ಕೆ.ಆರ್.ನಗರ: ಸಾಲಿಗ್ರಾಮ ತಾಲೂಕಿನ ಹೊಸೂರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಜನವರಿ ಅಂತ್ಯದ ವೇಳೆಗೆ ಸ್ಥಗಿತ ಗೊಂಡಿರುವ ಹೆರಿಗೆ ಸೌಲಭ್ಯವನ್ನು ಒದಗಿಸಲು ಕ್ರಮಕೈಗೊಳ್ಳಲಾಗುವುದು ಎಂದು ಕೆ.ಆರ್.ನಗರ ತಾಲೂಕು ಆರೋಗ್ಯಾಧಿಕಾರಿ ಡಾ.ನಟರಾಜು ಹೇಳಿದರು
ಸಾಲಿಗ್ರಾಮ ತಾಲೂಕಿನ ಹೊಸೂರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ತಮಗೆ ಕೇಂದ್ರದ ವ್ಯಾಪ್ತಿಯ ಆರೋಗ್ಯ ಕೇಂದ್ರಗಳ ವೈದ್ಯರು ಮತ್ತು ಸಿಬ್ಬಂದಿಗಳು ಏರ್ಪಡಿಸಿದ್ದ ಸನ್ಮಾನವನ್ನು ಸ್ವೀಕರಿಸಿ ಮಾತನಾಡಿದರು.
ಹೆರಿಗೆಗಾಗಿ ಈ ಭಾಗದ ಮಹಿಳೆಯರು ಸಾಲಿಗ್ರಾಮ, ಕೆ.ಆರ್.ನಗರಕ್ಕೆ ತೆರಳಬೇಕಾದ ಅನಿವಾರ್ಯತೆ ಇದ್ದು ಇದನ್ನು ತಪ್ಪಿಸಲು ಈ ಆರೋಗ್ಯ ಕೇಂದ್ರಕ್ಕೆ ಮತ್ತಷ್ಟು ಸಿಬ್ಬಂದಿಗಳು, ಔಷದ ಉಪಚಾರಗಳನ್ನುಒದಗಿಸಿ ಇಲ್ಲಿಯೇ ಹೆರಿಗೆ ಸೌಲಭ್ಯವನ್ನು ಕಲ್ಪಿಸಲು ಜಿಲ್ಲಾ ಆರೋಗ್ಯಾಧಿಕಾರಿಗಳ ಸಹಕಾರ ದಿಂದ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ತಿಳಿಸಿದರು.
ಹೊಸೂರು ಆರೋಗ್ಯ ಕೇಂದ್ರವು ಸಾಕಷ್ಟು ಗ್ರಾಮಗಳ ದೊಡ್ಡ ವ್ಯಾಪ್ತಿಯನ್ನು ಹೊಂದಿದ್ದು, ಅದ್ದರಿಂದ ಇದನ್ನು ಸಮುದಾಯ ಆರೋಗ್ಯ ಕೇಂದ್ರವನ್ನಾಗಿ ಮಾಡಲು ಪ್ರಸ್ತಾವನೆಯನ್ನು ಆರೋಗ್ಯ ಇಲಾಖೆಗೆ ಸಲ್ಲಿಸುವುದಾಗಿ ತಿಳಿಸಿದ ಡಾ.ನಟರಾಜು ಇಲ್ಲಿ ಖಾಲಿ ಇರುವ 19 ಮಂದಿ ಸಿಬ್ಬಂದಿಗಳ ನೇಮಕ್ಕೆ ಕ್ರಮ ಕೈಗೊಳ್ಳಲಾಗುವುದು ಹೇಳಿದರು.
ಇಲ್ಲಿರುವ ಸಿಬ್ಬಂದಿಗಳ ವಸತಿ ಗೃಹಗಳು ಸಂಪೂರ್ಣವಾಗಿ ಶಿಥಿಲಗೊಂಡಿದ್ದು, ಅವುಗಳನ್ನು ಕೆಡವಿಹಾಕಿ ಹೊಸದಾಗಿ ವಸತಿ ಗೃಹಗಳನ್ನು ನಿರ್ಮಾಣ ಮಾಡಲು ಅನುದಾನ ಮತ್ತು ಅತಿ ಶೀಘ್ರದಲ್ಲಿಯೇ ಹೊಸ ಅಂಬುಲೈನ್ಸ್ ಅನ್ನು ನೀಡುವಂತೆ ಶಾಸಕ ಡಿ.ರವಿಶಂಕರ್ ಅವರಿಗೆ ಪ್ರಸ್ತಾವನೆ ಸಲ್ಲಿಸುವುದಾಗಿ ತಿಳಿಸಿದರು.
ಕ್ಲಿನಿಕ್ ಗಳಿಗೆ ಭೇಟಿ : ಇದಕ್ಕು ಮೊದಲು ಹೊಸೂರಿನ ಹಳಿಯೂರು ಬಡಾವಣೆಯಲ್ಲಿರುವ ವಿವಿಧ ಕ್ಲೀನಿಕ್ ಗಳಿಗೆ ಬೇಟಿ ನೀಡಿದ ಡಾ.ನಟರಾಜು ಖಾಸಗಿ ಕ್ಲಿನಿಕ್ ನಡೆಸಲು ಕೆ.ಪಿ.ಎಂ.ಇ.ಪರವಾನಿಗೆ ಪಡೆದಿರುವ ದಾಖಲೆ, ವೈದ್ಯರು ತಾವು ಪಡೆದ ವೈದ್ಯ ಪ್ರಮಾಣ ಪತ್ರ ಪ್ರದರ್ಶನ ಮಾಡುವುದು ಜತಗೆ ಚಿಕಿತ್ಸೆಗೆ ದರ ಪಟ್ಟಿ ಹಾಕಿ ತಮ್ಮಲ್ಲಿ ಬರುವ ಎಲ್ಲಾ ರೋಗಿಗಳ ಬಗ್ಗೆ ರಿಜಿಸ್ಟ್ರಾರ್ ನಲ್ಲಿ ದಾಖಲು ಮಾಡಿ ಅಧಿಕಾರಿಗಳು ತಪಾಸಣೆ ಮತ್ತು ವಿಚಾರಣೆಗೆ ಬಂದಾಗ ಈ ದಾಖಲೆಗಳು ಅತ್ಯವಶ್ಯ. ಇಲ್ಲದಿದ್ದರೆ ಕ್ಲಿನಿಕ್ ಮುಚ್ಚಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ವೈದ್ಯರಾದ ಸುನಂದ, ಎ.ವಿ.ಸಚಿನ್, ಶಿವಕುಮಾರಿ, ಎಸ್.ಎಂ.ಸಚಿನ್, ಹಿರಿಯ ಆರೋಗ್ಯ ನಿರೀಕ್ಷಕ ಕೆ.ವಿ.ರಮೇಶ್, ಬಿಪಿಎಂ ರೇಖಾ,ಎಲ್.ಎಚ್.ವಿ.ನಾಗವೇಣಿ,
ಆರೋಗ್ಯ ನಿರೀಕ್ಷಣಾಧಿಕಾರಿಗಳಾದ ಚಂದ್ರು , ಹೆಮೇಶ್ , ಭಾರತ್ ರಾವ್ , ರವಿ , ಭವ್ಯ , ಸಮುದಾಯ ಆರೋಗ್ಯ ಅಧಿಕಾರಿಗಳಾದ ಯೋಗೇಶ್, ಸಚಿನ್ , ರಂಗಸ್ವಾಮಿ, ಚೇತನ್ , ರಕ್ಷೀತಾ, ತೇಜಸ್ವಿನಿ, ಸಮ್ರೀನ್, ಸುಧಾ, ಸಬ್ನಮ್, ಸಹನಾ , ರಶ್ಮಿ ,ಸಿಬ್ಬಂದಿಗಳಾದ ಯಶವಂತ್, ರಂಗಮ್ಮ, ನಾರಾಯಣಮ್ಮ,ಆಶಾ ಕಾರ್ಯಕರ್ತೆಯರಾದ ರೂಪ, ಶೋಭ, ಸುಮತಿ,ಚೆನ್ನಾಜಮ್ಮ,ರೇಣುಕ,ಲತಾ,ಸುಜಾತ,ಜ್ಯೋತಿ,ಸರೋಜ,ಸೌಭಾಗ್ಯ ಸೇರಿದಂತೆ ಮತ್ತಿತರರು ಹಾಜರಿದ್ದರು.