ಮೈಸೂರು: ಕರ್ನಾಟಕ ಆರ್ಯ ವೈಶ್ಯ ಸಮುದಾಯ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕರಾದ ದೀಪಶ್ರೀ.ಕೆ ಅವರು ಮೈಸೂರು ಜಿಲ್ಲಾ ಕಛೇರಿಗೆ ಭೇಟಿ ನೀಡಿ ಫಲಾನುಭವಿಗಳ ಸಾಲದ ಕಡತಗಳನ್ನು ಪರಿಶೀಲಿಸಿದರು. ನಿಗಮದಿಂದ ಜಿಲ್ಲೆಯಲ್ಲಿ ಸ್ವಯಂಉದ್ಯೋಗ ನೇರಸಾಲ ಯೋಜನೆಯಡಿಯಲ್ಲಿ 2019-20 ರಿಂದ 2022-23 ನೇ ಸಾಲಿನವರೆಗೆ ಒಟ್ಟು 29 ಫಲಾನುಭವಿಗಳಿಗೆ 23,20,000 ರೂ.ಗಳ ಸಾಲ ಹಾಗೂ 5,80,000 ರೂ.ಗಳ ಸಹಾಯಧನದ ಸೌಲಭ್ಯ ನೀಡಿದ್ದು, ಈ ಫಲಾನುಭವಿಗಳ ಘಟಕಗಳಿಗೆ ಭೇಟಿ ನೀಡಿ ನಿಗಮದಿಂದ ಪಡೆದ ಸಾಲವನ್ನು ಬಳಕೆ ಮಾಡಿರುವ ಕುರಿತು ಪರಿಶೀಲಿಸಿದರು.
ನಿಗಮದಿಂದ ಪಡೆದ ಸಾಲವನ್ನು ಆರ್ಥಿಕ ಚಟುವಟಿಕೆಗಳನ್ನು ಕೈಗೊಳ್ಳುವುದರ ಮೂಲಕ ಆರ್ಥಿಕವಾಗಿ ಅಭಿವೃದ್ಧಿಯಾಗಬೇಕು. ಪಡೆದ ಸಾಲವನ್ನು ಪ್ರತಿ ತಿಂಗಳು ತಪ್ಪದೇ ಮರುಪಾವತಿ ಆಪ್ ಬಳಸಿ ಆನ್‌ಲೈನ್ ಪಾವತಿ ಮಾಡುವಂತೆ ತಿಳಿಸಿದರು. ಈ ಸಂದರ್ಭದಲ್ಲಿ ಕರ್ನಾಟಕ ಆರ್ಯವೈಶ್ಯ ಸಮುದಾಯ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕರಾದ ಹೆಚ್. ಎ ಶೋಭ ಸೇರಿದಂತೆ ಸಿಬ್ಬಂದಿಗಳು ಭಾಗವಹಿಸಿದ್ದರು.
