Saturday, April 19, 2025
Google search engine

Homeರಾಜ್ಯಸುದ್ದಿಜಾಲಕೆ.ಆರ್.ನಗರದಲ್ಲಿ ಅದ್ದೂರಿ ಹನುಮಂತೋತ್ಸವ ಮತ್ತು ಶೋಭಾಯಾತ್ರೆ

ಕೆ.ಆರ್.ನಗರದಲ್ಲಿ ಅದ್ದೂರಿ ಹನುಮಂತೋತ್ಸವ ಮತ್ತು ಶೋಭಾಯಾತ್ರೆ

ಕೆ.ಆರ್.ನಗರ: ಪಟ್ಟಣದ ಆಂಜನೇಯ ಬಡಾವಣೆಯ ಮಾರುತಿ ಯುವಕರ ಸಂಘ ಮತ್ತು ಸಾರ್ವಜನಿಕರ ಸಹಯೋಗದಲ್ಲಿ ಶನಿವಾರ ನಮ್ಮೂರ ಹನುಮಂತೋತ್ಸವ ಮತ್ತು ಶೋಭಾಯಾತ್ರೆಯನ್ನು ಅತ್ಯಂತ ವೈಭವದಿಂದ ನಡೆಸಲಾಯಿತು. ಇಲ್ಲಿನ ಆಂಜನೇಯ ದೇವಾಲಯದ ಆವರಣದಲ್ಲಿ ಗಾವಡಗೆರೆ ಗುರುಲಿಂಗ ಜಂಗಮ ಮಠದ ನಟರಾಜಸ್ವಾಮೀಜಿ, ಶಾಸಕ ಡಿ.ರವಿಶಂಕರ್, ಮಾರುತಿ ಯುವಕರ ಸಂಘದ ಅಧ್ಯಕ್ಷ ಗೌತಮ್‌ಜಾಧವ್ ಮತ್ತಿತರರು ಹನುಮಂತೋತ್ಸವಕ್ಕೆ ಚಾಲನೆ ನೀಡಿದರು.

ಆನಂತರ ವಿವಿಧ ಕಲಾತಂಡಗಳೊಂದಿಗೆ ಬಜಾರ್‌ರಸ್ತೆಯ ಮೂಲಕ ಸಾಗಿದ ಆಂಜನೇಯಸ್ವಾಮಿಯ ಬೃಹತ್ ಮೂರ್ತಿಯ ಮೆರವಣಿಗೆ ಗರುಡಗಂಭ ವೃತ್ತ, ವಿವಿ ರಸ್ತೆ, ಪುರಸಭೆ ವೃತ್ತ ಮತ್ತು ಸಿಎಂ ರಸ್ತೆ ಮೂಲಕ ದೇವಾಲಯದವರೆಗೂ ಬಾರಿ ಮೆರವಣಿಗೆಯಲ್ಲಿ ಸಾಗಿ ಬಂತು. ಮೆರವಣಿಗೆ ಸಾಗಿದ ರಸ್ತೆಯುದ್ದಕ್ಕೂ ನೆರೆದಿದ್ದ ಭಕ್ತರು ಮತ್ತು ಯುವಕ ಯುವತಿಯರು ಹನುಮಂತನ ಹಾಡಿಗೆ ಹಾಗೂ ತಮಟೆ ಸದ್ದಿಗೆ ಕುಣಿದು ಕುಪ್ಪಳಿಸಿ ದೇವರಿಗೆ ಜಯಕಾರದ ಘೋಷಣೆಗಳನ್ನು ಮೊಳಗಿಸಿ ಭಕ್ತಿ ಪರವಶತೆಯಲ್ಲಿ ಮಿಂದೆದ್ದರು. ಪಟ್ಟಣ ಸೇರಿದಂತೆ ಸಾಲಿಗ್ರಾಮ ಮತ್ತು ಕೆ.ಆರ್.ನಗರ ತಾಲೂಕು ಸೇರಿದಂತೆ ವಿವಿದೆಡೆಗಳಿಂದ ಆಗಮಿಸಿದ್ದ ಹನುಮ ಭಕ್ತರಿಗೆ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಮತ್ತು ದಾನಿಗಳು ಪ್ರಸಾದ, ಪಾನಕ, ಮಜ್ಜಿಗೆ ಸೇರಿದಂತೆ ಇತರ ತಂಪು ಪಾನೀಯ ನೀಡಿದರು.
ಕಳೆದ ಏಳು ದಿನಗಳಿಂದ ಆಂಜನೇಯ ಸ್ವಾಮಿ ದೇವಾಲಯದಲ್ಲಿ ವಿಜೃಂಭಣೆಯಿಂದ ನಡೆದ ಆಂಜನೇಯ ಸ್ವಾಮಿಯ ಪೂಜೆ ಶನಿವಾರದ ಹನುಮಂತೋತ್ಸವದೊಂದಿಗೆ ಸಮಾಪ್ತಿಗೊಂಡಿತು.


ಮಾರುತಿ ಯುವಕರ ಸಂಘದ ಗೌರವಾಧ್ಯಕ್ಷ ಎಸ್.ಯೋಗಾನಂದ್, ಪದಾಧಿಕಾರಿಗಳಾದ ಮಂಜುನಾಥ್‌ಕೆಂಚಿ, ಪುರಸಭೆ ಸದಸ್ಯರಾದ ಕೆ.ಜಿ.ಸುಬ್ರಮಣ್ಯ, ಶಂಕರ್, ಶಿವುನಾಯಕ್, ನಟರಾಜು, ಶಂಕರ್‌ಸ್ವಾಮಿ, ಶಾರದನಾಗೇಶ್, ವೀಣಾವೃಷಬೇಂದ್ರ, ಮಾಜಿ ಅಧ್ಯಕ್ಷರಾದ ಗೀತಾಮಹೇಶ್, ನರಸಿಂಹರಾಜು, ಮಾಜಿ ಸದಸ್ಯ ಕೆ.ವಿನಯ್, ಸಾರ್ವಜನಿಕ ಹನುಮ ಜಯಂತಿ ಆಚರಣಾ ಸಮಿತಿ ಅಧ್ಯಕ್ಷ ಯು.ಕೃಷ್ಣಭಟ್, ಪದಾಧಿಕಾರಿಗಳಾದ ಪವನ್‌ಶಿವಾಜಿ, ನಂಜುಂಡ, ಅಶೋಕ್, ಮಂಜುನಾಥ್ ಸೇರಿದಂತೆ ಸಾವಿರಾರು ಭಕ್ತರು ಹಾಜರಿದ್ದರು. ಜಿಲ್ಲಾ ಪೊಲೀಸ್ ಉಪವರಿಷ್ಠಾಧಿಕಾರಿಗಳಾದ ನಂದಿನಿ ಮತ್ತು ಬಾಬು ಡಿವೈಎಸ್ ಪಿ ಕರೀಂ ರಾವತ್ ಅವರ ನೇತೃತ್ವದಲ್ಲಿ ಪೋಲಿಸ್ ಇನ್ಸ್ ಪೆಟ್ಟರ್ ಸಂತೋಷ್, ಉಪನಿರೀಕ್ಷಕರಾದ ಧನರಾಜ್ ನಂಜಪ್ಪ,ಸ್ವಾಮೀಗೌಡ,ಅಚ್ಚುತಾ, ಎಸ್.ಬಿ.ಮಂಜು ನೇತೃತ್ವದಲ್ಲಿ
ಬಿಗಿ ಪೊಲೀಸ್ ಬಂದೋ ಬಸ್ತ್ ಏರ್ಪಡಿಸಲಾಗಿತ್ತು.

RELATED ARTICLES
- Advertisment -
Google search engine

Most Popular