Monday, April 21, 2025
Google search engine

Homeರಾಜ್ಯಬೆಂಗಳೂರು: ಅಪಾರ್ಟ್ ​ಮೆಂಟ್​ ನಿಂದ ಬಿದ್ದು ಇಂಜಿನಿಯರ್​ ಸಾವು

ಬೆಂಗಳೂರು: ಅಪಾರ್ಟ್ ​ಮೆಂಟ್​ ನಿಂದ ಬಿದ್ದು ಇಂಜಿನಿಯರ್​ ಸಾವು

ಬೆಂಗಳೂರು: ಅಪಾರ್ಟ್ ​ಮೆಂಟ್​ ನಿಂದ ಬಿದ್ದು ಇಂಜಿನಿಯರ್​ ಮೃತಪಟ್ಟ ಘಟನೆ ಕೆ.ಆರ್ ಪುರದ ಅಯ್ಯಪ್ಪನಗರದಲ್ಲಿ ನಡೆದಿದೆ.

ಘಟನೆ ನಿನ್ನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಖಾಸಗಿ ಕಂಪನಿಯಲ್ಲಿ ಇಂಜಿನಿಯರ್ ಆಗಿದ್ದ ದಿಪಾಂಶು ಶರ್ಮಾ ಎಂಬುವವರು ಅಪಾರ್ಟ್​ಮೆಂಟ್​ನ 33ನೇ ಫ್ಲೋರ್​ನ ಬಾಲ್ಕನಿಯಿಂದ ಕೆಳಗೆ ಬಿದ್ದು ಮೃತಪಟ್ಟಿದ್ದಾರೆ).

ಘಟನೆ ಸಂಬಂಧ ಕೆ.ಆರ್.ಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಗುರುವಾರ ರಾತ್ರಿ ಕಂಠ ಪೂರ್ತಿ ಕುಡಿದು ಪಾರ್ಟಿ ಮಾಡಿ ಶುಕ್ರವಾರ ಬೆಳಗ್ಗೆ 6:45ರ ವೇಳೆ ತನ್ನ ಮನೆಗೆ ಹಿಂತಿರುಗಿದ್ದ ದಿಪಾಂಶು ಶರ್ಮಾ ತನ್ನ ಅಪಾರ್ಟ್ ಮೆಂಟ್ ​ನ 33ನೇ ಫ್ಲೋರ್​ ನ ಬಾಲ್ಕನಿಗೆ ತೆರಳಿದ್ದಾರೆ. ಈ ವೇಳೆ ಮದ್ಯದ ನಶೆಯಲ್ಲೇ ಆಯತಪ್ಪಿ ಕೆಳಗೆ ಬಿದ್ದು ಮೃತಪಟ್ಟಿದ್ದಾರೆ.

ಕೆ.ಆರ್.ಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಸ್ಥಳಕ್ಕೆ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.

RELATED ARTICLES
- Advertisment -
Google search engine

Most Popular