Saturday, April 19, 2025
Google search engine

HomeUncategorizedರಾಷ್ಟ್ರೀಯಟ್ರಕ್ ಗೆ ಬಸ್ ಡಿಕ್ಕಿ: 14 ಮಂದಿ ಸಾವು, 27ಕ್ಕೂ ಅಧಿಕ ಜನರಿಗೆ ಗಾಯ

ಟ್ರಕ್ ಗೆ ಬಸ್ ಡಿಕ್ಕಿ: 14 ಮಂದಿ ಸಾವು, 27ಕ್ಕೂ ಅಧಿಕ ಜನರಿಗೆ ಗಾಯ

ಅಸ್ಸಾಂ: ಟ್ರಕ್ ಗೆ ಬಸ್ ಡಿಕ್ಕಿ ಹೊಡೆದ ಪರಿಣಾಮ 14 ಮಂದಿ ಸಾವನ್ನಪ್ಪಿದ್ದು, 27ಕ್ಕೂ ಅಧಿಕ ಜನರು ಗಾಯಗೊಂಡಿರುವ ಘಟನೆ ಅಸ್ಸಾಂನ ದೇರ್ಗಾಂವ್ ನಲ್ಲಿ ನಡೆದಿದೆ.

ಇಂದು ಬೆಳಗಿನ ಜಾವ ಸುಮಾರು 5 ಗಂಟೆ ವೇಳೆ 45 ಜನರನ್ನು ಹೊತ್ತೊಯ್ಯುತ್ತಿದ್ದ ಬಸ್ ಟ್ರಕ್ ಗೆ ಡಿಕ್ಕಿ ಹೊಡೆದಿತ್ತು, ಇದರಿಂದ ಕನಿಷ್ಠ 14 ಮಂದಿ ಸ್ಥಳದಲ್ಲೇ ಉಸಿರು ಚೆಲ್ಲಿದ್ದಾರೆ.

ತಿನ್ಸುಕಿಯಾದ ತಿಲಿಂಗ ಮಂದಿರಕ್ಕೆ 45 ಸದಸ್ಯರನ್ನು ಒಳಗೊಂಡ ಬಸ್ ತೆರಳುತ್ತಿತ್ತು. ಪಿಕ್ನಿಕ್ ಗೆಂದು ಜನರು ಬೆಳಗಿನ ಜಾವ 3 ಗಂಟೆಗೆ ಪ್ರಯಾಣವನ್ನು ಆರಂಭಿಸಿದ್ದರು.

ಮಾರ್ಗರಿಟಾದಿಂದ ಬರುತ್ತಿದ್ದ ಕಲ್ಲಿದ್ದಲು ತುಂಬಿದ ಟ್ರಕ್ ಬಸ್ಗೆ ಮುಖಾಮುಖಿ ಡಿಕ್ಕಿ ಹೊಡೆದಿದೆ ಎಂದು ಪೊಲೀಸರು ಹೇಳಿದ್ದಾರೆ. ಪೊಲೀಸರು ಸ್ಥಳಕ್ಕೆ ಧಾವಿಸಿ ಗಾಯಗೊಂಡ ಪ್ರಯಾಣಿಕರನ್ನು ರಕ್ಷಿಸಿ ಜೋರ್ಹತ್ ವೈದ್ಯಕೀಯ ಕಾಲೇಜಿಗೆ ದಾಖಲಿಸಿದ್ದಾರೆ.

ಸ್ಥಳದಲ್ಲೇ ಸಾವನ್ನಪ್ಪಿದ 14 ಪ್ರಯಾಣಿಕರ ಮೃತದೇಹಗಳನ್ನು ಹೊರತೆಗೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಈ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

RELATED ARTICLES
- Advertisment -
Google search engine

Most Popular