Saturday, April 19, 2025
Google search engine

Homeರಾಜ್ಯಸುದ್ದಿಜಾಲಸಹಕಾರ ಸಂಘಗಳಲ್ಲಿ ರಾಜಕೀಯ ಹಸ್ತಕ್ಷೇಪ ಮಾಡದೆ ರೈತರ ಪರ ಕೆಲಸ ಮಾಡಿ: ಜಿ.ಡಿ.ಹರೀಶ್ ಗೌಡ ಸಲಹೆ

ಸಹಕಾರ ಸಂಘಗಳಲ್ಲಿ ರಾಜಕೀಯ ಹಸ್ತಕ್ಷೇಪ ಮಾಡದೆ ರೈತರ ಪರ ಕೆಲಸ ಮಾಡಿ: ಜಿ.ಡಿ.ಹರೀಶ್ ಗೌಡ ಸಲಹೆ

ಕೆ.ಆರ್.ನಗರ: ಸಹಕಾರ ಸಂಘಗಳಲ್ಲಿ ಯಾವುದೇ ರೀತಿಯ ರಾಜಕೀಯ ಹಸ್ತಕ್ಷೇಪ ಮಾಡದೇ ರೈತರ ಪರವಾದ ಕೆಲಸ ಮಾಡಬೇಕು ಎಂದು ಎಂಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಜಿ.ಡಿ.ಹರೀಶ್ ಗೌಡ ಹೇಳಿದರು.
ತಾಲೂಕಿನ ಸಿದ್ದಾಪುರ ಕೃಷಿ ಪತ್ತಿನ ಸಹಕಾರ ಸಂಘದ ವತಿಯಿಂದ ಹೊರ ತಂದಿರುವ ೨೦೨೪ನೇ ಸಾಲಿನ ಕ್ಯಾಲೆಂಡರ್ ಬಿಡುಗಡೆ ಮಾಡಿ ಮಾತನಾಡಿದ ಅವರು ಸಂಘದ ನಿರ್ದೇಶಕರಾದವರು ಸಾಲ ಕೊಡಿಸುವುದರ ಜತೆಗೆ ವಸೂಲಾತಿಯಲ್ಲೂ ಉತ್ತಮ ಸಾಧನೆ ಮಾಡಬೇಕು ಎಂದರು.
ಜಿಲ್ಲಾ ಬ್ಯಾಂಕ್ ಆಡಳಿತ ಮಂಡಳಿ ಕಳೆದ ೫ ವರ್ಷಗಳಿಂದ ರೈತರಿಗೆ ಮತ್ತು ಸಂಘಕ್ಕೆ ಅನುಕೂಲವಾಗುವಂತಹ ಯೋಜನೆಗಳನ್ನು ರೂಪಿಸುವುದರ ಜತೆಗೆ ಅಗತ್ಯವಿರುವಷ್ಟು ಸಾಲ ನೀಡಲಾಗಿದ್ದು ಈ ವಿಚಾರದಲ್ಲಿ ಅದ್ವಿತೀಯ ಸಾಧನೆ ಮಾಡಿದ್ದೇವೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಸಿದ್ದಾಪುರ ಸಂಘದ ವತಿಯಿಂದ ಜಿ.ಡಿ.ಹರೀಶ್‌ಗೌಡರವರನ್ನು ಸನ್ಮಾನಿಸಲಾಯಿತು. ಅಧ್ಯಕ್ಷ ಎಂ.ಎಸ್.ಹರಿಚಿದಂಬರ, ಉಪಾಧ್ಯಕ್ಷೆ ಎನ್.ಡಿ.ದೇವಮ್ಮ, ನಿರ್ದೇಶಕರಾದ ರಂಗೇಶ್‌ಕುಮಾರ್, ಕೃಷ್ಣೇಗೌಡ, ಚಿಕ್ಕಿರೇಗೌಡ, ಅನಿಲ್‌ರಾಜ್, ಗೋಪಾಲಚಂದ್ರ, ಕೃಷ್ಣೇಗೌಡ, ಎಂ.ಆರ್.ಮಹದೇವ್, ಮೋಹನ್‌ಕುಮಾರ್, ಸಿಇಒ ಪ್ರೇಮಕುಮಾರ್, ಪ್ರಥಮ ದರ್ಜೆ ಸಹಾಯಕ ಎಸ್.ಬಿ.ತ್ಯಾಗರಾಜು ಇದ್ದರು

RELATED ARTICLES
- Advertisment -
Google search engine

Most Popular