ಮೈಸೂರು: ದಸರಾ ಮಹೋತ್ಸವದಲ್ಲಿ 8 ಬಾರಿ ಚಿನ್ನದ ಅಂಬಾರಿ ಹೊತ್ತಿದ್ದ ಅರ್ಜುನ ಆನೆಯು ಕಾಡಾನೆಯೊಂದಿಗಿನ ಕಾದಾಟದಲ್ಲಿ ಮೃತಪಟ್ಟು 11ನೇ ದಿನದ ಅಂಗವಾಗಿ ಮೈಸೂರಿನ ರಸ್ತೆಗಳಲ್ಲಿ ಗಾಂಭೀರ್ಯದಿಂದ ಹೆಜ್ಜೆ ಹಾಕಿದ ಅರ್ಜುನನನ್ನು ನೆನಪು ಮಾಡುವ ಉದ್ದೇಶದಿಂದ ಕಲಾವಿದರಾದ ಅನೀಲ್ ಕುಮಾರ್ ಭೋಗಶೆಟ್ಟಿ ಕಾವಾ ಅವರು ಡಿ.15ರಂದು ಅರಮನೆಯ ಕೋಟೆ ಆಂಜನೇಯಸ್ವಾಮಿ ದೇವಾಲಯದ ಮುಂಭಾಗದಲ್ಲಿ ರಚಿಸಿದ್ದ ಅರ್ಜುನ ಆನೆಯ 3ಡಿ ಚಿತ್ರ ಸಾರ್ವಜನಿಕರು, ಪ್ರವಾಸಿಗರ ಗಮನ ಸೆಳೆದಿತ್ತು.
ಈ ಹಿನ್ನಲೆ ಚಿತ್ರ ಬಿಡಿಸಿದ ಅನಿಲ್ ಬೋಗ ಶೆಟ್ಟಿ ಮತ್ತು ಭರತ್ ರವರಿಗೆ ಅರ್ಜುನ ಆನೆ ಮಾವುತರಾದ ವಿನು ರವರು ಇಂದು ಬೆಳಗ್ಗೆ ಮೈಸೂರಿಗೆ ಬಂದು ಅನಿಲ್ ರವರನ್ನು ಭೇಟಿ ಮಾಡಿ ಅವರಿಗೆ ಶಾಲು ಹೊದಿಸಿ ಅವರ ಕಲೆಯನ್ನು ಗೌರವಿಸಿ, ಸನ್ಮಾನಿಸಿದರು.
ಇದೇ ಸಂದರ್ಭದಲ್ಲಿ ಸುನಿಲ್ ಮತ್ತು ರವಿಶಂಕರ್ ಜೊತೆಯಲ್ಲಿ ಪಾಲ್ಗೊಂಡಿದ್ದರು.