ರಾಮನಗರ: ಪರಿಷತ್ ಸದಸ್ಯ ಸಿ.ಪಿ ಯೋಗೇಶ್ವರ್ ಭಾವನ ಕೊಲೆ ಪ್ರಕರಣವನ್ನು ಸಿಓಡಿಗೆ ಹಸ್ತಾಂತರ ಮಾಡಿ ಎಡಿಜಿಪಿ ಹಿತೇಂದ್ರ ಆದೇಶ ಹೊರಡಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ಕು ಮಂದಿಯನ್ನು ಚನ್ನಪಟ್ಟಣ ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ.
ಸಿಒಡಿ ಪೊಲೀಸರು ಚನ್ನಪಟ್ಟಣ ಜೆಎಂಎಫ್ ಸಿ ನ್ಯಾಯಾಲಯಕ್ಕೆ ಆರೋಪಗಳನ್ನು ಹಾಜರುಪಡಿಸಿ ವಶಕ್ಕೆ ಪಡೆಯಲಿದ್ದಾರೆ.
ಸಿಓಡಿ ಡಿವೈಎಸ್ಪಿ ಮಲ್ಲಿಕಾರ್ಜುನ್ ನೇತೃತ್ವದಲ್ಲಿ ಚನ್ನಪಟ್ಟಣ ನ್ಯಾಯಾಲಯಕ್ಕೆ ಸಿಒಡಿ ತಂಡ ಆಗಮಿಸಿದ್ದಾರೆ. ಇಂದೇ ಆರೋಪಿಗಳ ಕಡತ ಸಿಇಡಿಗೆ ಹಸ್ತಾಂತರವಾಗಲಿದೆ.
ಚನ್ನಪಟ್ಟಣ ಗ್ರಾಮಾಂತರ ಪಿಎಸ್‌ಐ ಕೃಷ್ಣ ನೇತೃತ್ವದಲ್ಲಿ A1 ಮುರುಗೇಶ್ (42), A2 ಪ್ರಭಾಕರ್ (27), A3 ಮಧನ್ ಕುಮಾರ್ (33), A4 ರಾಧ (40) ಎಂಬುವವರನ್ನ ಬಂಧಿಸಲಾಗಿದೆ.
ತಮಿಳುನಾಡಿನ ಧರ್ಮಾಪುರಿ ಜಿಲ್ಲೆಯ ಮೂಲದ ನಾಲ್ವರು ಆರೋಪಿಗಳು ವಿಚಾರಣೆ ವೇಳೆ ಅನೈತಿಕ ಸಂಬಂಧದಿಂದಾಗಿ ಕೊಲೆ ಮಾಡಿರುವದಾಗಿ ಒಪ್ಪಿಕೊಂಡಿದ್ದಾರೆ.