Sunday, April 20, 2025
Google search engine

Homeರಾಜ್ಯಸುದ್ದಿಜಾಲಹೊನ್ನ ಕಳಸ ಪರಿಷ್ಕೃತ ಅಭಿನಂದನಾ ಗ್ರಂಥ ಬಿಡುಗಡೆ

ಹೊನ್ನ ಕಳಸ ಪರಿಷ್ಕೃತ ಅಭಿನಂದನಾ ಗ್ರಂಥ ಬಿಡುಗಡೆ

ಮೈಸೂರು: ಭಾರತೀಯ ವಿದ್ಯಾರ್ಥಿಗಳಲ್ಲಿ ವಿಶ್ವದಲ್ಲೇ ಮಾದರಿಯಾದ ಬುದ್ದಿ ಶಕ್ತಿ ಇದ್ದು ಶಿಕ್ಷಣ ಸಂಸ್ಧೆಗಳಲ್ಲಿರುವ ಅವಕಾಶಗಳನ್ನ ಸದುಪಯೋಗಪಡಿಸಿಕೊಂಡು ವಿದ್ಯಾವಂತರಾಗುವುದರ ಜೊತೆಗೆ ಉತ್ತಮ ಸುಸಂಸ್ಕೃತ ನಾಗರೀಕರಾಗುವುದರ ಮೂಲಕ ಸದೃಢ ಸಮಾಜ ನಿರ್ಮಾಣಕ್ಕೆ ಮುಂದಾಗಬೇಕೆಂದು ಎಚ್.ಕೆ.ವೀ.ಪ್ರತಿಷ್ಟಾನದ ಅಧ್ಯಕ್ಷ ಹಾಗೂ ಅನಿವಾಸಿ ಭಾರತೀಯ ಡಾ. ಎಚ್.ಕೆ.ಮರಿಯಪ್ಪ ಹೇಳಿದರು.

ಪಟ್ಟಣದ ಲೀಲಾವತಿ ಬಡಾವಣೆಯಲ್ಲಿರುವ ಡಾ. ಎಚ್.ಕೆ.ಮರಿಯಪ್ಪ ಕಾನ್ವೆಂಟ್‌ನಲ್ಲಿ ಎಂ.ಹೆಚ್.ಚನ್ನೇಗೌಡ ವಿದ್ಯಾಸಂಸ್ಧೆ ಆಯೋಜಿಸಿದ್ದ ಎಚ್ಕೆವಿ ಹಬ್ಬ ಹಾಗೂ ಹೊನ್ನಕಳಸ ಪರಿಷ್ಕೃತ ಅಭಿನಂದನಾ ಗ್ರಂಥ ಬಿಡುಗಡೆ ಸಮಾರಂಭವನ್ನು ಉದ್ಟಾಟಿಸಿ ಅವರು ಮಾತನಾಡಿದರು. ಪ್ರಸ್ತುತ ಸ್ಪರ್ಧಾತ್ಮಕ ಯುಗದಲ್ಲಿ ಸತತವಾದ ಶ್ರದ್ಧೆ ಹಾಗೂ ಪರಿಶ್ರಮದಿಂದ ನಿರಂತರ ಅಧ್ಯಯನ ಶೀಲರಾದಗಾ ಮಾತ್ರ ಯಶಸ್ಸನ್ನು ಸಾಧಿಸಲು ಸಾಧ್ಯ ಎಂದ ಅವರು ರಾಷ್ಟ್ರ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಉತ್ತಮ ಸ್ಪರ್ಧೆಯನ್ನು ನೀಡುವಂತೆ ಬೆಳವಣಿಗೆ ಯಾಗಬೇಕಾಗಿರುವುದು ಅನಿವಾರ್ಯವಾಗಿದೆ ಎಂದರು.

ವಿದ್ಯಾರ್ಥಿಗಳು ಕೇವಲ ಪಠ್ಯ ಚಟುವಟಿಕೆಗಳಿಗೆ ಸೀಮಿತವಾಗದೇ ಸೃಜನ ಶೀಲತೆ ಹಾಗೂ ಕ್ರೀಯಾಶೀಲತೆಯನ್ನ ಬೆಳೆಸಿಕೊಂಡು ಸರ್ಕಾರಿ ಹಾಗೂ ಖಾಸಗಿ ಕ್ಷೇತ್ರದಲ್ಲಿ ವಿಫಲವಾದ ಅವಕಾಶಗಳಿರುವುದನ್ನ ಬಳಸಿಕೊಂಡು ತಾವು ಅಭಿವೃದ್ದಿ ಹೊಂದುವುದರ ಜೊತೆಗೆ ಮತ್ತೊಬ್ಬರಿಗೆ ಉದ್ಯೋಗಗಳನ್ನು ಕೊಡುವಂತಹ ಸಂಸ್ಧೆಗಳನ್ನ ಸ್ಧಾಪಿಸಬೇಕೆಂದು ಕಿವಿ ಮಾತು ಹೇಳಿದರು. ಕಾರ್ಯಕ್ರಮದಲ್ಲಿ ಡಾ. ಎಚ್.ಕೆ.ಮರಿಯಪ್ಪ ರವರ ಹೊನ್ನ ಕಳಸ ಪರಿಷ್ಕೃತ ಅಭಿನಂದನಾ ಗ್ರಂಥವನ್ನ ಪತ್ರಕರ್ತ ರಾಜು ಮಳವಳ್ಳಿ ಬಿಡುಗಡೆ ಮಾಡಿ ಮಾತನಾಡಿದ ಅವರು ವಿಶ್ವದಲ್ಲೇ ಮಾದರಿಯಾದ ಯುವ ಸಂಪತ್ತು ಭಾರತೀಯ ಯುವಕ ಯುವತಿಯರಲ್ಲಿದ್ದು ಸೂಕ್ತ ಮಾರ್ಗದರ್ಶನದ ಕೊರತೆಯಿಂದಾಗಿ ಸಮಾಜದ ಮುಖ್ಯವಾಹಿನಿಗೆ ಬರಲು ಸಾಧ್ಯವಾಗುತ್ತಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು.

ಶಿಕ್ಷಕರು ಹಾಗೂ ಶಿಕ್ಷಣ ಸಂಸ್ಧೆಗಳು ವಿದ್ಯಾರ್ಥಿಗಳಲ್ಲಿರುವ ಸೃಜನ ಶೀಲತೆ ಹಾಗೂ ಪ್ರತಿಭೆಗಳನ್ನ ಗುರುತಿಸಿ ಅವರಿಗೆ ಸೂಕ್ತ ಮಾರ್ಗದರ್ಶನ ನೀಡಿ ಪೋಷಿಸುವ ಮೂಲಕ ವಿದ್ಯಾರ್ಥಿಗಳ ಸರ್ವೋತೋಮುಖ ಅಭಿವೃದ್ದಿಗೆ ಶ್ರಮಿಸಬೇಕೆಂದು ಕಿವಿ ಮಾತು ಹೇಳಿದರು. ಕಾರ್ಯಕ್ರಮದಲ್ಲಿ ಎಂ.ಹೆಚ್.ಚನ್ನೇಗೌಡ ವಿದ್ಯಾಸಂಸ್ಧೆಯ ಅಧ್ಯಕ್ಷ ಎಂ.ಸ್ವರೂಪ್ ಚಂದ್, ಅಧ್ಯಕ್ಷತೆ ವಹಿಸಿದ ಕಾರ್ಯಕ್ರಮದಲ್ಲಿ ಕಾರ್ಯದರ್ಶಿ ಸಿ.ಅಪೂರ್ವಚಂದ್ರ, ಬಿಇಒ ಸಿ.ಹೆಚ್. ಕಾಳೀರಯ್ಯ, ಅನಿವಾಸಿ ಭಾರತೀಯರುಗಳಾದ ದರ್ಶ ಮರಿಯಪ್ಪ, ಕ್ಯಾರೋಲಿನ್, ಕೋಲ್,ಏಡನ್, ಏವನ್, ಪುರಸಭಾ ಸದಸ್ಯರುಗಳಾದ ಎಸ್.ಮಹೇಶ್, ಬಸವರಾಜು, ಪ್ರಮೀಳ, ಪ್ರಿಯಾಂಕ ಪಿ ಅಪ್ಪುಗೌಡ ಪ್ರಾಂಶುಪಾಲರಾದ ಜಿ.ಎಸ್.ಶಂಕರೇಗೌಡ, ಯು.ಎಸ್. ಶಿವಕುಮಾರ್, ಉಪಪ್ರಾಂಶುಪಾಲರಾದ ಪ್ರಕಾಶ್, ಜಿ.ಎಸ್.ನಂದಿನಿ, ಉಪನ್ಯಾಸಕರಾದ ಹೆಚ್.ಎಸ್.ಪಂಚಲಿಂಗೇಗೌಡ, ಎನ್.ರೇವಣ್ಣ, ಮುಖ್ಯ ಶಿಕ್ಷಕರಾದ, ಎನ್.ಕೃಷ್ಣ, ಜಿ.ಅನಿತಾ, ಎಂ.ಟಿ.ಚಂದ್ರಶೇಖರ್. ಕೆ. ಎನ್.ವರದರಾಜು , ಆಡಳಿತಾಧಿಕಾರಿ ಯು.ಎಸ್.ರವಿ ಸೇರಿದಂತೆ ಇತರರು ಹಾಜರಿದ್ದರು.

RELATED ARTICLES
- Advertisment -
Google search engine

Most Popular