Monday, April 21, 2025
Google search engine

Homeರಾಜ್ಯಸುದ್ದಿಜಾಲಯುವ ನಿಧಿ ಯೋಜನೆಗೆ ಇಂದಿನಿಂದ ನೋಂದಣಿ ಪ್ರಾರಂಭ

ಯುವ ನಿಧಿ ಯೋಜನೆಗೆ ಇಂದಿನಿಂದ ನೋಂದಣಿ ಪ್ರಾರಂಭ


ರಾಮನಗರ: ಯುವ ನಿಧಿ ಯೋಜನೆಯಅರ್ಹ ಫಲಾನುಭವಿಗಳು ಇಂದಿನಿಂದ ನೋಂದಣಿ ಮಾಡಿಕೊಂಡು ಪ್ರತಿ ತಿಂಗಳು ನಿರುದ್ಯೋಗ ಭತ್ಯೆ ಪಡೆದುಕೊಳ್ಳಿ ಎಂದುಜಿಲ್ಲಾಧಿಕಾರಿಡಾ.ಅವಿನಾಶ್ ಮೆನನ್‌ರಾಜೇಂದ್ರನ್‌ ಅವರು ತಿಳಿಸಿದರು.
ಅವರುಇಂದು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿಯುವ ನಿಧಿ ಯೋಜನೆಯ ಪೋಸ್ಟರ್ ಬಿಡುಗಡೆಗೊಳಿಸಿ ಮಾತನಾಡಿದರು.

೨೦೨೩ರಲ್ಲಿ ಪದವಿ, ಡಿಪ್ಲೋಮಾಮುಗಿಸಿರುವ ಕನಿಷ್ಟ ೬ ತಿಂಗಳ ಕಾಲ ಸರ್ಕಾರಿಅಥವಾ ಖಾಸಗಿ ಉದ್ಯೋಗ ಹೊಂದಿಲ್ಲದವರು ಸೇವಾ ಸಿಂಧು ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಪದವಿ ಮಾಡಿದವರಿಗೆ ಮಾಸಿಕ ೩,೦೦೦ ರೂ.ಗಳು, ಡಿಪ್ಲೋಮಾ ಮಾಡಿದವರಿಗೆ ಮಾಸಿಕ ೧,೫೦೦ ರೂ.ಗಳನ್ನು ನಿರುದ್ಯೋಗ ಭತ್ಯೆಯಾಗಿ ನೀಡಲಾಗುವುದು.ಅರ್ಹ ಅಭ್ಯರ್ಥಿಗಳು ಉಚಿತವಾಗಿಕರ್ನಾಟಕಒನ್, ಬೆಂಗಳೂರು ಒನ್, ಗ್ರಾಮಒನ್ ಮತ್ತು ಬಾಪೂಜಿ ಸೇವಾ ಕೇಂದ್ರಗಳಲ್ಲಿ ಸಹ ಅರ್ಜಿ ಸಲ್ಲಿಸಬಹುದು. ಹೆಲ್ಪ್‌ಲೈನ್ ಸಂಖ್ಯೆ ೧೮೦೦೫೯೯೯೯೧೮ ಅನ್ನು ಸಂಪರ್ಕಿಸಬಹುದುಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಉದ್ಯಮ ಶೀಲತೆ ಹಾಗೂ ಜೀವನೋಪಾಯ ಇಲಾಖೆಯ ಸಹಾಯಕ ನಿರ್ದೇಶಕ ಗೋವಿಂದರಾಜ್, ಜಿಲ್ಲಾ ಕೌಶಲ್ಯ ಅಭಿವೃಧ್ಧಿ ಇಲಾಖೆಯಸಹಾಯಕ ನಿರ್ದೇಶಕ ಲತಾ ಸಿ.ಎನ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

RELATED ARTICLES
- Advertisment -
Google search engine

Most Popular