Saturday, April 19, 2025
Google search engine

Homeರಾಜ್ಯಸುದ್ದಿಜಾಲಕೆ.ಆರ್.ನಗರ:ಹನುಮ ಜಯಂತಿಯ ಆಚರಣೆಯ ಪ್ರಯುಕ್ತ ಸಾಲುಪಂಕ್ತಿ ಅನ್ನಸಂತರ್ಪಣ ಕಾರ್ಯಕ್ರಮ

ಕೆ.ಆರ್.ನಗರ:ಹನುಮ ಜಯಂತಿಯ ಆಚರಣೆಯ ಪ್ರಯುಕ್ತ ಸಾಲುಪಂಕ್ತಿ ಅನ್ನಸಂತರ್ಪಣ ಕಾರ್ಯಕ್ರಮ

ಕೆ.ಆರ್.ನಗರ : ಡಿಸೆಂಬರ್ ೩೦ರಂದು ನಮ್ಮೂರ ಹನುಮೋತ್ಸವ ಕಾರ್ಯಕ್ರಮವು ಶ್ರೀ ಮಾರುತಿ ಯುವಕರ ಸಂಘದಿಂದ ಅದ್ಧೂರಿಯಾಗಿ ನಡೆಯಲಿದೆ ಡಿ.೨೪ರಿಂದ ೩೦ರ ವರೆಗೆ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಕಾರ್ಯಕ್ರಮ ನಡೆಯುತ್ತಿವೆ. ಪಟ್ಟಣದ ಆಂಜನೇಯ ಬ್ಲಾಕಿನ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನದ ಆವರಣದಲ್ಲಿ ಸಾವಿರಾರು ಜನರಿಗೆ ಅನ್ನದಾಸೋಹ ಕಾರ್ಯಕ್ರಮವನ್ನು ಮಾಡಲಾಯಿತು.

ಬೆಳಿಗ್ಗೆ ೧೧ ಗಂಟೆಯಿಂದ ರಾತ್ರಿ ೮ ರ ರೆಗೆ ಅನ್ನದಾಸೋಹದಲ್ಲಿ ಜನರು ಪಾಲ್ಗೊಂಡಿದ್ದರು. ಇದಕ್ಕೂ ಮುನ್ನ ಭಕ್ತರು ಸಾರತಿ ಸಾಲಿನಲ್ಲಿ ಶ್ರೀ ಆಂಜನೇಯ ದರ್ಶನ ಪಡೆದು ಇಷ್ಟಾರ್ಥ ಪೂಜೆ ಸಲ್ಲಿಸಿದರು.
ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನದ ಮುಂದೆ ಶ್ರೀರಾಮ, ಲಕ್ಷ್ಮಣ ಮತ್ತು ಸೀತಾ ಮಾತೆಯ ಮೂರ್ತಿಯನ್ನು ಅರಳಿಕಟ್ಟೆಯ ಮೇಲೆ ಪ್ರತಿಷ್ಠಾಪಿಸಿ ವಿಶೇಷ ಪೂಜೆಯನ್ನು ಸಲ್ಲಿಸಲಾಯಿತು.

ಮುಂಜಾನೆಯ ಸಮಯದಲ್ಲಿ ಶ್ರೀ ಆಂಜನೇಯ ಮೂರ್ತಿಗೆ ಅಭಿಷೇಕ, ಕುಂಕುಮ ಅರ್ಚನೆ, ಕರ್ಪೂರದ ಆರತಿ ಮಾಡುವ ಮೂಲಕ ನೆರದಿದ್ದ ಭಕ್ತರಿಗೆ ಪ್ರಸಾದ ವಿಯೋಗ ಮಾಡಲಾಯಿತು.ರಾತ್ರಿವಿಡಿ ಶ್ರೀ ಆಂಜನೇಯ ಭಕ್ತಗೀತೆ ಮತ್ತು ಜಾನಪದ ಗೀತೆ ಹಾಡುವ ಕಾರ್ಯಕ್ರಮವನ್ನ ನಡೆಸಲಾಯಿತು. ತಾಲ್ಲೂಕು ಸೇರಿದಂತೆ ಹೊರ ತಾಲ್ಲುಕು ಜಿಲ್ಲೆಗಳಿಂದ ಆಗಮಿಸಿದ ಶ್ರೀ ಆಂಜನೇಯ ಸ್ವಾಮಿಯ ಭಕ್ತರು ಜಾನಪದ ಗೀತೆ ಕಾರ್ಯಕ್ರಮದಲ್ಲಿ ಭಾಗವಹಿಸಿದರು.ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಗೌತಮ್ ಜಾದವ್, ಮಂಜುನಾಥ್, ಮಾಜಿ ಪುರಸಭಾ ಸದಸ್ಯ ಎಸ್.ಯೋಗನಂದ, ಗುರುಪ್ರಸಾದ್, ವಿನಯ್ ಸೇರಿದಂತೆ ಇನ್ನಿತರರು ಹಾಜರಿದ್ದರು.

RELATED ARTICLES
- Advertisment -
Google search engine

Most Popular