ಗುಂಡ್ಲುಪೇಟೆ : ಪಟ್ಟಣದಲ್ಲಿರುವ ಕಾರ್ಮಿಕ ಇಲಾಖೆ ಕಚೇರಿಯಲ್ಲಿ ಕಾರ್ಮಿಕ ನೀರಿಕ್ಷಕರಾದ ನಾರಾಯಣ್ ಮೂರ್ತಿ ರವರು ಮಾಧ್ಯಮದೊಂದಿಗೆ ಮಾತನಾಡಿ ಗುಂಡ್ಲುಪೇಟೆ ವೃತ್ತದಲ್ಲಿ ಕಟ್ಟಡ ನಿರ್ಮಾಣ ಕಾರ್ಮಿಕರಲ್ಲದವರು ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕ ಕಲ್ಯಾಣ ಮಂಡಳಿಯಲ್ಲಿ ನಕಲಿ ದಾಖಲೆಗಳನ್ನು ಸಲ್ಲಿಸಿ ನೋಂದಣಿಯಾಗಿದ್ದು, ಇಂತಹ ನಕಲಿ ಕಾರ್ಮಿಕರು ತಾವೇ ಖುದ್ದಾಗಿ ಕಾರ್ಮಿಕ ನೀರಿಕ್ಷಕರ ಕಚೇರಿಗೆ ಭೇಟಿ ನೀಡಿ ಮೂಲ ಗುರುತಿನ ಚೀಟಿಯನ್ನು ಹಿಂತಿರುಗಿಸುವ ಮೂಲಕ ತಮ್ಮ ನೋಂದಣಿಯನ್ನು ರದ್ದುಪಡಿಸಬೇಕೆಂದು ಮನವಿ ಮಾಡಿದರು.
ಮಂಡಳಿಯ ವತಿಯಿಂದ ನಕಲಿ ಅನರ್ಹ ಕಾರ್ಮಿಕರನ್ನ ಪತ್ತೆಹಚ್ಚಲು ರಾಜ್ಯದಾದ್ಯಂತ ಪರಿಶೀಲನೆಯನ್ನು ನಡೆಸಲಾಗುತ್ತಿದೆ. ಪರಿಶೀಲನೆಯ ಸಮಯದಲ್ಲಿ ಅನರ್ಹರು ನೋಂದಾಣಿಯಾಗಿರುವು ದು ಮಂಡಳಿಯ ವತಿಯಿಂದ ಇಂತಹ ಕಂಡುಬಂದಲ್ಲಿ ಅವರ ನೋಂದಣಿಯನ್ನು ಕಾರ್ಮಿಕರನ್ನು ರದ್ದುಪಡಿಸಿ,ಅವರು ಮಂಡಳಿಯಿಂದ ರಾಜ್ಯದಾದ್ಯಂತ ಇಲ್ಲಿಯವರೆಗೂ ಪಡೆದ ಎಲ್ಲಾ ಸೌಲಭ್ಯಗಳನ್ನು ದಂಡಸಹಿತ ಹಿಂಪಡೆಯಲು ಕ್ರಮವಹಿಸಲಾಗುವುದು ಹಾಗೂ ಅವರ ವಿರುದ್ಧ ಕಾನೂನು ರೀತ್ಯಾ ಕಠಿಣ ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದರು.
ಕಾರ್ಮಿಕ ಇಲಾಖೆ ಸೌಲಭ್ಯ ಪಡೆಯಲು ಮಧ್ಯವರ್ತಿಗಳನ್ನು ದೂರವಿಟ್ಟು, ತಾವೇ ಕಛೇರಿಗೆ ನೇರವಾಗಿ ಭೇಟಿ ನೀಡಿ ಮಾಹಿತಿ ತಿಳಿದು ಅರ್ಹರು ಇಲಾಖೆಯ ಸೌಲಭ್ಯ ಪಡೆಯಿರಿ.ಇ- ಶ್ರಮ್ ಕಾರ್ಡ್ ಪಡೆಯಲು ಅಸಂಘಟಿತ ಕಾರ್ಮಿಕರು, ಪತ್ರಿಕೆ ವಿತರಕರು ಅರ್ಹರಿದ್ದು ಇದರ ಸದುಪಯೋಗವನ್ನು ಎಲ್ಲಾರು ಪಡೆದುಕೊಳ್ಳಬೇಕು ಎಂದು ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಕಚೇರಿ ಸಿಬ್ಬಂದಿ ಗಣೇಶ್ ಹಾಜರಿದ್ದರು.