ಮೈಸೂರು : ದಿ ಮೈಸೂರು ಸಿಟಿ ಶ್ರೀ ಶಿವಛತ್ರಿಪತಿ ಕೋ -ಅಪರೇಟಿವ್ ಸೊಸೈಟಿವತಿಯಿಂದ ೨೦೨೪ನೇ ವರ್ಷದ ದಿನಚರಿ ದಿನದರ್ಶಿಕೆಯನ್ನು ಸೊಸೈಟಿಯ ಅಧ್ಯಕ್ಷ ಕೆ.ನಾಗೇಂದ್ರರಾವ್( ಅವಕಾಡೆ) ಬಿಡುಗಡೆಗೊಳಿಸಿದರು. ನಜರ್ ಬಾದ್ ನ ಸೊಸೈಟಿ ಕಚೇರಿ ಆವರಣದಲ್ಲಿ ಕ್ಯಾಲೆಂಡರ್ ಬಿಡುಗಡೆಗೊಳಿಸಿ ಮಾತನಾಡಿದ ಅವರು, ಸಂಘವು ಸಾಕಷ್ಟು ಅಭಿವೃದ್ಧಿ ಹಂತದಲ್ಲಿ ಸಾಗುತ್ತಿದೆ. ಕಟ್ಟಡ ಸೇರಿ ಹಲವು ಅಭಿವೃದ್ಧಿ ಕಾರ್ಯ ನಡೆಯುತ್ತಿದ್ದು, ಮುಂದೆಯೂ ಸದಸ್ಯರ ಸಹಕಾರ ದೊರೆತರೆ ಮತ್ತಷ್ಟು ಅಭಿವೃದ್ಧಿ ಕಾರ್ಯ ಮಾಡುವುದಾಗಿ ಹೇಳಿದರು.
ಇದೇ ವೇಳೆ ಛತ್ರಪತಿ ಶಿವಾಜಿ ಹಾಗೂ ಅಂಭಾಭವಾನಿಯವ ಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು.
ಇದೇ ವೇಳೆ ಮುಂದಿನ ಅಭಿವೃದ್ಧಿ ಕಾರ್ಯಗಳ ಕುರಿತು ಸದಸ್ಯರಿಂದ ಮಾಹಿತಿ ಸಂಗ್ರಹಿಸಿ ಎಲ್ಲವನ್ನೂ ಹಂತ ಹಂತವಾಗಿ ಅಭಿವೃದ್ಧಿ ಪಡಿಸುವ ಭರವಸೆ ನೀಡಿದರು. ಉಪಾಧ್ಯಕ್ಷ ಕೃಷ್ಣಾಜಿರಾವ್ ಗಾಯಕ್ ವಾಡ್,
ನಿರ್ದೇಶಕರು ಗಳಾದ ಎಸ್.ವೆಂಕೋಬರಾವ್ ಕಿರ್ ದಂತ್, ಸುನೀಲ್ ಎನ್.ಸಂಕಪಾಳ್, ಹರಿಹರಾವ್ ಸಿಂಧೆ, ಜಿ.ಸುರೇಶ್ ಬಾಬು, ಎಂ.ಎನ್.ತುಕಾರಾಮ್ ರಾವ್, ವಿ.ಮೀರಾಬಾಯಿಕೇಸರ್ ಕರ್, ವನಿತಾಬಾಯಿ, ಕಾನೂನು ಸಲಹೆಗಾರ ವಕೀಲ ಅನಿಲ್ ಕುಮಾರ್ ಸಿಂಧೆ, ಕಾರ್ಯದರ್ಶಿ ಸುನೀತ, ಕ್ಯಾಷಿಯರ್ ಜಿ.ಕಿರಣ್ ಉಪಸ್ಥಿತರಿದ್ದರು.