Saturday, April 19, 2025
Google search engine

Homeರಾಜ್ಯಸುದ್ದಿಜಾಲಮಹನೀಯರ ಜಯಂತಿ ಒಂದು ಜಾತಿಗೆ ಸೀಮಿತವಾಗಿರದೆ, ಸರ್ವರೂ ಸೇರಿ ಆಚರಿಸುವಂತಿರಬೇಕು:ಶಾಸಕ ಡಿ.ರವಿಶಂಕರ್

ಮಹನೀಯರ ಜಯಂತಿ ಒಂದು ಜಾತಿಗೆ ಸೀಮಿತವಾಗಿರದೆ, ಸರ್ವರೂ ಸೇರಿ ಆಚರಿಸುವಂತಿರಬೇಕು:ಶಾಸಕ ಡಿ.ರವಿಶಂಕರ್

ನಾಡಹಬ್ಬಗಳ ಸಮಿತಿ ವತಿಯಿಂದ ನಡೆದ ಕುವೆಂಪು ಜಯಂತಿ ಸಮಾರಂಭ

ಕೆ.ಆರ್.ನಗರ: ರಾಷ್ಟ್ರ ಕವಿ ಕುವೆಂಪು ತಮ್ಮ ತತ್ವ ಸಿದ್ದಾಂತ ಮತ್ತು ಆದರ್ಶಗಳ ಮೂಲಕ ಸಮಾಜದ ಉದ್ದಾರಕ್ಕಾಗಿ ಭದ್ರ ಬುನಾದಿ ಹಾಕಿಕೊಟ್ಟಿದ್ದಾರೆ ಇವರ ಹಾದಿನಲ್ಲಿ ನಾವುಗಳು ಸಾಗಿದಾಗ ಸಮಾನತೆಯ ಸಮಾಜ ನಿರ್ಮಾಣ ಮಾಡಲು ಸಾಧ್ಯ ಎಂದು ಶಾಸಕ ಡಿ.ರವಿಶಂಕರ್ ಹೇಳಿದರು.
ಪಟ್ಟಣದ ತಾಲೂಕು ಕಚೇರಿ ಸಭಾಂಗಣದಲ್ಲಿ ನಾಡಹಬ್ಬಗಳ ಸಮಿತಿ ವತಿಯಿಂದ ನಡೆದ ಕುವೆಂಪು ಜಯಂತಿ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಮಹನೀಯರ ಜಯಂತಿಗಳನ್ನು ಒಂದು ಜಾತಿಗೆ ಸೀಮಿತಗೊಳಿಸ ಬಾರದು ಸರ್ವರೂ ಸೇರಿಕೊಂಡು ಆಚರಣೆ ಮಾಡಬೇಕು ಎಂದರು.
ವಿಶ್ವಮಾನವ ಸಂದೇಶ ಸಾರಿದ ಕುವೆಂಪು ಶತಮಾನದ ಕವಿಯಾಗಿದ್ದು ನನ್ನ ಅಧಿಕಾರವಧಿಯಲ್ಲಿ ಕೃಷ್ಣರಾಜನಗರ ವಿಧಾನ ಸಭಾ ಕ್ಷೇತ್ರವನ್ನು ಸರ್ವ ಜನಾಂಗದ ಶಾಂತಿಯ ತೋಟವನ್ನಾಗಿ ಮಾಡಲು ನಿರ್ಧರಿಸಿದ್ದು ಇದಕ್ಕೆ ಸರ್ವರೂ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
ನಾಡಹಬ್ಬಗಳ ಸಮಿತಿ ವತಿಯಿಂದ ಆಚರಿಸುವ ಜಯಂತಿಗಳು ಮತ್ತು ಪೂರ್ವಭಾವಿ ಸಭೆಗಳಿಗೆ ಗೈರು ಹಾಜರಾಗದಂತೆ ಅಧಿಕಾರಿಗಳಿಗೆ ಸೂಚಿಸಿದರೂ ಕೂಡ ಕೆಲ ಅಧಿಕಾರಿಗಳು ಬೇಜವಬ್ದಾರಿಯಿಂದ ನಡೆದುಕೊಳ್ಳುತ್ತಿದ್ದಾರೆ ಅಂತಹವರ ವಿರುದ್ದ ಕ್ರಮ ಕೈಗೊಳ್ಳಬೇಕಾಗಿದೆ ಆದ್ದರಿಂದ ತಹಶೀಲ್ದಾರ್‌ರವರು ಜಿಲ್ಲಾಧಿಕಾರಿಯವರಿಗೆ ವರದಿ ಸಲ್ಲಿಸುವಂತೆ ಸೂಚಿಸಿದರು.
ತಮ್ಮ ಜವಬ್ದಾರಿ ಅರಿತು ನಮ್ಮೊಡನೆ ಕೆಲಸ ಮಾಡಲು ಇಚ್ಚೆ ಇಲ್ಲದ ಅಧಿಕಾರಿಗಳು ಇಲ್ಲಿಂದ ವರ್ಗಾವಣೆ ಮಾಡಿಸಿಕೊಂಡು ಹೋಗಬೇಕು ಇಲ್ಲದಿದ್ದರೆ ಕಠಿಣ ಕ್ರಮ ಎದುರಿಸಲು ಸಿದ್ದರಾಗಿ ಎಂದು ಎಚ್ಚರಿಕೆ ನೀಡಿದರು.
ಯುವ ರೈತ ವೇದಿಕೆ ಅಧ್ಯಕ್ಷ ಅರ್ಜುನಹಳ್ಳಿರಾಂಪ್ರಸಾದ್ ಪ್ರಧಾನ ಭಾಷಣ ಮಾಡಿದರು. ತಹಶೀಲ್ದಾರ್ ಸಿ.ಎಸ್.ಪೂರ್ಣಿಮ, ಒಕ್ಕಲಿಗರ ಸಂಘದ ಅಧ್ಯಕ್ಷ ಎಂ.ಟಿ.ಅಣ್ಣೇಗೌಡ ಮಾತನಾಡಿದರು. ಪತ್ರಕರ್ತ ರಾ.ಸುರೇಶ್, ಸಾಹಿತಿ ತಿಪ್ಪೂರುಕೃಷ್ಣ ಮತ್ತು ಅರ್ಜುನಹಳ್ಳಿ ರಾಂಪ್ರಸಾದ್‌ರವರನ್ನು ತಾಲೂಕು ಆಡಳಿತ ವತಿಯಿಂದ ಸನ್ಮಾನಿಸಲಾಯಿತು.
ಇಒ ಜಿ.ಕೆ.ಹರೀಶ್, ಮುಖ್ಯಾಧಿಕಾರಿ ಡಾ.ಜಯಣ್ಣ, ಬಿಇಒ ಆರ್.ಕೃಷ್ಣಪ್ಪ, ಸಮಾಜ ಕಲ್ಯಾಣಾಧಿಕಾರಿ ಎಸ್.ಎಂ.ಅಶೋಕ್, ಬಿಸಿಎಂ ಅಧಿಕಾರಿ ಚಂದ್ರಕಲಾ, ಸಾರ್ವಜನಿಕ ಆಸ್ಪತ್ರೆ ವೈದ್ಯಾಧಿಕಾರಿ ಎಸ್.ಎಂ.ನಾಗೇ0ದ್ರ, ಪುರಸಭೆ ಮಾಜಿ ಅಧ್ಯಕ್ಷ ನರಸಿಂಹರಾಜು, ಸಿಡಿಪಿಒ ಅಣ್ಣಯ್ಯ, ರೈತ ಮುಖಂಡ ಗರುಡಗಂಭಸ್ವಾಮಿ, ಪಿಎಲ್‌ಡಿ ಬ್ಯಾಂಕ್ ನಿರ್ದೇಶಕರಾದ ಪ್ರದೀಪ್‌ಕುಮಾರ್, ಬಿ.ಸಿದ್ದೇಗೌಡ, ಮುಖಂಡರಾದ ಅಣ್ಣಾಜಿಗೌಡ, ಹೊಸಕೋಟೆಚೆಲುವರಾಜು, ಭೇರ್ಯಸುಧಾಕರ್, ಮಾದಶೆಟ್ಟಿ, ಲಕ್ಷಿಕಾಂತ್, ನೀಲಕಂಠೇಗೌಡ, ಲೋಕನಾಥ್, ಕಾಳಿಕುಮಾರ್, ಭಾಸ್ಕರ್, ಹೆಚ್.ಹೆಚ್.ನಾಗೇಂದ್ರ ಮತ್ತಿತರರು ಹಾಜರಿದ್ದರು.

RELATED ARTICLES
- Advertisment -
Google search engine

Most Popular