾತ್ರಿ ೧೨ ಗಂಟೆಗೆ ಬಾಲಯೇಸು ಮೆರವಣಿಗೆ ಮೂಲಕ ಗೋದಳಿಯಲ್ಲಿ ಪ್ರತಿಷ್ಠಾಪನೆ ಮಾಡಿ, ಯೇಸು ಕ್ರಿಸ್ತನ ಜನನದ ಬಗ್ಗೆ ವಿವರಿಸುವ ಬೊಂಬೆಗಳನ್ನು ಪ್ರದರ್ಶನ ಮಾಡಲಾಯಿತು. ಕ್ರಿಸ್‌ಮಸ್ ಆಚರಣೆಗಳು ಪ್ರಪಂಚದಾದ್ಯಂತ ವಿವಿಧ ಪದ್ಧತಿಗಳನ್ನು ಒಳಗೊಂಡಿವೆ. ಚರ್ಚ್ ಸೇವೆಗಳಿಗೆ ಹಾಜರಾಗುವುದರಿಂದ ಹಿಡಿದು ಉಡುಗೊರೆಗಳನ್ನು ವಿನಿಮಯ ಮಾಡಿಕೊಳ್ಳಲಾಗುತ್ತದೆ.

ಕ್ರಿಸ್‌ಮಸ್ ಅನ್ನು ವಿವಿಧ ರೂಪಗಳಲ್ಲಿ ಆಚರಿಸಲಾಗುತ್ತಿದೆ. ಇಸ್ರೇಲ್‌ನ ಬೆಥ್‌ಲೆಹೆಮ್‌ನಲ್ಲಿ ಈ ಹಬ್ಬವನ್ನು ವಿಶೇಷವಾಗಿ ಆಚರಣೆ ಮಾಡಲಾಗುತ್ತದೆ. ಆಸ್ಟ್ರೇಲಿಯಾ ಮತ್ತು ಅಮೆರಿಕದಲ್ಲಿ ಒಂದೇ ರೀತಿಯ ಸಂಪ್ರದಾಯಗಳು ಆಚರಣೆಯಲ್ಲಿವೆ. ರಷ್ಯಾದಲ್ಲಿ ೩೯ ದಿನದ ಉಪವಾಸದ ನಂತರ ಚಳಿಗಾಲದಲ್ಲಿ ಆಚರಿಸುವ ಹಬ್ಬವೇ ಈ ಕ್ರಿಸ್‌ಮಸ್ ಆಗಿದೆ. ಗ್ರೀಸ್, ಜೂಲಿಯನ್ ಕ್ಯಾಲೆಂಡರ್ ಅನ್ನು ಅನುಸರಿಸಿ ಜನವರಿ ೭ ರಂದು ಈ ಹಬ್ಬವನ್ನು ಆಚರಿಸುತ್ತದೆ. ಈಜಿಪ್ಟಿನ ಕ್ರಿಶ್ಚಿಯನ್ನರು ೪೩ ದಿನಗಳ ಉಪವಾಸವನ್ನು ಆಚರಿಸುತ್ತಾರೆ.

RELATED ARTICLES
- Advertisment -
Google search engine

Most Popular