ವರದಿ:ವಿನಯ್ ದೊಡ್ಡ ಕೊಪ್ಪಲು
ಕೆ.ಆರ್.ನಗರ: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ವರ್ಗಾವಣೆ ದಂಧೆ ಎಗ್ಗಿಲ್ಲದೆ ನಡೆಯುತ್ತಿದ್ದು ಅದು ಕೆ.ಆರ್.ನಗರದಲ್ಲಿಯು ಮಿತಿ ಮೀರಿದೆ ಎಂದು ಮಾಜಿ ಸಚಿವ ಸಾ.ರಾ.ಮಹೇಶ್ ಗಂಭೀರ ಆರೋಪ ಮಾಡಿದರು.
ಪಟ್ಟಣದ ಹೆಚ್.ಡಿ.ದೇವೇಗೌಡ ಸಮುದಾಯ ಭವನದಲ್ಲಿ ತಾಲೂಕು ಒಕ್ಕಲಿಗ ಸೌಕರರ ಸ್ನೇಹ ಬಳಗದ ವತಿಯಿಂದ ನಡೆದ ಕುವೆಂಪು ಜಯಂತಿ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ತಾಲೂಕು ಮಟ್ಟದ ಅಧಿಕಾರಿಗಳನ್ನು ಇಲ್ಲಿಯೇ ಉಳಿಸಿಕೊಳ್ಳಲು ಮತ್ತು ವರ್ಗಾವಣೆ ಮಾಡಿಸಿಕೊಳ್ಳಲು ಹಣ ನಿಗಧಿ ಮಾಡಲಾಗಿದೆ ಎಂದು ದೂರಿದರು.
ಈ ಹಿಂದೆ ಹೆಚ್.ವಿಶ್ವನಾಥ್ ಮತ್ತು ಮಂಚನಹಳ್ಳಿಮಹದೇವ್ ಅವರುಗಳು ಶಾಸಕರಾಗಿದ್ದಾಗ ವಿವಿಧ ಇಲಾಖೆಗಳಲ್ಲಿ ಗುತ್ತಿಗೆ ಆಧಾರದ ಮೇಲೆ ಕೆಲಸ ನಿರ್ವಹಿಸುತ್ತಿದ್ದ ನೌಕರರನ್ನು ತೆಗೆದು ಹಾಕಿರಲಿಲ್ಲ ಜತೆಗೆ ನಾನು ಅದನ್ನು ಪಾಲಿಸಿಕೊಂಡು ಬಂದಿದೆ ಆದರೆ ಈಗಿನ ಶಾಸಕರು ದ್ವೇಷದ ರಾಜಕಾರಣ ಮಾಡಿ ಗುತ್ತಿಗೆ ನೌಕರರನ್ನು ಕೆಲಸದಿಂದ ತೆಗೆದು ತಮ್ಮ ಜಾತಿಯವರು ಮತ್ತು ಸಂಬoಧಿಕರಿಗೆ ಅವಕಾಶ ಕಲ್ಪಿಸಿದ್ದಾರೆ ಎಂದು ಹೇಳಿದರು.
ಕಳೆದ ೧೦ ರಿಂದ ೧೨ ವರ್ಷಗಳ ಕಾಲ ಗುತ್ತಿಗೆನೌಕರರಾಗಿ ಕೆಲಸ ಮಾಡಿರುವವರು ತಮ್ಮನ್ನು ತೆಗೆದು ಹಾಕಿರುವುದರ ವಿರುದ್ದ ಸಾರ್ವಜನಿಕರೊಡಗೂಡಿ ಪ್ರತಿಭಟನೆ ನಡೆಸಲು ಸಜ್ಜಾಗುತ್ತಿದ್ದು ಇದಕ್ಕೆ ನನ್ನ ಬೆಂಬಲವಿದೆ ಎಂದು ಹೇಳಿದ ಮಾಜಿ ಸಚಿವರು ಶಾಸಕ ಸ್ಥಾನ ಮತ್ತು ರಾಜಕೀಯ ಅಧಿಕಾರ ಶಾಶ್ವತವಲ್ಲ ಎಂಬುದನ್ನು ಅರಿತು ಕೆಲಸ ಮಾಡಬೇಕು ಎಂದು ಶಾಸಕ ಡಿ.ರವಿಶಂಕರ್ ಅವರಿಗೆ ಸಲಹೆ ನೀಡಿದರು.
ವಿಶ್ವ ಮಾನವ ಸಂದೇಶ ಸಾರಿದ ಮಹಾನ್ ಪುರುಷ : ಕುವೆಂಪು
ರಾಷ್ಟಕವಿ ಕುವೆಂಪು ಜಗತ್ತಿಗೆ ವಿಶ್ವ ಮಾನವ ಸಂದೇಶ ಸಾರಿದ ಮಹಾನ್ ಪುರುಷರಾಗಿದ್ದು ,ನಾವೆಲ್ಲರೂ ಅವರ ತತ್ವ ಮತ್ತು ಸಿದ್ದಾಂತಗಳನ್ನು ಚಾಚೂ ತಪ್ಪದೆ ಪಾಲಿಸಬೇಕು ಎಂದ ಅವರು ಒಕ್ಕಲಿಗ ಸಮಾಜದವರು ಒಂದಷ್ಟು ಅನುಸರಿಸುತ್ತಿರುವುದು ಸಂತಸದ ವಿಚಾರ ಎಂದರು. ಒಕ್ಕಲಿಗ ಕ್ರೆಡಿಡ್ ಕೋ-ಅಪರೇಟಿವ್ ಸೊಸೈಟಿ ಅಧ್ಯಕ್ಷ ಮಿರ್ಲೆಶ್ರೀನಿವಾಸ್‌ಗೌಡ, ಅಪಾರ ಜಿಲ್ಲಾಧಿಕಾರಿ ಆರ್.ಲೋಕನಾಥ್, ಸ್ನೇಹ ಬಳಗದ ಅಧ್ಯಕ್ಷ ಶಂಕರೇಗೌಡ ಮಾತನಾಡಿದರು. ಈ ಸಂದರ್ಭದಲ್ಲಿ ಕೆ.ಆರ್.ನಗರದಿಂದ ವರ್ಗಾವಣೆಗೊಂಡ ಒಕ್ಕಲಿಗ ಸಮಾಜದ ನೌಕರರು, ನಿವೃತ್ತಗೊಂಡ ನೌಕರರು ಮತ್ತು ಸಮಾಜದ ಸಾಧಕರಿಗೆ ಸನ್ಮಾನಿಸಿ ಒಕ್ಕಲಿಗ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಗೋವಿಂದರಾಜು, ತಾಲೂಕು ಸಂಘದ ಅಧ್ಯಕ್ಷ ಸಿ.ಜೆ. ಅರುಣ್‌ಕುಮಾರ್, ತಹಶೀಲ್ದಾರ್ ಗಳಾದ ಸಂತೋಷ್ ಎಂ.ಎಸ್.ಯದುಗಿರೀಶ್, ಶಿರಸ್ತೆದಾರ್ ಮೇಲೂರು ಶಿವಕುಮಾರ್, ಒಕ್ಕಲಿಗ ಕ್ರೆಡಿಡ್ ಕೋ-ಅಪರೇಟಿವ್ ಸೊಸೈಟಿ ಉಪಾಧ್ಯಕ್ಷ ವಿ.ಸಿ.ಶಿವರಾಮು, ಪತ್ರಕರ್ತ ಸಂಘದ ಅಧ್ಯಕ್ಷ ವಿನಯ್ ದೊಡ್ಡಕೊಪ್ಪಲು ಬಳಗದ ಪ್ರಧಾನ ಕಾರ್ಯದರ್ಶಿ ಹೆಚ್.ಎಸ್.ಈಶ್ವರ್, ಖಜಾಂಚಿ ಕೆ.ಪಿ.ಆನಂದ್ ಕಿತ್ತೂರು, ತೋಟಗಾರಿಕೆ ಅಧಿಕಾರಿ ಪ್ರಶನ್ನ, ಶಿಕ್ಷಕರಾದ ಮಾರುತಿ,ಸುರೇಶ್ , ಮುಖಂಡರಾದ ಅರ್ಜುನಹಳ್ಳಿ ಗಣೇಶ್, ಹೆಬ್ಬಾಳು ಸುಜಯ್, ಜೆಡಿಎಸ್ ಅಧ್ಯಕ್ಷ ಮೆಡಿಕಲ್ ರಾಜಣ್ಣ,ಮಿರ್ಲೆ ಧನಂಜಯ, ಮತ್ತಿತರರು ಹಾಜರಿದ್ದರು.
