ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ: ಯಾವುದೇ ಸಂದರ್ಭದಲ್ಲಿ ಕೆ.ಆರ್.ನಗರ ಕ್ಷೇತ್ರದಲ್ಲಿ ಕೊವಿಡ್ ಜೆ.ಎನ್.1 ಬಂದರೂ ಅದನ್ನು ಎದುರಿಸಲು ಆರೋಗ್ಯ ಇಲಾಖೆ ಸಕಲ ಸಿದ್ಧತೆ ಮಾಡಿಕೊಂಡಿದೆ ಎಂದು ತಾಲೂಕು ಆರೋಗ್ಯಧಿಕಾರಿ ಡಾ.ನಟರಾಜು ಹೇಳಿದರು.
ಸಾರ್ವಜನಿಕ ಆಸ್ಪತ್ರೆಯಲ್ಲಿ 75 ಹಾಸಿಗೆಗಳಿದ್ದು, ಕೋವಿಡ್ ಗಾಗಿ 55 ಹಾಸಿಗೆಗಳನ್ನು, 22 ಐ.ಸಿ.ಯು. ಬೆಡ್ ಗಳಿದ್ದು, 7 ವೆಂಟಿಲೇಟರ್ ಗಳು ಇದ್ದು, 5 ನ್ನು ಕೋವಿಡ್ ಗಾಗಿ ಮೀಸಲಿಡಲಾಗಿದೆ ಎಂದು ತಿಳಿಸಿದ್ದಾರೆ.ಆರು ಜನ ವೆಂಟಲೇಟರ್ ತರಬೇತಿ ಹೊಂದಿದ ಸಿಬ್ಬಂದಿಗಳಿದ್ದಾರೆ.
ಪ್ರತಿ ನಿಮಿಷಕ್ಕೆ 500 ಲೀಟರ್ ಆಕ್ಸಿಜನ್ ಸರಬರಾಜು ಮಾಡುವ ಆಕ್ಸಿಜನ್ ಪ್ಲಾಂಟ್ ಇದ್ದು, ಪೈಪು ಮೂಲಕ ಎಲ್ಲಾ ವಾರ್ಡುಗಳಿಗೆ ಸರಬರಾಜು ಮಾಡುವ ಸೆಂಟ್ರಲೈಜ್ ವ್ಯವಸ್ತೇ ಇದೆ. ಇದರೊಂದಿಗೆ 77 ಜಂಬೋ ಸಿಲಿಂಡರ್ ಗಳು, 30 ಬಿ ಮತ್ತು 20 ಸಿ ಮಾದರಿ ಸಿಲೆಂಡರ್ ಗಳಿವೆ. ಪ್ರತಿ ನಿಮಿಷಕ್ಕೆ 5 ರಿಂದ 10 ಲೀಟರ್ ಆಕ್ಸಿಜನ್ ಉತ್ಪಾದಿಸಬಲ್ಲ ,ವಾರ್ಡಿನಿಂದ ವಾರ್ಡಿಗೆ ಕೊಂಡಯ್ಯಬಲ್ಲ, 55 ಆಕ್ಸಿಜನ್ ಕಾನ್ಸೆಂಟೇಟರ್ಗಳು ಇವೆ ಎಂದು ಮಾಹಿತಿ ನೀಡಿದರು.ಒಬ್ಬರು ಫಿಶಿಸಿಯನ್ , ಇಬ್ಬರು ಅರವಳಿಕೆ ತಜ್ನರು, ಇಬ್ಬರು ಶ್ವಾಸಕೋಶ ತಜ್ನರು, ಮತ್ತು ಇತರೆ ತಜ್ನರು ಇದ್ದು ವೈದ್ಯರ ಕೊರತೆ ಇರುವುದಿಲ್ಲ.

ಸಮುದಾಯ ಆರೋಗ್ಯ ಕೇಂದ್ರ ಸಾಲಿಗ್ರಾಮದಲ್ಲಿ 30 ಹಾಸಿಗೆಗಳ ಸಾಮರ್ಥ್ಯ ಇದ್ದು. ತುರ್ತು ಸಂದರ್ಭ ಬಂದಲ್ಲಿ, ಇವುಗಳನ್ನು ಕೂಡಾ ಐ.ಸಿ.ಯು ಗಳಾಗಿಪರಿವರ್ತಿಸಬಹುದಾಗಿದೆ ಎಂದು ತಿಳಿಸಿದರು
ಇಲ್ಲಿ 10 ಜಂಬೋ ಸಿಲೆಂಡರ್, 14 ಚಿಕ್ಕ ಸಿಲೆಂಡರ್, 5 ಆಕ್ಸಿಜನ್ ಕಾನ್ಸೆಂಟ್ರೇಟರ್ ಗಳಿವೆ.
ತಾಲ್ಲೂಕಿನ ಎಲ್ಲಾ ಆಸ್ಪತ್ರೆಗಳಲ್ಲೂ ಆಕ್ಸಿಜನ್ ಮತ್ತು ನೆಬುಲೈಜೇಶನ್ ವ್ಯವಸ್ಥೆ ಇದ್ದು. ಪ್ರಾಥಮಿಕ ತುರ್ತು ಚಿಕಿತ್ಸೆ ನೀಡಬಹುದಾಗಿದೆ. ಆರು ಖಾಸಗಿ ಆಸ್ಪತ್ರೆಗಳಿದ್ದು, ಸರಕಾರದ ನಿಯಮನುಸಾರ ತುರ್ತು ಪರಿಸ್ಥಿತಿ ಬಂದರೆ ಶೇಕಡ 50% , ಕೊವಿಡ್ ಗೆ ಮೀಸಲಿಡಬೇಕಾಗುತ್ತದೆ ಎಂದು ಹೇಳಿದರು.ತಾಲ್ಲೂಕಿನಲ್ಲಿ 108 ಅಂಬುಲೆನ್ಸ್ ಮೂರು ಇದ್ದು, ಆಸ್ಪತ್ರೆಯ ಅಂಬುಲೆನ್ಸ್ ಗಳು ಮೂರು ಇವೆ. ಖಾಸಗಿ ಉಚಿತ ಅಂಬುಲೆನ್ಸಗಳು ಎರಡು ಇದ್ದು, ರಿಯಾಯಿತಿ ದರದಲ್ಲಿ 4 ಖಾಸಗಿ ಅಂಬ್ಯುಲೆನ್ಸ್ ಗಳಿವೆ. ಒಟ್ಟು 12 ಪಿ.ಪಿ.ಇ. ಕಿಟ್ N95 ಮಾಸ್ಕ್, ತ್ರಿಬಲ್ ಲೆಯರ್ ಮಾಸ್ಕ್, ಮತ್ತು ಔಷಧಿಗಳ ದಾಸ್ತಾನು ಇದ್ದು ,ಹೆಚ್ಚುವರಿ ಬೇಡಿಕೆ ಸಲ್ಲಿಸಲಾಗಿದೆ ಎಂದು ತಿಳಿಸಿದರು.
ಶುಕ್ರವಾರದಿಂದ ಗಂಟಲ ದ್ರವ ತೆಗೆಯಲಾಗುತ್ತಿದ್ದು, ಪ್ರತಿದಿನ ಸಂಜೆ, ಸಾಲಿಗ್ರಾಮ ಮತ್ತು ಕೆ.ಆರ್.ನಗರದಿಂದ ಮೈಸೂರಿನ ಕೇಂದ್ರೀಯ ಪ್ರಯೋಗಾಲಯಕ್ಕೆ ಕಳುಹಿಸಲಾಗುತ್ತಿದೆ. ಜನವರಿಯಿಂದ ಜಾತ್ರೆಗಳು ಪ್ರಾರಂಭವಾಗುತ್ತಿದ್ದು, ಚುಂಚನಕಟ್ಟೆ ಜಾತ್ರೆ ಮೊದಲಾಗುತ್ತದೆ, ನಂತರ ಕಪ್ಪಡಿ, ಅರ್ಕೇಶ್ವರ ಜಾತ್ರೆ ಇತ್ಯಾದಿ….. ಹಾಗಾಗಿ ಹೆಚ್ಚು ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳಬೇಕಾಗುತ್ತದೆ ಹೇಳಿದರು. ಸಾರ್ವಜನಿಕರಿಗೆ ಜ್ವರ ಅಥವಾ ಚಳಿ, ತಲೆನೋವು, ಮೈಕೈನೋವು, ಒಣ ಕೆಮ್ಮು, ನೆಗಡಿ, ಮೂಗು ಕಟ್ಟುವುದು ಗಂಟಲು ಕೆರೆತ, ಉಸಿರಾಟದ ತೊಂದರೆ, ವಾಸನೆ, ರುಚಿ ಗೊತ್ತಾಗದೆ ಇರುವುದು.ಸುಸ್ತು, ಹೊಟ್ಟೆನೋವು ಮತ್ತು ಭೇದಿ ಕಂಡುಬಂದರೆ ತಕ್ಷಣವೇ ಆರೋಗ್ಯ ಇಲಾಖೆಯನ್ನು ಸಂಪರ್ಕಿಸುವಂತೆ ಕೋರಿದ್ದಾರೆ.
ಆರೋಗ್ಯ ಇಲಾಖೆಯ ಕ್ರಮಗಳು, ನಡೆಯುತ್ತಿರುವ ಸಂಶೋಧನೆಗಳು ಮತ್ತು ಸಾರ್ವಜನಿಕರ ತಿಳುವಳಿಕೆ ಮತ್ತು ಸಹಕಾರ, ಈ ಓಮಿಕ್ರಾನ್ ಜೆ.ಎನ್. .,1 ತಳಿಯ ಸೋಂಕನ್ನು ನಿಯಂತ್ರಣದಲ್ಲಿಡಬಹುದಾಗಿದೆ. ಹಾಗಾಗಿ 60 ವರ್ಷ ದಾಟಿರುವವರು, ಕ್ಯಾನ್ಸರ್ ಪೀಡಿತರು, ಹೆಚ್.ಐ.ವಿ. ಭಾದಿತರು, ಸಕ್ಕರೆ ಕಾಯಿಲೆ, ಬಿ.ಪಿ. ಮತ್ತು ಹೃದ್ರೋಗ ಸಮಸ್ಯೆ ಇರುವವರು, ಬೇಗನೆ ರೋಗಕ್ಕೆ ತುತ್ತಾಗುವ ಸಂಭವ ಇರುವುದರಿಂದ,ಆದುದರಿಂದ ಎಲ್ಲರೂ ಮಾಸ್ಕ್ ಧರಿಸುವುದರ ಜೊತೆಗೆ, ಆದಷ್ಟೂ ಸಭೆ ಸಮಾರಂಭಗಳಿಗೆ ಹೋಗದಿರುವುದು ಒಳಿತು.
ಖಾಯಿಲೆಗಳ ಚಿಹ್ನೆಗಳು ಗೋಚರಿಸಿದರೆ ತಕ್ಷಣವೇ ಪರೀಕ್ಷೆಗಳನ್ನು ಮಾಡಿಸಬೇಕು ಎಂದು ತಿಳಿಸಿದರು. ಆಸ್ಪತ್ರೆಗಳಲ್ಲಿ ದಾಖಲಾಗಿರುವ ಎಲ್ಲಾ ಶ್ವಾಸಕೋಶಗಳ ಸೋಂಕಿರುವ ರೋಗಿಗಳನ್ನು RTPCR ಪರೀಕ್ಷೆಗೆ ಒಳಪಡಿಸಲಾಗುತ್ತಿದೆ ಮತ್ತು ಅನುಮಾನಾಸ್ಪದ ನೆಗಡಿ-ಶೀತ -ಜ್ವರ ಇರುವ ಹೋರರೋಗಿಗಳ ಮೂಗು ಮತ್ತು ಗಂಟಲು ದ್ರವದ ಪರೀಕ್ಷೆ ಗಳನ್ನು ಮಾಡಲಾಗುತ್ತಿದೆ ಎಂದು ಹೇಳಿದರು.
