ಕೆ.ಆರ್.ನಗರ : ಸಾಲಿಗ್ರಾಮ ತಾಲೂಕಿನ ತಂದ್ರೆ ಹಾಲು ಉತ್ಪಾದಕರ ಸಂಘದ ನೂತನ ಅಧ್ಯಕ್ಷರಾಗಿ ಟಿ.ಕೆ.ಸುಭಾಷ್ ಮತ್ತು ಉಪಾಧ್ಯಕ್ಷರಾಗಿ ಟಿ.ಎಸ್.ಶ್ರೀನಿವಾಸ್ ಶನಿವಾರ ಅವಿರೋಧವಾಗಿ ಆಯ್ಕೆಯಾದರು.
ಸಂಘದ ಕಚೇರಿಯಲ್ಲಿ ನಡೆದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಟಿ.ಕೆ.ಸುಭಾಷ್ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಟಿ.ಎಸ್ ಶ್ರೀನಿವಾಸ್ ಅವರನ್ನು ಹೊರತು ಪಡಿಸಿ ಬೇರೆಯಾರು ನಾಮಪತ್ರ ಸಲ್ಲಿಸದ ಕಾರಣ ಚುನಾವಣಾಧಿಕಾರಿಯಾಗಿದ್ದ ಹುಣಸೂರು ಸಹಕಾರ ಇಲಾಖೆಯ ಅಧಿಕಾರಿ ಸಿ.ಎನ್.ಗಿರೀಶ್ ಇವರ ಅವಿರೋಧ ಆಯ್ಕೆಯನ್ನು ಪ್ರಕಟಿಸಿದರು.ನೂತನ ಅಧ್ಯಕ್ಷ ಟಿ.ಕೆ.ಸುಭಾಷ್ ಮಾತನಾಡಿ ತಮ್ಮ ಅವಧಿ ಸಂಘದ ನೂತನ ಕಟ್ಟಡ ನಿರ್ಮಾಣ ಮಾಡಲು ಶ್ರಮಿಸುವುದರ ಜೊತೆಗೆ ಜಿಲ್ಲಾ ಹಾಲು ಒಕ್ಕೂಟದಿಂದ ಸಿಗುವ ಸವಲತ್ತುಗಳನ್ನು ಒದಗಿಸಿ ಕೊಡಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ತಿಳಿಸಿದರು. ಚುನಾವಣಾ ಸಭೆಯಲ್ಲಿ ಟಿ.ಎ.ದಶರಥ,ಟಿ.ಎನ್.ಪಾಂಡು,ಲೋಲಾಕ್ಷಿ,ಟಿ.ಟಿ.ಮಹೇಶ್,ರುಕ್ಮಿಣಿ,ಚಂದ್ರಮ್ಮ,ಪ್ರಶನ್ನ, ಸಂಘದ ಕಾರ್ಯದರ್ಶಿ ಟಿ.ಬಿ.ರಾಜಣ್ಣ ಇದ್ದರು.
ನಂತರ ನಡೆದ ಸಮಾರಂಭದಲ್ಲಿ ನೂತ ಅಧ್ಯಕ್ಷ-ಉಪಾಧ್ಯಕ್ಷರನ್ನು ಗ್ರಾಮದ ಮುಖಂಡರಾದ ಟಿ.ಪಿ.ಮಂಜು,ಪುಟ್ಟಸ್ವಾಮಿ,ಟಿ.ಎಸ್.ಸ್ವಾಮಿ,ಗಿರೀಶ್,ಶ್ರೀನಿವಾಸ್,ಚಂದ್ರೇಗೌಡ,ಟಿ.ಜಿ.ಚಂದ್ರೇಗೌಡ,ಟಿ.ಎಸ್. ಸ್ವಾಮೀಗೌಡ ಮತ್ತಿತರರು ಅಭಿನಂದಿಸಿದರು.