ಮದ್ದೂರು: ಪಟ್ಟಣದ ಲೀಲಾವತಿ ಬಡಾವಣೆಯ ಎಚ್.ಕೆ. ಮರಿಯಪ್ಪ ಕಾಮೆಂಟ್ ಆವರಣದಲ್ಲಿ ಎಂ.ಎಚ್. ಚನ್ನೇಗೌಡ ವಿದ್ಯಾನಿಲಯದ ವತಿಯಿಂದ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಹಾಗೂ ಶಿಕ್ಷಣ ತಜ್ಞ ಎಚ್.ಕೆ.ವೀರಣ್ಣಗೌಡ ಅವರ ಹೆಸರಿನಲ್ಲಿ ಹೆಚ್ ಕೆವಿ ಹಬ್ಬ ಹಾಗೂ ಅವರ ಸಹೋದರ ಎಚ್.ಕೆ.ಮರಿಯಪ್ಪ ನವರ ಪರಿಷ್ಕೃತ ಅಭಿನಂದನಾ ಗ್ರಂಥ ಹೊನ್ನಕಳಸ ಕಾಯಕ್ರಮವನ್ನು ಡಿಸೆಂಬರ್ 30ರಂದು ಹಮ್ಮಿಕೊಳ್ಳಲಾಗಿದೆ ಎಂದು ಎಂ.ಹೆಚ್.ಚನ್ನೇಗೌಡ ವಿದ್ಯಾಸಂಸ್ಥೆಯ ಅಧ್ಯಕ್ಷ ಎಂ ಸ್ವರೂಪ್ ಚಂದ್ ತಿಳಿಸಿದರು.
ಪಟ್ಟಣದಲ್ಲಿ ನಡೆದ ಪತ್ರಿಕಾ ಗೋಷ್ಟಿಯಲ್ಲಿ ಮಾತನಾಡಿದ ಅವರು ಸದರಿ ಕಾರ್ಯಕ್ರಮವನ್ನ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಕೆ.ಟಿ. ಚಂದು ಅವರ ಮಾರ್ಗದರ್ಶನದಲ್ಲಿ ಅನಿವಾಸಿ ಭಾರತೀಯ ಡಾ. ಎಚ್ .ಕೆ. ಮರಿಯಪ್ಪ ಉದ್ಘಾಟಿಸಲಿದ್ದು, ಸಂಯುಕ್ತ ಕರ್ನಾಟಕ ದಿನ ಪತ್ರಿಕೆಯ ಉಪ ಮುಖ್ಯ ಸಂಪಾದಕ ರಾಜು ಮಳವಳ್ಳಿ ರವರು ಮುಖ್ಯ ಭಾಷಣವನ್ನ ಮಾಡಲಿದ್ದಾರೆ , ಸದರಿ ಕಾರ್ಯಕ್ರಮದಲ್ಲಿ ಅಥಿತಿಗಳಾಗಿ ಶಿಕ್ಷಣ ಇಲಾಖೆ ಉಪ ನಿರ್ದೇಶಕರಾದ ಟಿ. ಚಲುವಯ್ಯ, ಎಚ್. ಶಿವರಾಮೇಗೌಡ, ಬಿಇಒ ಸಿ.ಎಚ್. ಕಾಳಿರಯ್ಯ, ಪುರಸಭಾ ಸದಸ್ಯರಾದ ಎಂ.ಐ.ಪ್ರವೀಣ್, ಎಸ್. ಮಹೇಶ್ ಎಂ.ಬಿ. ಸಚಿನ್, ಪ್ರಮೀಳಾ, ಪ್ರಿಯಾಂಕ ಪಿ ಅಪ್ಪುಗೌಡ , ಕೋಕಿಲ ಅರುಣ್ ಹಾಗೂ ಅನಿವಾಸಿ ಭಾರತೀಯರುಗಳಾದ ದರ್ಶ್ ಮರಿಯಪ್ಪ, ಕ್ಯಾರೊಲಿನ್, ಕೋಲ್, ಏಡನ್, ಏವನ್ ಸೇರಿದಂತೆ ಇತರರು ಭಾಗವಹಿಸಲಿದ್ದು, ಸಂಸ್ಧೆಯ ಪೋಷಕರುಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಮನವಿ ಮಾಡಿದ್ದಾರೆ.
ಸುದ್ದಿ ಗೋಷ್ಠಿಯಲ್ಲಿ ಎಂ.ಹೆಚ್.ಚನ್ನೇಗೌಡ ವಿದ್ಯಾಸಂಸ್ಧೆ ಕಾರ್ಯದರ್ಶಿ ಸಿ.ಅಪೂರ್ವಚಂದ್ರ ಪ್ರಾಂಶುಪಾಲ ಯು.ಎಸ್.ಶಿವಕುಮಾರ್, ಆಡಳಿತಾಧಿಕಾರಿ ಯು.ಎಸ್.ರವಿ, ಮುಖ್ಯ ಶಿಕ್ಷಕರಾದ ಎನ್.ಕೃಷ್ಣ, ಎಂ.ಟಿ.ಚಂದ್ರಶೇಖರ್, ಕೆ.ಎನ್.ವರದರಾಜು ಹಾಜರಿದ್ದರು.