ರಾಮನಗರ: ರಾಮನಗರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ನಾರಾಯಣ ಆಸ್ಪತ್ರೆಯಲ್ಲಿ ವಿಶ್ವಮಾನವ ರಾಷ್ಟ್ರಕವಿ ಕುವೆಂಪುರವರ ೧೧೯ನೇ ಜಯಂತೋತ್ಸವದ ಪ್ರಯುಕ್ತ ರಕ್ತ ದಾನ ಶಿಬಿರವನ್ನು ಡಿ. ೨೮ರ ಗುರವಾರ ಆಯೋಜಿಸಲಾಗಿತ್ತು. ರಾಮನಗರ ತಾಲ್ಲೂಕು ಪಂಚಾಯತ್‌ನ ಮಾಜಿ ಅಧ್ಯಕ್ಷರಾದ ನಟರಾಜ್ ಅವರು ಶಿಬಿರಕ್ಕೆ ಚಾಲನೆ ನೀಡಿದರು. ನಾರಾಯಣ ಆಸ್ಪತ್ರೆಯ ಮಾಲೀಕರಾದ ಡಾ. ಮಧುಸೂದನ್ ಅವರು ಅಧ್ಯಕ್ಷತೆವಹಿಸಿದ್ದರು.
ಕನ್ನಡ ಸಾಹಿತ್ಯ ಪರಿಷತ್ತಿನ ತಾಲ್ಲೂಕು ಅಧ್ಯಕ್ಷರಾದ ಬಿ.ಟಿ. ದಿನೇಶ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಇದೇ ಸಂದರ್ಭದಲ್ಲಿ ಅತಿಹೆಚ್ಚಿನ ಸಂಖ್ಯೆಯಲ್ಲಿ ರಕ್ತದಾನಿ ಆರ್.ಎಸ್.ಗಿರೀಶ್ ಅವರಿಗೆ ಸನ್ಮಾನಿಸಲಾಯಿತು. ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಅಧ್ಯಕ್ಷರಾದ ಬಿ.ಟಿ.ನಾಗೇಶ್, ಸ್ಪಂದನ ಚಾರಿಟಬಲ್ ಟ್ರಸ್ಟ್ನ ಅಧ್ಯಕ್ಷರಾದ ಡಾ.ಮುತ್ತಣ್ಣ, ಎಸ್.ಎಲ್.ಎನ್ ಆರ್ಕೇಡ್ ಮಾಲಿಕರಾದ ಎಸ್.ಟಿ. ನಂದೀಶ್, ಮಯಗಾನಹಳ್ಳಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರಾದ ಪ್ರಕಾಶ್, ಜಿಲ್ಲಾ ರಂಗಭೂಮಿ ಕಲಾ ಬಳಗಗಳ ಒಕ್ಕೂಟದ ಪ್ರದಾನ ಕಾರ್ಯದರ್ಶಿ ಎ.ಆರ್. ರವಿಕುಮಾರ್, ಜೀವಾಮೃತ ರಕ್ತ ಕೇಂದ್ರದ ವಿ.ಸಿ. ಚಂದ್ರೇಗೌಡ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.