Saturday, April 19, 2025
Google search engine

Homeರಾಜ್ಯಸುದ್ದಿಜಾಲಎಚ್ ಡಿ ಕೋಟೆ: 24 ಮನೆ ತೆಲುಗು ಶೆಟ್ಟರ ಕಚೇರಿ ಉದ್ಘಾಟನೆ

ಎಚ್ ಡಿ ಕೋಟೆ: 24 ಮನೆ ತೆಲುಗು ಶೆಟ್ಟರ ಕಚೇರಿ ಉದ್ಘಾಟನೆ

ಎಡತೊರೆ ಮಹೇಶ್
ಎಚ್ ಡಿ ಕೋಟೆ
: ತಾಲೂಕಿನ ಯರಹಳ್ಳಿ ಹ್ಯಾಂಡ್ ಪೋಸ್ಟ್ ನಲ್ಲಿ 24 ಮನೆ ತೆಲುಗು ಶೆಟ್ಟರ ಕಚೇರಿ ಉದ್ಘಾಟನೆ ನಡೆಯಿತು. 24 ಮನೆ ತೆಲುಗು ಶೆಟ್ಟರ ಕಾರ್ಯಕ್ರಮ ಸರಗೂರು ಮತ್ತು ಎಚ್ ಡಿ ಕೋಟೆ ತಾಲೂಕು ಅಧ್ಯಕ್ಷ ಎನ್. ಎಸ್ ಮಂಜುನಾಥ್ ರವರ ಅಧ್ಯಕ್ಷತೆಯಲ್ಲಿ ನಡೆಯಿತು.

ಕಾರ್ಯಕ್ರಮದ ಉದ್ಘಾಟನೆಯನ್ನು ಹನೂರು ಕ್ಷೇತ್ರದ ಜನ ಮಿತ್ರ ಸಂಸ್ಥಾಪಕರಾದ ವೆಂಕಟೇಶ್ವರ ಅವರು ನೆರವೇರಿಸಿದರು. ನಂತರ ಮಾತನಾಡಿದ ಅವರು ಮನುಷ್ಯ ಹುಟ್ಟಿದ ಮನೆ ಹುಟ್ಟಿದ ನಾಡಿಗೆ ಎಲ್ಲರೂ ಚಿರಋಣಿ ಆಗಬೇಕು. ಆದ್ದರಿಂದ ಈ ಜನಾಂಗದಲ್ಲಿ ಹುಟ್ಟಿರುವ ನಾನು ಹಲವಾರು ವರ್ಷಗಳಿಂದ ಸರ್ವಜನಾಂಗದ ಕೆಲಸ ಕಾರ್ಯಗಳಿಗೆ ಎಲ್ಲಾ ರೀತಿಯ ಸಹಕಾರವನ್ನು ನೀಡುತ್ತಿದ್ದು ಅದರಂತೆ ರಾಜ್ಯದಲ್ಲಿ ನಮ್ಮ ಜನಾಂಗದವರು ಕಡಿಮೆ ಸಂಖ್ಯೆಯಲ್ಲಿ ಇದ್ದು ನಾವುಗಳು ಒಬಿಸಿಗೆ ಸೇರಿದ್ದು ಸರ್ಕಾರದಿಂದ ಯಾವುದೇ ಸೌಲಭ್ಯಗಳನ್ನು ಕೇಳಲು ನಮ್ಮ ಜನರು ಹೋಗುತ್ತಿಲ್ಲ.

ಆದ್ದರಿಂದ ನಾವೆಲ್ಲರೂ ಒಗ್ಗೂಡಿ ನಮ್ಮ ನಮ್ಮ ಸೌಲಭ್ಯಗಳಿಗೆ ಹೋರಾಟ ಮಾಡುವ ಮುಖಾಂತರ ರಾಜಕೀಯವಾಗಿ, ಶೈಕ್ಷಣಿಕವಾಗಿ, ಆರ್ಥಿಕವಾಗಿ ಹೋರಾಟ ಮಾಡಬೇಕು. ಆದ್ದರಿಂದ ಅತಿ ಶೀಘ್ರದಲ್ಲೇ ನಮ್ಮ ಜನಾಂಗದ ರಾಜ್ಯಮಟ್ಟದ ಸಮ್ಮೇಳನವನ್ನು ಹಮ್ಮಿಕೊಳ್ಳಲಾಗುವುದು ಹಾಗೂ ಹೆಚ್ ಡಿ ಕೋಟೆ ತಾಲೂಕಿನಲ್ಲಿ ನಮ್ಮ ಜನಾಂಗದ ಸಮುದಾಯ ಭವನಕ್ಕೆ ಜಾಗವನ್ನು ಗುರುತಿಸಿ ನಾನು ಕಟ್ಟಡ ನಿರ್ಮಿಸಲು 5 ಲಕ್ಷ ಸಹೋದರನವನ್ನು ನೀಡುತ್ತೇನೆ ಎಂದರು .

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಎನ್. ಎಸ್ ಮಂಜುನಾಥ್ ರವರು ಎಚ್ ಡಿ ಕೋಟೆ ಮತ್ತು ಸರಗೂರು ತಾಲೂಕಿನಲ್ಲಿ ಹಲವಾರು ಗ್ರಾಮಗಳಲ್ಲಿ ನಮ್ಮ ಜನಾಂಗದವರನ್ನು ಗುರುತಿಸಿ ಹ್ಯಾಂಡ್ ಪೋಸ್ಟಿನಲ್ಲಿ ಕಚೇರಿಯನ್ನು ತೆರೆದು ಜನಾಂಗದ ಶ್ರೇಯ ಅಭಿವೃದ್ಧಿಗೆ ಶ್ರಮಿಸುತ್ತಿದ್ದು, ಅದೇ ರೀತಿಯಾಗಿ ಮುಂದಿನ ದಿನಗಳಲ್ಲಿ ಸರ್ಕಾರದ ಅನುದಾನಗಳನ್ನು ಪಡೆದುಕೊಂಡು ನಮ್ಮ ಜನಾಂಗದ ಸಮುದಾಯ ಭವನ ಕಲ್ಯಾಣ ಮಂಟಪ, ಸ್ತ್ರೀಯರ ಶ್ರೀ ಶಕ್ತಿ ಮಹಿಳಾ ಭವನ ಇನ್ನು ಮುಂತಾದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಪದಾಧಿಕಾರಿಗಳು ಮತ್ತು ನಮ್ಮ ಜನಾಂಗದ ಜನರು ಸಹಕರಿಸಬೇಕೆಂದು ಮನವಿ ಮಾಡಿದರು . ಕಾರ್ಯಕ್ರಮದಲ್ಲಿ ಸಹಕಾರ ಮಹಾ ಮಂಡಳಿಯ ಮಾಜಿ ಸಚಿವರಾದ ಕೋಟೆ ಎಂ. ಶಿವಣ್ಣ, ಅಧ್ಯಕ್ಷ ವಿ.ರಾಜು ಮಾಜಿ ಜಿಲ್ಲಾ ಪಂಚಾಯತಿ ಸದಸ್ಯ ಎನ್ ಮಹದೇವ, ಪುರಸಭಾ ಸದಸ್ಯ ವೈ ಬಿ ಹರೀಶ್, ಇಂದ್ರಶೆಟ್ಟಿ ,ಜನಾರ್ಧನ ಶೆಟ್ಟಿ ,ನವೀನ್ ಇದೇ ಸಂದರ್ಭದಲ್ಲಿ ಜನಾಂಗದ ಮುಖಂಡರು ಮತ್ತು ಸರ್ವ ಸದಸ್ಯರು ಹಾಜರಿದ್ದರು

RELATED ARTICLES
- Advertisment -
Google search engine

Most Popular