Sunday, April 20, 2025
Google search engine

Homeಸ್ಥಳೀಯವಿಧಾನ ಪರಿಷತ್ ಸದಸ್ಯ ಸಿ.ಎನ್. ಮಂಜೇಗೌಡ

ವಿಧಾನ ಪರಿಷತ್ ಸದಸ್ಯ ಸಿ.ಎನ್. ಮಂಜೇಗೌಡ

ಮೈಸೂರು: ಹೋಟೆಲ್ ಉದ್ಯಮ ಪ್ರವಾಸೋದ್ಯಮದ ಅವಿಭಾಜ್ಯ ಅಂಗವಾಗಿದ್ದು, ಸರ್ಕಾರ ಹೋಟೆಲ್ ಉದ್ಯಮವನ್ನು ಪ್ರೋತ್ಸಾಹಿಸಿ ಬೆಳೆಸಬೇಕೆಂದು ವಿಧಾನ ಪರಿಷತ್ ಸದಸ್ಯ ಸಿ.ಎನ್. ಮಂಜೇಗೌಡ ಒತ್ತಾಯಿಸಿದರು.
ಕನಕದಾಸ ನಗರ ದತ್ರಿವೇಣಿ ವೃತ್ತದ ಬಳಿ ಮೈಸೂರು ಮೈಲಾರಿ ಹೋಟೆಲ್‌ನ ೩ನೇ ಶಾಖೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಮೈಸೂರು ಕರ್ನಾಟಕದ ೨ನೇ ರಾಜಧಾನಿಯಾಗಿದ್ದು, ಪ್ರವಾಸಿಗರ ತಾಣವಾಗಿದೆ.
ದೇಶವಿದೇಶಗಳಿಂದ ಕೋಟ್ಯಾಂತರ ಜನರು ಮೈಸೂರು ವೀಕ್ಷಣೆಗೆ ಬರುತ್ತಾರೆ.ಅವರಿಗೆ ರುಚಿಯಾದ ಶುಚಿಯಾದ ಗುಣಮಟ್ಟದ ಆಹಾರವನ್ನು ನೀಡುವ ಮುಖಾಂತರ ಸೇವೆಸಲ್ಲಿಸಬೇಕು ಇದರಿಂದ ಪ್ರವಾಸೋದ್ಯಮದ ಬೆಳವಣಿಗೆಯಾಗಿ ವ್ಯಾಪಾರ ವಹಿವಾಟಿನಿಂದ ಜನರಿಗೂ ಅನುಕೂಲ ಸರ್ಕಾರಕ್ಕೂ ಆದಾಯ ಬರುತ್ತದೆ ಎಂದ ಅವರು, ಕೊರೋನಾ ಸಂದರ್ಭದಲ್ಲಿ ಹೋಟಲ್ ಉದ್ಯಮ ಬಹಳ ನಷ್ಟದಲ್ಲಿತ್ತು. ಅಲ್ಲಿ ಕೆಲಸಮಾಡುವ ಲಕ್ಷಾಂತರ ಜನರು ನಿರುದ್ಯೋಗಿಗಳಾಗಿ ಕೆಲಸವಿಲ್ಲದೆ ತೊಂದರೆ ಅನುಭವಿಸಬೇಕಾಯಿತು ಎಂದು ವಿಷಾದವ್ಯಕ್ತಪಡಿಸಿದ ಅವರು, ಈಗ ಹೋಟೆಲ್ ಉದ್ಯಮ ಚೇತರಿಸಿಕೊಂಡು ಬೆಳೆಯುತ್ತಿದೆ ಜನರಿಗೆ ಉತ್ತಮ ಸೇವೆಸಲ್ಲಿಸಿ ಎಲ್ಲರಿಗೂ ಒಳ್ಳೆಯದಾಗಲಿ ಎಂದರು.
ಈ ಸಂದರ್ಭದಲ್ಲಿ ಮೈಸೂರು ಮೈಲಾರಿ ಹೋಟೆಲ್‌ನ ಮಾಲೀಕರಾದ ಸಿದ್ದರಾಮೇಗೌಡ, ಮಮತ, ಹೋಟಲ್ ಮಾಲೀಕರ ಸಂಘದ ಅಧ್ಯಕ್ಷ ನಾರಾಯಣಗೌಡ, ದಿನೇಶ್‌ಗೌಡ ಹಾಜರಿದ್ದರು.

RELATED ARTICLES
- Advertisment -
Google search engine

Most Popular