ಗುಂಡ್ಲುಪೇಟೆ: ಪಟ್ಟಣದ ವಿಜಯ ನಾರಾಯಣ ಸ್ವಾಮಿ ದೇವಸ್ಥಾನದಲ್ಲಿ ತಾಲೂಕು ಬ್ರಾಹ್ಮಣ ಸಭಾ ವತಿಯಿಂದ ೨೦೨೪ನೇ ನೂತನ ವರ್ಷದ ಕ್ಯಾಲೆಂಡರ್ ಅನ್ನು ಬ್ರಾಹ್ಮಣ ಮಹಾಸಭಾದ ತಾಲೂಕು ಅಧ್ಯಕ್ಷ ಕೆ.ವಿ.ಗೋಪಾಲಕೃಷ್ಣ ಭಟ್ಟ ಬಿಡುಗಡೆ ಗೊಳಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಕೆ.ವಿ.ಗೋಪಾಲಕೃಷ್ಣ ಭಟ್ಟ, ತಾಲೂಕಿನಲ್ಲಿ ಬ್ರಾಹ್ಮಣ ಸಮುದಾಯ ಸಂಘಟಿಸುವ ಮೂಲಕ ಸಂಘ ರಚನೆ ಮಾಡಿ ಆರು ವರ್ಷ ಕಳೆದಿದೆ. ಉತ್ತಮ ರೀತಿಯಲ್ಲಿ ಸಂಘ ಕಾರ್ಯ ನಿರ್ವಹಣೆ ಮಾಡುವ ಮೂಲಕ ರಾಜ್ಯಮಟ್ಟದಲ್ಲಿ ಅತೀ ಹೆಚ್ಚು ಸದಸ್ಯರನ್ನು ನೋಂದಣಿ ಮಾಡಿದ ಹೆಗ್ಗಳಿಕೆ ತಾಲೂಕಿಗೆ ಸಲ್ಲುತ್ತದೆ ಎಂದು ತಿಳಿಸಿದರು.
ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ವತಿಯಿಂದ ಜ.೬ ಮತ್ತು ೭ರಂದು ಬೆಂಗಳೂರಿನ ಶೃಂಗೇರಿ ಶಂಕರಮಠದ ಅವರಣ ಶಂಕರಪುರದಲ್ಲಿರುವ ಶ್ರೀ ಭಾರತೀ ತೀರ್ಥ ಸಭಾಭವನದಲ್ಲಿ ತೃತೀಯ ವರ್ಷದ ರಾಜ್ಯಮಟ್ಟದ ವಿಪ್ರ ಮಹಿಳಾ ಬಳಗದ ಸಮ್ಮೇಳನ ಹಮ್ಮಿಕೊಳ್ಳಲಾಗಿದೆ. ಜಿಲ್ಲೆ ಹಾಗೂ ತಾಲೂಕಿನ ವಿಪ್ರ ಮಹಿಳಾ ಬಳಗದ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ಮೂಲಕ ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು.
ಈ ವೇಳೆ ಮಹಿಳಾ ಸಂಘದ ಅಧ್ಯಕ್ಷರಾದ ಮಲಾ ನಾಗರಾಜು, ಶಾರದ ಸತ್ಸಂಗ ಸಮಾಜದ ಅಧ್ಯಕ್ಷರಾದ ಗಾಯತ್ರಿ ಅನಂತ್, ಕೌಂಡಿನ್ಯ ವಿಪ್ರಬಳಗ ಅಧ್ಯಕ್ಷರಾದ ಅನಂದಕುಮಾರ್, ಉಪಾಧ್ಯಕ್ಷ ಮಂಜುನಾಥ್, ರವಿಕಾಂತ್, ನಾಗರಾಜಶರ್ಮ, ಪಿ.ಎಸ್.ಶ್ರೀನಿವಾಸ ಮೂರ್ತಿ, ರಮೇಶ್ ಮೇಷ್ಟ್ರು, ಅನಂತ ಕೃಷ್ಣ, ಶೇಶಾದ್ರಿ ಅಯ್ಯಂಗಾರ್, ಸುರೇಶ್ ಮೇಷ್ಟ್ರು, ಎನ್.ರಾಜೇಶ್ ಭಟ್ಟ, ಹರೀಶ್ ಕುಮಾರ್, ವಿಶ್ವನಾಥ್ ಭಾರದ್ವಾಜ್, ಭಾಷ್ಯಂ ಅಯ್ಯಂಗಾರ್, ಮಹಿಳಾ ಸದಸ್ಯರಾದ ಲಕ್ಷ್ಮೀ ಅಶ್ವಥ್, ಸೌಮ್ಯ ಶ್ರೀಕಂಠಮೂರ್ತಿ, ಅನುಪಮ, ಮಂಜುಳ, ಭಾರತಿ, ಮಮತ ರಮೇಶ್, ಬಿ.ಆರ್.ಸೌಮ್ಯ ರಾಜೇಶ್, ಭಾಗ್ಯಮ್ಮ ಸೇರಿದಂತೆ ಇತರರು ಹಾಜರಿದ್ದರು.