Sunday, April 20, 2025
Google search engine

Homeರಾಜ್ಯಸುದ್ದಿಜಾಲರಾಷ್ಟ್ರ ಮಟ್ಟದ ಟೇಕ್ವಾಂಡೋ ಸ್ಪರ್ಧೆಯಲ್ಲಿ ರಾಮನಗರದ ಶಾನ್ವಿಗೆ ದ್ವಿತೀಯ ಸ್ಥಾನ

ರಾಷ್ಟ್ರ ಮಟ್ಟದ ಟೇಕ್ವಾಂಡೋ ಸ್ಪರ್ಧೆಯಲ್ಲಿ ರಾಮನಗರದ ಶಾನ್ವಿಗೆ ದ್ವಿತೀಯ ಸ್ಥಾನ

ರಾಮನಗರ: ಬೆಂಗಳೂರಿನ ಕೋರಮಂಗಲ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ೬ ರಿಂದ ೮ ವರ್ಷದೊಳಗಿನ ರಾಷ್ಟ್ರ ಮಟ್ಟದ ಟೇಕ್ವಾಂಡೋ ಸ್ಪರ್ಧೆಯಲ್ಲಿ ರಾಮನಗರದ ಶಾನ್ವಿ ದ್ವಿತೀಯ ಸ್ಥಾನ ಪಡೆದು ಬೆಳ್ಳಿ ಪದಕ ಗಳಿಸಿದ್ದಾರೆ.
ರಾಷ್ಟ್ರ ಮಟ್ಟದ ಸ್ಪರ್ಧೆಯಲ್ಲಿ ೨೨ ರಾಜ್ಯದ ೨೦೦೦ ಸ್ಪರ್ಧಿಗಳು ಭಾಗಿಯಾಗಿದ್ದರು. ಇದರಲ್ಲಿ ರಾಜ್ಯದ ೩೦೦ ಮಂದಿ ಸ್ಪರ್ಧಿಗಳು ಇದ್ದರು. ಕೇರಳ, ಪಶ್ಚಿಮ ಬಂಗಳ, ದೆಹಲಿ ರಾಜ್ಯದ ಪ್ರತಿಸ್ಪರ್ಧಿಗಳ ವಿರುದ್ಧ ಜಯಗಳಿಸಿದ್ದ ಶಾನ್ವಿಗೆ ಅಂತಿಮ ಪಂದ್ಯದಲ್ಲಿ ಕರ್ನಾಟಕದವರೆ ಎದುರಾಳಿಯಾಗಿದ್ದರು. ಕೊನೆಯ ಪಂದ್ಯದ ಮೊದಲ ಮೂರು ಸುತ್ತು ಟೈ ಆಗಿತ್ತು. ಹಾಗಾಗಿ ಅಂಫೈರ್ ಗೋಲ್ಡನ್ ಪಾಯಿಂಟ್ ನೀಡಿದ್ದರು. ಈ ಸುತ್ತಿನಲ್ಲಿ ಶಾನ್ವಿ ಎರಡನೇ ಸ್ಥಾನ ಪಡೆದುಕೊಂಡರು.

ರಾಮನಗರ ನೇಟಸ್ ಇಂಟರ್‌ನ್ಯಾಷನಲ್ ಶಾಲೆಯಲ್ಲಿ ಶಾನ್ವಿ ಒಂದನೇ ತರಗತಿ ವ್ಯಾಸಂಗ ಮಾಡುತ್ತಿದ್ದು, ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾದ ಸತೀಶ್ ಅವರ ಪುತ್ರಿಯಾಗಿದ್ದಾರೆ.ಬೆಳ್ಳಿ ಪದಕ ಗಳಿಸಿ ರಾಜ್ಯಕ್ಕೆ ಕೀರ್ತಿ ತಂದಿರುವ ಶಾನ್ವಿಗೆ ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ಜಿಲ್ಲಾ ಗೌರವಾಧ್ಯಕ್ಷ ಕಾಂತರಾಜು, ಕಾರ್ಯದರ್ಶಿ ಶಿವಸ್ವಾಮಿ, ಖಜಾಂಚಿ ರಾಜಶೇಖರ ಮೂರ್ತಿ, ಪ್ರಚಾರ ಸಮಿತಿ ಅಧ್ಯಕ್ಷ ಸತೀಶ್ ಅವರು ಅಭಿನಂದಿಸಿದ್ದಾರೆ.

RELATED ARTICLES
- Advertisment -
Google search engine

Most Popular