ಮೈಸೂರು:ಇಂದು ನೇಗಿಲಯೋಗಿ ಮರುಳೇಶ್ವರ ಸೇವಾಭವನದಲ್ಲಿ ,ನೇಗಿಲಯೋಗಿ ಸಮಾಜ ಸೇವಾ ಟ್ರಸ್ಟ್ ಮತ್ತು ನೇಗಿಲಯೋಗಿ ಮಹಿಳಾ ಕ್ಷೇಮಾಭಿವೃದ್ದಿ ಸಂಘದ ಸಹಯೋಗದಲ್ಲಿ ರಾಷ್ಟ್ರಕವಿ ಕುವೆಂಪು ರವರ ಜನ್ಮದಿನದ ಅಂಗವಾಗಿ ಕುವೆಂಪು ರಚಿತ ಕವನ ಭಾವಗೀತೆಗಳ ಗಾಯನ ಸ್ಪರ್ಧೆ ಹಾಗು ಕುವೆಂಪುರವರ ಬದುಕು / ಬರಹ ಆಧಾರಿತ ಕವನ ರಚನ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಸ್ಪರ್ಧೆಗಳಲ್ಲಿ ಸ್ಪರ್ಧಿಗಳು ಅತ್ಯುತ್ಸಾಹದಿಂದ ಭಾಗವಹಿಸಿದರು . ಗಾಯನ ಸ್ಪರ್ಧೆಗಳು 5 ವಿಭಾಗದಲ್ಲಿ ನಡೆಯಿತು.
1) 10 ವರ್ಷಕ್ಕಿಂತ ಕೆಳಪಟ್ಟವರು
2) 11 ರಿಂದ 13
3) 14 ರಿಂದ 16 .
4) 17 ರಿಂದ 21 .
5) 21 ವರ್ಷ ಮೇಲ್ಪಟ್ಟ ವಯೋಮಿತಿಯಲ್ಲಿ ಸ್ಪರ್ಧೆಯನ್ನು ನಡೆಸಲಾಯಿತು.
ಗಾಯನ ಮತ್ತು ಕವನ ರಚನಾ ಸ್ಪರ್ಧೆ ವಿಜೇತರಿಗೆ ಕುವೆಂಪುರವರ ಮೈಸೂರಿನ ಸ್ವಗೃಹ “ಉದಯರವಿ”, ಜಯಲಕ್ಷ್ಮಿಪುರಂ ,ಮೈಸೂರು ಇಲ್ಲಿ ದಿನಾಂಕ 6-1-2024 ರ ಸಂಜೆ 5 ಗಂಟೆಗೆ ಅಂದಿನ ಕಾರ್ಯಕ್ರಮದಲ್ಲಿ ವಿಜೇತರ ಹೆಸರುಗಳನ್ನು ಪ್ರಕಟಿಸಿ ಬಹುಮಾನ ವಿತರಣೆ ಮಾಡಲಾಗುವುದು ಮತ್ತು ಗೀತ ಗಾಯನ ಕಾರ್ಯಕ್ರಮವನ್ನು ನಡೆಸಲಾಗುತ್ತದೆ.
ರಾಷ್ಟ್ರಕವಿ ಕುವೆಂಪು ಅವರ 120 ನೆಯ ಜನ್ಮ ದಿನಾಚರಣೆಯ ಅಂಗವಾಗಿ ಏರ್ಪಡಿಸಿದ್ದ ಕುವೆಂಪು ವಿರಚಿತ ಭಾವಗೀತೆಗಳ ಗಾಯನ ಸ್ಪರ್ಧೆ ಹಾಗೂ ಕುವೆಂಪು ಬದುಕು ಬರಹ ಕುರಿತ ಕವನ ರಚನಾ ಸ್ಪರ್ಧೆಯ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಕುವೆಂಪು ಅವರು ನುಡಿದಂತೆ ನಡೆಯುವ ಮೂಲಕ ನಮ್ಮ ನಡುವಿನ ಆದರ್ಶಪ್ರಾಯ ವ್ಯಕ್ತಿಯಾಗಿ ಎಲ್ಲರ ಮನದಲ್ಲಿ ಶಾಶ್ವತವಾಗಿ ನೆಲೆಸಿದ್ದಾರೆ ಎಂದು ನೇಗಿಲಯೋಗಿ ಸಮಾಜ ಸೇವಾ ಟ್ರಸ್ಟ್ ನ ಅಧ್ಯಕ್ಷ ಡಿ ರವಿಕುಮಾರ್ ತಿಳಿಸಿದರು. ಕುವೆಂಪು ಅವರು ತಮ್ಮ ಮನದ ಭಾವನೆಗಳನ್ನು ಯಾವುದೇ ಮುಚ್ಚುಮರೆ ಇಲ್ಲದೆ ನೇರವಾಗಿ ಹೇಳುವ ಧೈರ್ಯವನ್ನು ಹೊಂದಿದ್ದರು. ಅವರು ಯಾವುದೇ ಒತ್ತಡಕ್ಕೆ ಮಣಿಯುತ್ತಿರಲಿಲ್ಲ. ಅವರ ನೇರ ನಡೆ-ನುಡಿಗಳು ಹಾಗೂ ಪ್ರಕೃತಿ ಪ್ರೇಮವು ಅವರ ಬರವಣಿಗೆಗಳಲ್ಲಿ ವ್ಯಕ್ತವಾಗಿರುವುದನ್ನು ನಾವು ಕಾಣಬಹುದು ಎಂದರು.
ಇಂದಿನ ಕಾರ್ಯಕ್ರಮದಲ್ಲಿ ಅಧ್ಯಕ್ಷತೆಯನ್ನು ವಹಿಸಿದ್ದ ಶ್ರೀಯುತ ಡಿ ರವಿಕುಮಾರ್ ರವರು , ಕಾರ್ಯಕ್ರಮದ ಉದ್ಘಾಟನೆ ಮಾಡಿದ ಶ್ರೀ ರಾಮಕೃಷ್ಣ, ಚಲನಚಿತ್ರ ಸಂಗೀತ ನಿರ್ದೇಶಕರು, ಸಂಗೀತ ವಿದ್ವಾನ್ ರಘು .ಆರ್ . ಸಹಾಯಕ ಪ್ರಾಧ್ಯಾಪಕರು, ಲಲಿತಾ ಕಲಾ ಕಾಲೇಜ್, ಮೈಸೂರು ವಿಶ್ವ ವಿದ್ಯಾನಿಲಯ, ಡಾ. ಶ್ಯಾಮೇಶ್ ಅತ್ತಿಗುಪ್ಪೆ ,ಬೋಧಕರು, ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯ, ವಸಂತಮಹಲ್, ನೇಗಿಲಯೋಗಿ ಮಹಿಳಾ ಕ್ಷೇಮಾಭಿವೃದ್ಧಿ ಸಂಘ(ರಿ) ದ ಅಧ್ಯಕ್ಷರಾದ ಶ್ರೀಮತಿ ಜೆ. ಶೋಭ ರಮೇಶ್ ಮತ್ತು ಸಂಘದ ಸದಸ್ಯರುಗಳು ಹಾಜರಿದ್ದರು.