ಮಂಡ್ಯ: ಮತ್ತೆ ಅಮೇರಿಕಾಗೆ ಮೇಲುಕೋಟೆ ಕ್ಷೇತ್ರದ ಶಾಸಕ ದರ್ಶನ್ ಪುಟ್ಟಣಯ್ಯ ಪ್ರಯಾಣ ಬೆಳೆಸಿದ್ದು, ಶಾಸಕರಾಗಿ ಆಯ್ಕೆಯಾದ ಏಳೇ ತಿಂಗಳಲ್ಲಿ ನಾಲ್ಕು ಬಾರಿ ಅಮೇರಿಕಾಗೆ ಹೋಗಿದ್ದಾರೆ.
ಇದೇ ತಿಂಗಳ 23 ರಂದು ಅಮೇರಿಕಾಗೆ ತೆರಳಿರೊ ದರ್ಶನ್ ಪುಟ್ಟಣಯ್ಯ, ಜನವರಿ 9 ರಂದು ವಾಪಸ್ಸಾಗಿದ್ದರು. ಇದೀಗ ನಾಲ್ಕನೇ ಬಾರಿ ಅಮೇರಿಕಾಗೆ ತೆರಳಿದ್ದಾರೆ.
ಚುನಾವಣೆಗು ಮೊದಲು ಅಮೇರಿಕಾದ ಕಂಪನಿ ಮಾರಾಟ ಮಾಡಿ ಇಲ್ಲೇ ಬಂದು ನೆಲೆಸ್ತಿನಿ ಎಂದು ದರ್ಶನ್ ಪುಟ್ಟಣಯ್ಯ ತಿಳಿಸಿದ್ದರು. ಆದರೆ ಈಗ ಪದೇ ಪದೇ ಅಮೇರಿಕಾಗೆ ತೆರಳುವ ಶಾಸಕರ ಮೇಲೆ ಮತದಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ದರ್ಶನ್ ಪುಟ್ಟಣಯ್ಯ ಪದೇ ಪದೇ ಅಮೇರಿಕಾ ಪ್ರವಾಸಕ್ಕೆ ತೆರಳ್ತಿರೋದು ಬಿಸ್ ನೆಸ್ ಮಾಡುವುದಕ್ಕಾಗಿ ಎಂದು ಮತದಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಶಾಸಕರು ರೈಲಿನಲ್ಲಿ, ಆಟೋದಲ್ಲಿ ಪ್ರಯಾಣ ಮಾಡ್ತಾರೆ ಎಂದು ಪೋಟೊ ಹಾಕೋರು ಅವರು ವಿಮಾನದಲ್ಲಿ ಓಡಾಡೋದ್ನೂ ಹಾಕಬೇಕಲ್ವಾ ಎಂದು ಕಿಡಿಕಾರಿದ್ದಾರೆ.
ಅಮೇರಿಕಾದಲ್ಲಿ ಬಿಸ್ ನೆಸ್ ಮಾಡೊ ಬದಲು ಆ ಕಂಪನಿಯನ್ನ ಇಲ್ಲೆ ಸ್ಥಾಪಿಸಿದ್ರೆ ಇಲ್ಲಿಯವರಿಗೂ ಕೆಲಸ ಕೊಟ್ಟಂಗೆ ಆಗುತ್ತೆ. ಶಾಸಕರು ಇಲ್ಲೇ ಇದ್ದಂಗೆ ಆಗುತ್ತೆ. ಜನರ ಸಮಸ್ಯೆ ಕೇಳಬೇಕಾದವರು ಪದೇ ಪದೇ ಅಮೇರಿಕಾಗೆ ಹೋದ್ರೆ ನಮ್ಮ ಸಮಸ್ಯೆ ಯಾರ ಹತ್ರ ಹೇಳ್ಕೊಬೇಕು ಎಂದು ಮೇಲುಕೋಟೆ ಕ್ಷೇತ್ರದ ಮತದಾರರು ಆಕ್ರೋಶ ಹೊರಹಾಕಿದ್ದಾರೆ.