ರಾಮನಗರ:ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿಯ ಹಿರಿಯ/ಮೋಟಾರು ವಾಹನ ನಿರೀಕ್ಷಕರು ವಾಹನಗಳ ತನಿಖೆ ಸಮಯದಲ್ಲಿ ತಪಾಸಣೆ ಮಾಡಿದಾಗ ಮಾಲೀಕರು ಹಾಗೂ ಚಾಲಕರು ವಾಹನದ ದಾಖಲಾತಿಗಳನ್ನು ತೋರಿಸಲು ವಿಫಲರಾದಾಗ ಸದರಿ ವಾಹನಗಳನ್ನು ಜಪ್ತಿ ಮಾಡಿ ಸುಮಾರು 3 ವರ್ಷಗಳಿಂದ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿಯ ಆವರಣದಲ್ಲಿ ನಿಲ್ಲಿಸಲಾಗಿರುತ್ತದೆ.
ವಾಹನ ಮಾಲೀಕರಿಗೆ ಹಲವಾರು ಬಾರಿ ನೋಟೀಸ್‌ಗಳನ್ನು ನೀಡಿದ್ದರು ಸಹ, ಇದುವರೆವಿಗೂ ವಾಹನಗಳನ್ನು ಬಿಡಿಸಿಕೊಂಡು ಹೋಗಿರುವುದಿಲ್ಲ. ಆದುದರಿಂದ ವಾಹನ ಮಾಲೀಕರು 7 ದಿನದೊಳಗಾಗಿ ವಾಹನದ ಮೂಲದಾಖಲಾತಿಗಳನ್ನು ಹಾಜರುಪಡಿಸಿ ವಾಹನಗಳನ್ನು ಬಿಡಿಸಿಕೊಂಡು ಹೋಗತಕ್ಕದ್ದು. ತಪ್ಪಿದ್ದಲ್ಲಿ ಬಹಿರಂಗ ಹರಾಜು ಮೂಲಕ ವಿಲೇವಾರಿ ಮಾಡಲಾಗುವುದು ಎಂದು ರಾಮನಗರ ಜಿಲ್ಲಾ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.