Monday, May 5, 2025
Google search engine

Homeರಾಜ್ಯಹೊಸ ವರ್ಷ ಆಚರಣೆಗೆ ಹಲವೆಡೆ ಭರ್ಜರಿ ಸಿದ್ದತೆ

ಹೊಸ ವರ್ಷ ಆಚರಣೆಗೆ ಹಲವೆಡೆ ಭರ್ಜರಿ ಸಿದ್ದತೆ


ಬೆಂಗಳೂರು : ಹೊಸ ವರ್ಷ ಆಚರಣೆಗೆ ರಾಜ್ಯದ ಹಲವೆಡೆ ಭರ್ಜರಿ ಸಿದ್ದತೆ ಮಾಡಿಕೊಳ್ಳಲಾಗುತ್ತಿದೆ. ಅದರಂತೆ ಬೆಂಗಳೂರಿನ ಹೊರವಲಯದ ನಂದಿಬೆಟ್ಟದ ತಪ್ಪಲಿನ ಹಲವು ರೆಸಾರ್ಟ್ ಹಾಗೂ ದೇವನಹಳ್ಳಿ ತಾಲೂಕಿನ ಕಾರಹಳ್ಳಿ ಬಳಿಯ ಹ್ಯಾಂಗ್ ಔಟ್ ರೆಸಾರ್ಟ್‌ನಲ್ಲಿ ನ್ಯೂ ಇಯರ್‌ಫುಲ್ ಸೆಲೆಬ್ರೆಷನ್ ಗೆ ರೆಡಿಯಾಗಿದೆ. ಈಗಾಗಲೇ ೨೫೦ ಕ್ಕೂ ಹೆಚ್ಚು ಮಂದಿ ಬುಕ್ಕಿಂಗ್ ಆಗಿದ್ದು, ಇಲ್ಲಿ ಅನ್ ಲಿಮಿಟೆಟ್ ಪುಡ್ ಹಾಗೂ ಡ್ರಿಂಕ್ಸ್ ಜೊತೆಗೆ ಒಪನ್ ಏರಿಯಾದಲ್ಲಿ ೫೦ ಕ್ಕೂ ವಿವಿಧ ಬಗೆಯ ಊಟದ ಮೆನುವನ್ನು ರೆಸಾರ್ಟ್ ಸಿಬ್ಬಂದಿ ರೆಡಿ ಮಾಡಿಕೊಂಡಿದ್ದಾರೆ.

ಕುಡಿದು ಟೈಟ್ ಆದವರು ಮನೆಗೆ ತೆರಳಲು ಸಾಧ್ಯವಾಗದವರಿಗೆ ೧೦೦ ಟೆಂಟ್ ಗಳನ್ನು ನಿರ್ಮಿಸಲಾಗಿದೆ. ಒಂದು ಟೆಂಟ್ ನಲ್ಲಿ ಇಬ್ಬರು ಮಲಗಬಹುದಾಗಿದೆ. ಡಿಜೆ ಪಾರ್ಟಿ ಒಂದು ಕಡೆ, ಮತ್ತೊಂದು ಕಡೆ ಪೈರ್ ಕ್ಯಾಂಪ್ ಕೂಡ ಆಯೋಜಿಸಲಾಗಿದೆ. ಹೊಸ ವರ್ಷದ ಹಿನ್ನಲೆ ಹ್ಯಾಂಗ್ ಔಟ್ ರೆಸಾರ್ಟ್ ಒಂದು ದಿನದ ಮಟ್ಟಿಗೆ ಬಾರ್ ಲೈಸನ್ಸ್ ಪಡೆದಿದೆ. ಯಾವುದೇ ಅಹಿತಕರ ಘಟನೆ ಆಗದಂತೆ ಅನುಮತಿ ಪಡೆದಿರುವ ರೆಸಾರ್ಟ್ ಗಳಿಗೆ ಪೋಲೀಸರು ಎಚ್ಚರಿಕೆ ನೀಡಿದ್ದಾರೆ.

ಹೊಸವರ್ಷಾಚರಣೆ ಸಂಭ್ರಮಾಚರಣೆಗೆ ಸಿದ್ದತೆ ಕೋರಮಂಗಲ ಪಬ್‌ಗಳಲ್ಲಿ ಭರದ ಸಿದ್ದತೆ ಮಾಡಿಕೊಂಡಿದೆ. ಈ ಕುರಿತು ಮಾತನಾಡಿದ ಜಿಪ್ಸಿ ಟವರ್ ಪಬ್ ಮಾಲೀಕ್ ಪ್ರಕಾಶ್ ನಾಯಕ್ ಸೆಲೆಬ್ರೇಷನ್ ಗೆ ಬೇಕಾದ ಎಲ್ಲಾ ವ್ಯವಸ್ಥೆ ಮಾಡಿಕೊಂಡಿದ್ದೇವೆ. ಪೋಲಿಸರು ಗೈಡ್ ಲೈನ್ಸ್ ಫಾಲೋ ಮಾಡ್ತಿದ್ದೇವೆ. ವ್ಯಾಲಿಡ್ ಐಡಿ ಕಾರ್ಡ್ ಗಳನ್ನು ಪರಿಶೀಲನೆ ಮಾಡಿ ಒಳಗೆ ಬಿಡಲಾಗುತ್ತೆ. ಹೊಸ ಪಬ್ ಇದಾಗಿದ್ದು, ಹಾಗಾಗಿ ನಮಗೆ ಇದು ನಮಗೆ ಮೊದಲ ನ್ಯೂ ಇಯರ್. ಸುಮಾರು ೧ ಸಾವಿರ ಜನ ಬರುವ ನಿರೀಕ್ಷೆ ಇದೆ. ಯುವತಿಯರಿಗೆ, ಕಪಲ್ಸ್ ಗೆ ಬೇರೆ ವ್ಯವಸ್ಥೆ ಮಾಡಲಾಗಿದೆ. ಜೊತೆಗೆ ೨೧ ವರ್ಷ ಮೇಲ್ಪಟ್ಟವರಿಗೆ ಮಾತ್ರ ಪಬ್ ಒಳಗೆ ಪ್ರವೇಶ ಎಂದರು. ಕಾರವಾರದ ರವೀಂದ್ರನಾಥ್ ಠಾಗೋರ ಕಡಲ ತೀರದಲ್ಲಿ ಪ್ರವಾಸಿಗರ ಎಂಜಾಯ್

ಉತ್ತರ ಕನ್ನಡ: ಹೊಸ ವರ್ಷ ಎಂಜಾಯ್ ಮಾಡಲು ಬೆಂಗಳೂರು, ದಾವಣಗೆರೆ, ಮೈಸೂರು, ಮಹಾರಾಷ್ಟ್ರ ಭಾಗದಿಂದ ಜಿಲ್ಲೆಗೆ ಪ್ರವಾಸಿಗರು ಆಗಮಿಸಿದ್ದಾರೆ. ಕಾರವಾರದ ರವೀಂದ್ರನಾಥ್ ಠಾಗೋರ ಕಡಲ ತೀರದಲ್ಲಿ ಎಂಜಾಯ್ ಮಾಡುತ್ತಿದ್ದಾರೆ. ಮಹಿಳೆಯರು ಹಾಗೂ ಚಿಕ್ಕ ಮಕ್ಕಳು ಸೇರಿದಂತೆ ಜಲಸಾಹಸ ಕ್ರೀಡೆಯಲ್ಲಿ ತೊಡಗಿದ್ದಾರೆ.

ಮೈಸೂರಿನ ಕಾಸ್ಮೋಪಾಲಿಟಾನ್ ಕ್ಲಬ್ ನಲ್ಲಿ ಹೊಸ ವರ್ಷ ಸಂಭ್ರಮಕ್ಕೆ ಬರದ ಸಿದ್ದತೆ: ಸಾಂಸ್ಕೃತೀಕ ನಗರಿ ಮೈಸೂರಿನ ಕಾಸ್ಮೋಪಾಲಿಟಾನ್ ಕ್ಲಬ್‌ನಲ್ಲಿ ಹೊಸ ವರ್ಷ ಸಂಭ್ರಮಕ್ಕೆ ಬರದ ಸಿದ್ದತೆ ಮಾಡಿಕೊಳ್ಳಲಾಗಿದೆ. ರೆಡ್ ಕಾರ್ಪೆಟ್ ಥೀಮ್ ನಲ್ಲಿ ಬೆಂಗಳೂರಿನ ಕಲಾವಿದರಿಂದ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಸಂಪೂರ್ಣ ಕ್ಲಬ್?ನ್ನು ಕೆಂಪು ಮತ್ತು ಕಪ್ಪು ಬಣ್ಣದಿಂದ ಶೃಂಗಾರ ಮಾಡಲಾಗಿದ್ದು, ಬರುವಂತಹ ಕ್ಲಬ್ ಸದಸ್ಯರು ಹಾಗೂ ಗ್ರಾಹಕರಿಗೆ ರೌಂಡ್ ಟೇಬಲ್ ವ್ಯವಸ್ಥೆ ಮಾಡಲಾಗಿದೆ.

ಇಂದು ರಾತ್ರಿ ಹೊಸವರ್ಷದ ಸಂಭ್ರಮಾಚರಣೆಗೆ ಎಲ್ಲಾ ರೀತಿಯ ಸಿದ್ಧತೆ ನಡೆದಿದೆ. ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ಪೊಲೀಸರು ಕಟ್ಟೆಚ್ಚರವಹಿಸಿದ್ದಾರೆ. ಇನ್ನು ಹೊಸ ವರ್ಷದ ಸೆಲೆಬ್ರೇಷನ್ ಮಾಡುವ ವೇಳೆ ರೂಲ್ಸ್ ಬ್ರೇಕ್ ಮಾಡಿದರೆ ಕೇಸ್ ಹಾಕುವುದಾಗಿ ಚಾಮರಾಜನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪದ್ಮಿನಿ ಸಾಹು ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ. ಕೇರಳ, ತಮಿಳುನಾಡು ಗಡಿಯಲ್ಲಿ ಪೊಲೀಸರ ಪಿಕೆಟಿಂಗ್ ಪಾಯಿಂಟ್ ಹಾಕಲಾಗಿದೆ. ಇಂದು ಚೆಕ್ ಪೋಸ್ಟ್‌ಗಳಲ್ಲಿ ರಾತ್ರಿ ಪೂರ ಪೊಲೀಸರು ಗಸ್ತು ತಿರುಗಲಿದ್ದಾರೆ. ರೂಲ್ಸ್ ಬ್ರೇಕ್ ಮಾಡಿದ್ರೆ ಕಾನೂನು ರೀತಿಯ ಕ್ರಮ ಕೈಗೊಳ್ಳುವುದಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಾರ್ನಿಂಗ್ ಕೊಟ್ಟಿದ್ದಾರೆ.

RELATED ARTICLES
- Advertisment -
Google search engine

Most Popular