Tuesday, May 6, 2025
Google search engine

Homeರಾಜ್ಯಸುದ್ದಿಜಾಲಬಡ ವಿದ್ಯಾರ್ಥಿಗಳ ಶೈಕ್ಷಣಿಕ ಏಳಿಗೆಗೆ ಸಹಕಾರ ನೀಡಿ: ಎ.ಎಸ್.ಚನ್ನಬಸಪ್ಪ

ಬಡ ವಿದ್ಯಾರ್ಥಿಗಳ ಶೈಕ್ಷಣಿಕ ಏಳಿಗೆಗೆ ಸಹಕಾರ ನೀಡಿ: ಎ.ಎಸ್.ಚನ್ನಬಸಪ್ಪ


ಕೆ. ಆರ್.ನಗರ: ಸಮಾಜದ ಹೆಸರಿನಲ್ಲಿ ಸಂಘ ರಚಿಸಿಕೊಂಡು ಕೆಲಸ ಮಾಡುವವರು ತಮ್ಮ ಸಮುದಾಯದ ಬಡ ವಿದ್ಯಾರ್ಥಿಗಳ ಶೈಕ್ಷಣಿಕ ಏಳಿಗೆಗೆ ಸಹಕಾರ ನೀಡಬೇಕು ಎಂದು ಜಿ.ಪಂ.ಮಾಜಿ ಉಪಾಧ್ಯಕ್ಷ ಎ.ಎಸ್.ಚನ್ನಬಸಪ್ಪ ಹೇಳಿದರು.

ಪಟ್ಟಣದ ಬಸವೇಶ್ವರ ಬಡಾವಣೆಯಲ್ಲಿರುವ ಶಿವಾನುಭವ ಕಲ್ಯಾಣ ಮಂಟಪದಲ್ಲಿ ಭಾನುವಾರ ವೀರಶೈವ ಲಿಂಗಾಯಿತ ನೌಕರರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ನಡೆದ ಸರ್ವ ಸದಸ್ಯರ ಸಭೆ, ನೂತನ ವರ್ಷದ ಕ್ಯಾಲೆಂಡರ್ ಬಿಡುಗಡೆ, ಸಾಧಕರು ಮತ್ತು ನಿವೃತ್ತ ನೌಕರರ ಸನ್ಮಾನ ಸಮಾರಂಭದಲ್ಲಿ ಮಾತನಾಡಿದರು. ಇದರ ಜತೆಗೆ ಉತ್ತಮ ಕೆಲಸ ಮಾಡುವ ನೌಕರರು ಮತ್ತು ಇತರ ಸಂಘಟನೆಗಳ ಜತೆಗೆ ಸಾರ್ವಜನಿಕರು ಬೆನ್ನೆಲುಬಾಗಿ ನಿಲ್ಲಬೇಕೆಂದ ಅವರು ಅನಗತ್ಯವಾಗಿ ದುಂದು ವೆಚ್ಚ ಮಾಡದೆ ಉಪಯುಕ್ತ ಕೆಲಸ ಮಾಡುವಂತೆ ಸಂಘದ ಪದಾಧಿಕಾರಿಗಳಿಗೆ ಕಿವಿಮಾತು ಹೇಳಿದರು.

ಲಿಂಗಾಯಿತ ನೌಕರರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಸಮಾಜದ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಶಿಬಿರ ನಡೆಸಿ ಅವರು ಉನ್ನತ ಸ್ಥಾನಕ್ಕೇರಲು ಅನುಕೂಲ ಕಲ್ಪಿಸಿದರೆ ಅದಕ್ಕೆ ಸಹಕಾರ ನೀಡುವುದಾಗಿ ಘೋಷಿಸಿದರು. ತಾಲೂಕು ಸಂಘದ ಅಧ್ಯಕ್ಷ ರಾಜಶೇಖರ ಮಾತನಾಡಿ ವೀರಶೈವ ಲಿಂಗಾಯಿತ ಸಮಾಜವನ್ನು ಒಬಿಸಿ ಪಟ್ಟಿಗೆ ಸೇರ್ಪಡೆ ಮಾಡಲು ಸರ್ಕಾರ ಕ್ರಮ ಕೈಗೊಳ್ಳಬೇಕೆಂದರಲ್ಲದೆ ರಾಜ್ಯ ಸರ್ಕಾರಿ ನೌಕರರ ಸಂಘದ ಅದ್ಯಕ್ಷ ಷಡಕ್ಷರಿ ಅವರಿಗೆ ಅನಗತ್ಯ ತೊಂದರೆ ನೀಡುತ್ತಿರುವುದನ್ನು ಸಂಘ ಖಂಡಿಸುತ್ತದೆ ಎಂದರು.

ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದ ಅರಕೆರೆ ವಿರಕ್ತ ಮಠದ ಸಿದ್ದೇಶ್ವರ ಶ್ರೀಗಳು ಆಶೀರ್ವಚನ ನೀಡಿದರು. ಈ ಸಂಧರ್ಭದಲ್ಲಿ ನಿವೃತ್ತ ನೌಕರರು ಮತ್ತು ಕನ್ನಡಪ್ರಭ ವರದಿಗಾರ ಕುಪ್ಪೆಮಹದೇವಸ್ವಾಮಿ ಮತ್ತು ಇತರ ಸಾಧಕರು ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಿ ನೂತನ ವರ್ಷದ ಕ್ಯಾಲೆಂಡರ್ ಬಿಡುಗಡೆ ಮಾಡಲಾಯಿತು. ಲಿಂಗಾಯಿತ ನೌಕರರ ಸಂಘದ ಜಿಲ್ಲಾಧ್ಯಕ್ಷ ಆಲೂರು ಬಸವರಾಜು, ತಾಲೂಕು ಸಂಘದ ಅಧ್ಯಕ್ಷ ರಾಜಶೇಖರ, ಗೌರವಾಧ್ಯಕ್ಷ ಬಿ.ಎಸ್.ಚನ್ನಬಸಪ್ಪ, ಅಖಿಲ ಭಾರತ ವೀರಶೈವ ಮಹಾ ಸಭಾದ ತಾಲೂಕು ಘಟಕದ ಅಧ್ಯಕ್ಷ ಕೆಂಪರಾಜು, ಜಿಲ್ಲಾ ಉಪ-ಯೋಜನಾ ಸಮನ್ವಯಾಧಿಕಾರಿ ಎಸ್.ಸಿ.ಶಿವಮೂರ್ತಿ, ಗುಂಡ್ಲುಪೇಟೆ ಬಿಇಒ ರಾಜಶೇಖರ ಮಾತನಾಡಿದರು. ನಗರ ಯೋಜನಾ ಪ್ರಾಧಿಕಾರದ ಮಾಜಿ ನಿರ್ದೇಶಕ ಕೆ.ಎಸ್.ಮಹೇಶ್, ಜಿಲ್ಲಾ ಘಟಕದ ಉಪಾಧ್ಯಕ್ಷ ಅಣ್ಣಾಜಪ್ಪ, ಸಹ ಕಾರ್ಯದರ್ಶಿ ಎಸ್.ಹರೀಶ್, ತಾಲೂಕು ಘಟಕದ ಉಪಾಧ್ಯಕ್ಷರಾದ ಹೆಚ್.ಬಿ.ಅನುಸೂಯರಾಣಿ, ಕೆ.ಎಂ.ಹೆಮೇಶ್, ಪ್ರಧಾನ ಕಾರ್ಯದರ್ಶಿ ಕೆ.ಬಿ.ಚಂದ್ರಶೇಖರ್, ಖಜಾಂಚಿ ಗಂಗಾಧರ್, ಸಂಘದ ಮಾಜಿ ಅಧ್ಯಕ್ಷರಾದ ಅರುಣ್ ಬಿ.ನರಗುಂದ್, ಎಸ್.ವಿ.ಪ್ರಕಾಶ್, ಪದಾಧಿಕಾರಿಗಳಾದ ಕೆ.ಲೋಕೇಶ್, ಕೆ.ವಿ.ಸುರೇಶ್, ಎಂ.ಕೆ.ಸೋಮಶೇಖರ್, ಪಿ.ಆರ್.ಯೋಗೇಶ್, ಎಸ್.ಎಂ.ಗಂಗಾಧರ್, ರುದ್ರಮೂರ್ತಿ, ಕಲ್ಲೇಶ್, ಎಸ್.ಲೋಕೇಶ್, ಪಿ.ಎಲ್.ಕಾರ್ತಿಕ್, ಪುಟ್ಟಸ್ವಾಮಪ್ಪ, ಸುರೇಶ್, ವಸುಧಾ, ಎಸ್.ಆರ್.ಯೋಗಾನಂದ, ಬಸವರಾಜು, ಜಿ.ಆರ್.ಜಯಕುಮಾರ್, ಎ.ಎಸ್.ಪ್ರದೀಪ್ ಕುಮಾರ್, ಪುರಸಭೆ ಮಾಜಿ ಉಪಾಧ್ಯಕ್ಷೆ ನಾಗರತ್ನಮ್ಮ, ಸದಸ್ಯೆ ವೀಣಾವೃಷಬೇಂದ್ರ, ಸಮಾಜದ ಮುಖಂಡರಾದ ಬೇರ್ಯಪ್ರಕಾಶ್, ಮಲ್ಲಪ್ಪ, ನಟರಾಜು ಮತ್ತಿತರರು ಇದ್ದರು.

RELATED ARTICLES
- Advertisment -
Google search engine

Most Popular