ರಾಮನಗರ: ರಾಮನಗರಜಿಲ್ಲಾ ಪಂಚಾಯಿತಿಯ ಸಂಪನ್ಮೂಲ ಕೇಂದ್ರದಲ್ಲಿಡಿ. ೨೭ರ ಬುಧವಾರ ರಾಮನಗರ ತಾಲ್ಲೂಕಿನ ಗ್ರಾಮ ಪಂಚಾಯತಿಗಳ ವ್ಯಾಪ್ತಿಯ ಶಿಶುಪಾಲನ ಕೇಂದ್ರದಕೇರ್ ಟೇಕರ್ಸಗಳ ತರಬೇತಿ ಕಾರ್ಯಕ್ರಮಕ್ಕೆ ಜಿಲ್ಲಾ ಪಂಚಾಯತ್ ಯೋಜನಾ ನಿರ್ದೇಶಕ ಮಂಜುನಾಥಸ್ವಾಮಿಅವರು ಭೇಟಿ ನೀಡಿಕೇರ್ ಟೇಕರ್ಸ್‌ಗಳಿಗೆ ಶಿಶು ಪಾಲನಾ ಕೇಂದ್ರದಲ್ಲಿ ಅನುಸರಿಸಬೇಕಾದ ಮಾರ್ಗಸೂಚಿ, ಪೋಷಣೆಯ ಬಗ್ಗೆ ಮಾರ್ಗದರ್ಶನ ನೀಡಿದರು.
ಈ ಸಂದರ್ಭದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮಾಸ್ಟರ್‌ಟ್ರೈನರ್, ಜಿಲ್ಲಾಪಂಚಾಯತ್‌ನ ನರೇಗಾ ಶಾಖೆಯ ಅಧಿಕಾರಿಗಳು ಹಾಗೂ ಎಲ್ಲಾಕೇರ್ ಟೇಕರ್ಸ್‌ಗಳು ಹಾಜರಿದ್ದರು.