Monday, May 5, 2025
Google search engine

Homeರಾಜ್ಯಸುದ್ದಿಜಾಲಶಿಕ್ಷಣ ಎಂಬ ಮರದ ಬೇರು ಕಹಿ ಅದರ ಫಲ ಸಿಹಿ: ನಾಗೇಂದ್ರ

ಶಿಕ್ಷಣ ಎಂಬ ಮರದ ಬೇರು ಕಹಿ ಅದರ ಫಲ ಸಿಹಿ: ನಾಗೇಂದ್ರ

ಕೆ.ಆರ್.ನಗರ : ಶಿಕ್ಷಣ ಎಂಬ ಮರದ ಬೇರು ಯಾವಾಗಲೂ ಕಹಿಯಾಗಿದ್ದು ಆ ಮರ ಬೆಳೆದು ನೀಡುವ ಫಲ ಎಂದಿಗೂ ಸಿಹಿಯಾಗಿರುತ್ತದೆ ಎಂದು ಅಂಕನಹಳ್ಳಿ ಪ್ರೌಡ ಶಾಲೆಯ ಮುಖ್ಯಶಿಕ್ಷಕ ನಾಗೇಂದ್ರ ಹೇಳಿದರು. ಸಾಲಿಗ್ರಾಮ ತಾಲ್ಲೋಕಿನ ಹೊಸೂರು ಗ್ರಾಮದಲ್ಲಿ ೧೯೯೧-೯೨ರ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳ ಶಿಷ್ಯಸಮಾಗಮ ಮತ್ತು ಗುರುವಂದನಾ ಕಾರ್ಯಕ್ರಮದಲ್ಲಿ ತಮಗೆ ಏರ್ಪಡಿಸಿದ್ದ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು
ವಿದ್ಯೆಯನ್ನು ಸಮಾಜಕ್ಕೆ ಹಂಚಿಬೇಕು,ನಮ್ಮಿಂದ ಕಲಿತ ಮಕ್ಕಳು ವಿವಿಧ ಸರ್ಕಾರಿ ಕಚೇರಿಗಳಲ್ಲಿ ನಮ್ಮ ಮುಂದೆ ಹಿರಿಯ ಮತ್ತು ಕಿರಿಯ ಅಧಿಕಾರಿಗಳಾಗಿ ಕೆಲಸ ನಿರ್ವಹಿಸುವುದನ್ನು ನೋಡಿದಾಗ ತಮ್ಮಲ್ಲಿರುವ ಶಿಕ್ಷಣದ ವೃತ್ತಿ ಗೌರವ ಹೆಚ್ಚುತ್ತಿದೆ ಅದರೆ ಈಗಿನ ಯಾಂತ್ರೀಕೃತ ಶಿಕ್ಷಣ ಸಾಮಾಜಿಕ ಮೌಲ್ಯ ಮತ್ತು ಗುರು ಶಿಷ್ಯರ ಸಂಬಂಧವನ್ನು ಹಾಳು ಮಾಡುತ್ತಿದೆ ಎಂದರು.

ಹಿಂದ್ ಶಿಕ್ಷಕ ವೃತ್ತಿ ಹಣದ ಹೊರತಾಗಿತ್ತು ಆದರೆ ಇಂದು ವೃತ್ತಿಯನ್ನು ಹಣದಲ್ಲಿ ಅಳೆಯುವಂತಹ ಪ್ರೌವೃತ್ತಿ ಹೆಚ್ಚುತ್ತಿದ್ದು ೯೧-೯೨ರ ಸಾಲಿನ ಹಿರಿಯ ವಿದ್ಯಾರ್ಥಿಗಳು ತಮ್ಮ ಹಳೆಯ ಗುರುಗಳನ್ನು ನೆನೆದು ಅವರನ್ನು ಗೌರವಿಸುತ್ತಿರುವುದು ಹೆಚ್ಚು ಸಂತೋಷ ನೀಡುವ ಕೆಲಸವಾಗಿದ್ದು ಇಂದು ನನ್ನ ವೃತ್ತಿಯ ಅಂತಿಮ ದಿನವಾಗಿದ್ದು ಇಂದು ನನ್ನ ಹಳೆಯ ವಿದ್ಯಾರ್ಥಿಗಳು ಸೇರಿ ಮಾಡಿದ ಈ ಸನ್ಮಾನ ಎಲ್ಲಕ್ಕಿಂತ ಹೆಚ್ಚು ಎಂದು ಭಾವುಕವಾಗಿ ನುಡಿದರು.

ಹಳೆಯ ವಿದ್ಯಾರ್ಥಿಗಳ ಪರವಾಗಿ ದೈಹಿಕ ಶಿಕ್ಷಕ ರಾಮಚಂದ್ರ ಮಾತನಾಡಿ ಶಿಕ್ಷಕರಾಗುವುದು ಬೇರೆ ಆದರೆ ಮಕ್ಕಳ ದೃಷ್ಠಿಯಲ್ಲಿ ಆದರ್ಶ ಶಿಕ್ಷಕರಾಗಿ ಉಳಿಯುವುದು ಕಷ್ಟವಾಗಿದ್ದು ಅದರಲ್ಲಿ ನಾಗೇಂದ್ರ ಮಾಸ್ಟರ್ ಹಳ್ಳಿಗಾಡಿನ ಸಾವಿರಾರು ಮಕ್ಕಳಿಗಾಗಿ ನಿತ್ಯ ಐದಾರು ತಂಡಗಳನ್ನು ಮಾಡಿಕೊಂಡು ಶಾಲೆಯಲ್ಲಿ ಮಾತ್ರವಲ್ಲದೇ ಹಗಲುರಾತ್ರಿ ಮನೆಪಾಠವನ್ನು ಯಾವುದೇ ಪ್ರತಿಫಲಾಪೇಕ್ಷೆಯನ್ನು ಅಪೇಕ್ಷಿಸದೇ ಕಬ್ಬಿಣದ ಕಡಲೆಯಾಗಿದ್ದ ಗಣಿತವನ್ನು ಪಾಠ ಮಾಡಿದ್ದು ಇಂದಿಗೂ ನಮಗೆ ಸವಿನೆನಪಾಗಿ ಉಳಿದಿದ್ದು ಅವರ ಸೇವೆ ಹೀಗೆ ನಿರಂತರವಾಗಿ ಮಕ್ಕಳಿಗೆ ಸಿಗಲಿ ಎಂದರು.

ಇದೇ ಸಂದರ್ಭದಲ್ಲಿ ಅ ದಿನಗಳಲ್ಲಿ ನಾಗೇಂದ್ರ ಅವರಿಂದ ಕಲಿತ ಶಿಕ್ಷಣ ಕುರಿತು ಮೆಲುಕು ಹಾಕಲಾಯಿತು
ಕಾರ್ಯಕ್ರಮದಲ್ಲಿ ದೈಹಿಕ ಶಿಕ್ಷಕ ಎಸ್.ಆರ್.ರಾಮಚಂದ್ರ ಕವಿ ಸುನೀಲ್‌ಹಳಿಯೂರು ,ಜಮೃತ್‌ಖಾನ್, ಹರಿಪ್ರಸಾದ್, ಮಂಜುನಾಥ, ಸುಭಾಷಿಣಿ, ಪ್ರೇಮಾಕುಮಾರಿ, ಭಾರಾಣಿ, ವರಲಕ್ಷಿ, ಭಾರತಿ, ಚಂದ್ರಕಲಾ, ಸವಿತಾ, ಉದಯ್,ರಮೇಶ್,ರಾಮಕೃಷ್ಣ,ಚಂದ್ರಕಲಾ,ಧನಂಜಯ,ಕನ್ಯಾಕುಮಾರಿ, ಮಂಜು, ಶೋಭಾ,ಸತೀಶ, ಸ್ವಾಮಿಗೌಡ,ವೇಣು,ದೇವೇಂದ್ರ,ಪ್ರೇಮಾ,ಶೋಭಾರಾಣಿ,ಮಂಜುನಾಥ , ಅಶ್ವಿನಿ, ವಿದ್ಯಾ ಶಿಕ್ಷಣ ಸಂಸ್ಥೆಯಶ್ರೀಕಾಂತ್,ಅನಿತಾ ಅವರುಗಳು ಭಾಗವಹಿಸಿದ್ದರು.

ಉದ್ಯೋಗ ಇನ್ನಿತರೆ ಕಾರಣಗಳಿಂದ ಹುಟ್ಟಿದ ಊರು ಬಿಟ್ಟು ನಿತ್ಯ ಜೀವನದ ಹೋಯ್ದಾಟದಲ್ಲೇ ಊರು,ಹೆತ್ತವರು,ಅಕ್ಷರ ಕಲಿಸಿದ ಗುರುಗಳನ್ನು ನೆನೆಪಿಸಿಕೊಳ್ಳದ ಇಂದಿನ ದಿನಗಳಲ್ಲಿ ೩೪ವರ್ಷಗಳ ಹಿಂದಿನ ವಿದ್ಯಾರ್ಥಿಗಳ ತಂಡವೊಂದು ತಮ್ಮ ಶಿಕ್ಷಕ,ಮನೆಪಾಠದ ಗುರುಗಳನ್ನು ಸನ್ಮಾನಿಸಿ ಅಂದಿನ ದಿನಗಳನ್ನು ಮೆಲುಕು ಹಾಕುತ್ತಾ ಕಳೆದ ಈ ಸಮಾರಂಭ ಇಂದಿನ ಮಕ್ಕಳಿಗೆ ಒಂದು ಆದರ್ಶವಾಗಲಿದೆ
-ಕವಿ-ಲೇಖಕ ಸುನೀಲ್ ಕುಮಾರ್ ಹಳಿಯೂರು

RELATED ARTICLES
- Advertisment -
Google search engine

Most Popular