ಕೆ.ಆರ್.ಪೇಟೆ: ತಾಲ್ಲೋಕಿನ ಶೀಳನೆರೆ ಹೋಬಳಿಯ ಸಿಂದುಘಟ್ಟಗ್ರಾಮ ಪಂಚಾಯತಿ ನೂತನ ಅಧ್ಯಕ್ಷೆಯಾಗಿ ಅಧಿಕಾರ ಸ್ವೀಕರಿಸಿದ ಶ್ರೀಮತಿ ಆಶಾಸೋಮಶೇಖರ್ ರವರು ತಮಗೆ ಮೀಸಲಾಗಿರುವ ಅಧ್ಯಕ್ಷರ ಕಚೇರಿಯ ಅವ್ಯವಸ್ಥೆ ಕಂಡು ಕೆಂಡಾಮಂಡಲವಾದರು ಸುಸಜ್ಜಿತವಾಗಿರಬೇಕಾದ ಅಧ್ಯಕ್ಷರ ಕೊಠಡಿಯಲ್ಲಿ ಸಿಮೆಂಟ್ ಸೇರಿದಂತೆ ಗಾರೆ ಕೆಲಸದ ಸಾಮಾಗ್ರಿಗಳನ್ನು ತುಂಬಲಾಗಿದ್ದು ಇದಕ್ಕೆ ಕಾರಣರಾದವರ ವಿರುಧ್ದ ಗುಡುಗಿದ್ದಾರೆ ಕೆಲವು ಕಾಮಗಾರಿಗಳು ಸದಸ್ಯರ ಗಮನಕ್ಕೆ ತರದೆ ನೆಡೆಯುತ್ತಿದ್ದು ಪಂಚಾಯಿತಿಯ ತಮ್ಮ ಕಛೇರಿಗೆ ಸಿಮೆಂಟ್ ಮತ್ತು ಸಾಮಾಗ್ರಿಗಳನ್ನು ತುಂಬಿದ ಗುತ್ತಿಗೆದಾರರು ಯಾರೆಂದು ತಿಳಿಯುವವರೆಗೂ ಅವರು ಬರುವವರೆಗೂ ತಮ್ಮ ಕಛೇರಿಯ ಬೀಗದ ಕೀಯನ್ನು ತಮ್ಮ ಬಳಿಯೆ ಇರುವುದಾಗಿ ತಿಳಿಸಿದ್ದಾರೆ ನೂತನ ಅಧ್ಯಕ್ಷರಾದ ಶ್ರೀಮತಿಆಶಾಸೋಮಶೇಖರ್ ರವರ ಕಾರ್ಯವೈಖರಿಯನ್ನು ತಮ್ಮ ಸಹೋದ್ಯೋಗಿ ಸದಸ್ಯರುಗಳು ಶ್ಲಾಘಿಸಿದ್ದಾರೆ ಈ ಗ್ರಾಮಪಂಚಾಯಿತಿಯಲ್ಲಿ ಅಧ್ಯಕ್ಷರ ಕಛೇರಿಗೆ ಬೆಲೆಯ ಇಲ್ಲವಾಗಿದ್ದು ಪ್ರಜಾಪ್ರಭುತ್ವಕ್ಕೆ ಮಾಡಿದ ಅವಮಾನವಾಗಿದೆ ಎಂದು ಅಧ್ಯಕ್ಷೆ ಆಶಾಸೋಮಶೇಖರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಸದಸ್ಯರಾದ ಕಾವ್ಯಗಿರೀಶ್, ಕ್ಯಾತನಹಳ್ಳಿಸೋಮಶೇಖರ್, ಸೋಮಶೇಖರ್,ಲಾವಣ್ಯಕುಮಾರ್,ರೂಪಮಹದೇವ್, ಸುಮಚಲುವರಾಜ್,ರಾಜೇಶ್ವರಿನರಸಿಂಹ, ನಂಜಪ್ಪ,ಇರ್ಫಾನ್,ಉಪಸ್ಥಿತರಿದ್ದರು