Wednesday, April 23, 2025
Google search engine

Homeರಾಜ್ಯಸುದ್ದಿಜಾಲದೇವರು ಹೇಗಿರುತ್ತಾನೆ ಎಂಬುದನ್ನು ತೋರಿಸಿಕೊಟ್ಟವರು ಜಕಣಾಚಾರಿ : ಎಸ್.ಎನ್.ಚನ್ನಬಸಪ್ಪ

ದೇವರು ಹೇಗಿರುತ್ತಾನೆ ಎಂಬುದನ್ನು ತೋರಿಸಿಕೊಟ್ಟವರು ಜಕಣಾಚಾರಿ : ಎಸ್.ಎನ್.ಚನ್ನಬಸಪ್ಪ

ಶಿವಮೊಗ್ಗ: ದೇವರು ಹೇಗಿದ್ದಾನೆ ಎಂಬುದನ್ನು ತನ್ನ ಶಿಲ್ಪದ ಮೂಲಕ ಜಗತ್ತಿಗೆ ತೋರಿಸಿಕೊಟ್ಟವರು ಅಮರ ಶಿಲ್ಪಿ ಜಕಣಾಚಾರಿ ಎಂದು ಶಾಸಕ ಎಸ್. ಎನ್.ಚನ್ನಬಸಪ್ಪ ಅಭಿಪ್ರಾಯಪಟ್ಟರು. ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಮಹಾನಗರ ಪಾಲಿಕೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಜಿಲ್ಲಾ ವಿಶ್ವಕರ್ಮ ಮಹಾಸಭಾ ಶಿವಮೊಗ್ಗ ವತಿಯಿಂದ ಇಂದು ಕುವೆಂಪು ರಂಗಮಂದಿರದಲ್ಲಿ ನಡೆದ ವಿಶ್ವಕರ್ಮ ಅಮರಶಿಲ್ಪಿ ಜಕಣಾಚಾರಿ ಸಂಸ್ಮರಣಾ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.

ಜಕಣಾಚಾರಿಯಂತಹ ಶಿಲ್ಪಿಗಳಿಂದ ತಮ್ಮದೇ ಆದ ರೀತಿಯಲ್ಲಿ ಶಿಲ್ಪಕಲೆಯ ಮೂಲಕ ರಾಷ್ಟ್ರವನ್ನು ಕಟ್ಟುವ ಮೂಲಕ ನಮ್ಮದು ಸಾಂಸ್ಕೃತಿಕ ನೆಲೆಗಟ್ಟಿನ ಮತ್ತು ಉನ್ನತ ಪರಂಪರೆಯ ರಾಷ್ಟ್ರವಾಗಿದೆ. ಬೇಲೂರು, ಹಳೇಬೀಡು ಸೋಮನಾಥ ದೇವಸ್ಥಾನದಂತಹ ದೇಗುಲ ಕಟ್ಟಿದ ಮಹಾನ್ ವ್ಯಕ್ತಿತ್ವ ಅವರದು. ಅಂತಹ ಶಿಲ್ಪಿಗಳು ಇಡೀ ಜಗತ್ತನ್ನು ನೋಡುವಂತೆ ಮಾಡುತ್ತಾರೆ. ದೇಶದ ಶಿಲ್ಪಕಲೆಗೆ ದೊಡ್ಡ ಕೊಡುಗೆ ನೀಡಿದ್ದಾರೆ. ನಮ್ಮ ದೇಶಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದೆ, ಶಿಲ್ಪಕಲೆ ದೇಶದ ವಿಸ್ಮಯ. ನಾವು ದೇವಸ್ಥಾನಗಳ ಬಗ್ಗೆ ಒಲವು, ನಂಬಿಕೆ, ಆಸಕ್ತಿ ಇರುವವರು. ನಮ್ಮದು ಶಾಶ್ವತ, ದೇವರ ನಿರ್ಮಿತ ದೇಶ. ಸೋಮನಾಥಪುರ, ಅಯೋಧ್ಯೆ, ಕಾಶಿ ವಿಶ್ವನಾಥ ಸೇರಿದಂತೆ ಹಲವು ದೇಗುಲಗಳನ್ನು ಧ್ವಂಸ ಮಾಡಿ, ಹೋರಾಟದ ಮೂಲಕ ನಮ್ಮ ದೇಗುಲ ಮತ್ತು ಪರಂಪರೆಯನ್ನು ಉಳಿಸಿಕೊಂಡಿದ್ದೇವೆ ಎಂದರು.

ಶೃಂಗೇರಿಯ ಕನ್ನಡ ಪ್ರಾಧ್ಯಾಪಕ ಡಾ.ಕೆ.ಎಸ್.ವೆಂಕಪ್ಪ ಆಚಾರ್ಯ ವಿಶೇಷ ಉಪನ್ಯಾಸ ನೀಡಿ, ನಮ್ಮ ನಾಡಿನಲ್ಲಿ ನಮ್ಮ ಕಲೆ, ಕೌಶಲ್ಯ, ಸಾಧನೆಯಿಂದ ಇಂದು ಜಗತ್ತು ನಮ್ಮನ್ನು ಗುರುತಿಸುತ್ತಿದೆ. ಆದರೆ ಹಿಂದಿನ ಅನೇಕ ಶಿಲ್ಪಗಳ ತಯಾರಕರನ್ನು ಎಲ್ಲಿಯೂ ತೋರಿಸಲಾಗಿಲ್ಲ. ಕಲೆಯ ತಯಾರಕರನ್ನು ಜಗತ್ತಿಗೆ ತೋರಿಸಬೇಕಾಗಿದೆ. ಶಿಲ್ಪಿ ಅಥವಾ ಕಲಾವಿದರು ಮುಂದಿನ ಪೀಳಿಗೆಗೆ ತಿಳಿಸಬೇಕು ಅಂತಹ ಶಿಲ್ಪಿಗಳನ್ನು ಸ್ಮರಿಸಲು ಮತ್ತು ಸಮುದಾಯವು ಒಗ್ಗೂಡಲು ಈ ಸಂಸ್ಮರಣ ದಿನ ಉತ್ತಮ ವೇದಿಕೆಯಾಗಿದೆ ಎಂದು ಹೇಳಿದರು. ಜಕಣಾಚಾರಿ ೧೨ನೇ ಶತಮಾನದಲ್ಲಿ ತುಮಕೂರು ಸಮೀಪದ ಕ್ರೀಡಾಪುರದಲ್ಲಿ ಜನಿಸಿದರು.

ವಿಶ್ವವಿಖ್ಯಾತ ಬೇಲೂರು, ಹಳೇಬೀಡು, ಸೋಮನಾಥ ದೇವಸ್ಥಾನ ಈ ಶಿಲ್ಪದ ಮೂಲಕ ಜಗತ್ತಿಗೆ ತಮ್ಮ ಕಲೆ, ಕೌಶಲ್ಯ, ಬುದ್ಧಿವಂತಿಕೆ, ಸಮರ್ಪಣಾ ಮನೋಭಾವನೆಯನ್ನು ಕಟ್ಟಿಕೊಟ್ಟಿದೆ. ಈ ಬಗ್ಗೆ ನಾವೆಲ್ಲರೂ ಚಿಂತಿಸಬೇಕು ಎಂದು ಹೇಳಿದರು. ದೇಶಕ್ಕೆ ವಿಶ್ವಕರ್ಮ ಸಮಾಜದ ಕೊಡುಗೆ ಅತ್ಯಂತ ಚತುರ, ಕುಶಾಲಿ ಜಕಣಾಚಾರಿ ಅವರ ನೇತೃತ್ವದಲ್ಲಿ ಕೆಲಸ ಮಾಡಿದೆ. ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣದ ಅಂಗವಾಗಿ ನಮ್ಮ ಸಮುದಾಯದವರು ರಥ ಮತ್ತು ಪ್ರತಿಮೆ ನಿರ್ಮಿಸಿರುವುದು ಹೆಮ್ಮೆಯ ಸಂಗತಿ. ನಮ್ಮ ಕೌಶಲ್ಯ, ಪ್ರತಿಭೆಗೆ ಜನಮನ್ನಣೆ ಸಿಗುತ್ತಿದೆ, ಈ ಕಲೆಯನ್ನು ಮುಂದಿನ ಪೀಳಿಗೆಗೆ ಕೊಂಡೊಯ್ಯಬೇಕು. ಯುವಕರು ಭಾಗವಹಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು. ಅವರಿಗೂ ಇತಿಹಾಸದ ಜ್ಞಾನ ಹೆಚ್ಚಬೇಕು.

ಸಮಾಜ ಸಂಘಟಿತವಾಗಬೇಕು. ಕಲೆಗೆ ಪ್ರೋತ್ಸಾಹ ನೀಡಬೇಕು. ಮತ್ತು ಸಮಾಜವು ಗೌರವ ಮತ್ತು ಮನ್ನಣೆ ಪಡೆಯುವ ಕಾರ್ಯಗಳನ್ನು ಮಾಡಬೇಕು ಎಂದು ಆಶಿಸಿದರು. ಇದೇ ವೇಳೆ ಸಮಾಜದ ಇಬ್ಬರು ಸಾಧಕರಾದ ನವೀನ್ ಹಾಗೂ ಭರತ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಉಮೇಶ್ ಸ್ವಾಗತಿಸಿದರು. ಜಿಲ್ಲಾ ವಿಶ್ವಕರ್ಮ ಮಹಾಸಭಾ ಅಧ್ಯಕ್ಷ ಅಗರದಹಳ್ಳಿ ನಿರಂಜನಮೂರ್ತಿ, ಗೌರವಾಧ್ಯಕ್ಷ ಸತ್ಯನಾರಾಯಣ್, ಕಾರ್ಯದರ್ಶಿ ಎನ್.ಟಿ.ಬಸವರಾಜ್, ಜಿಲ್ಲಾ ವಿಶ್ವಕರ್ಮ ಬ್ರಾಹ್ಮಣ ಸಮಾಜದ ಅಧ್ಯಕ್ಷ ಸೋಮಾಚಾರಿ, ಪುರಸಭೆ ಮಾಜಿ ಉಪಾಧ್ಯಕ್ಷ ರಮೇಶ್, ಕಾಳಿಕಾಂಬಾ ದೇವಸ್ಥಾನದ ಶ್ರೀನಿವಾಸ ಮೂರ್ತಿ, ಸಮಾಜದ ಮುಖಂಡರು ಹಾಜರಿದ್ದರು.

RELATED ARTICLES
- Advertisment -
Google search engine

Most Popular