Monday, April 21, 2025
Google search engine

HomeUncategorizedರಾಷ್ಟ್ರೀಯದೆಹಲಿ ಮದ್ಯ ನೀತಿ ಪ್ರಕರಣ: ಮೂರನೇ ಬಾರಿ ವಿಚಾರಣೆಗೆ ಗೈರಾದ ಅರವಿಂದ್ ಕೇಜ್ರಿವಾಲ್

ದೆಹಲಿ ಮದ್ಯ ನೀತಿ ಪ್ರಕರಣ: ಮೂರನೇ ಬಾರಿ ವಿಚಾರಣೆಗೆ ಗೈರಾದ ಅರವಿಂದ್ ಕೇಜ್ರಿವಾಲ್

ನವದೆಹಲಿ: ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ದೆಹಲಿ ಮದ್ಯ ನೀತಿ ಪ್ರಕರಣದಲ್ಲಿ ಇಂದು ವಿಚಾರಣೆಗೆ ಹಾಜರಾಗುವುದಿಲ್ಲ ಎಂದು ಆಮ್ ಆದ್ಮಿ ಪಕ್ಷದ ಮೂಲಗಳು ತಿಳಿಸಿವೆ.

ಈ ಕುರಿತು ಪ್ರತಿಕ್ರಿಯೆ ನೀಡಿದ ಆಪ್ ಜಾರಿ ನಿರ್ದೇಶನಾಲಯ ನೀಡಿರುವ ಸಮನ್ಸ್‌ ಗಳು ಕಾನೂನುಬಾಹಿರವಾಗಿದ್ದು, ಕೇಜ್ರಿವಾಲ್ ಅವರನ್ನು ಬಂಧಿಸುವುದೊಂದೇ ಗುರಿಯಾಗಿದ್ದು, ಅಲಲ್ದೆ ಚುನಾವಣೆ ಹತ್ತಿರವಾಗುವ ಸಂದರ್ಭದಲ್ಲಿ ಪ್ರಚಾರದಿಂದ ದೂರ ಉಳಿಸುವಂತೆ ಪ್ರಯತ್ನಗಳು ನಡೆಸುತ್ತಿವೆ ಎಂದು ಆಪ್ ಹೇಳಿದೆ.

ದೆಹಲಿ ಮದ್ಯ ನೀತಿ ಹಗರಣ ಪ್ರಕರಣದಲ್ಲಿ ಅರವಿಂದ್ ಕೇಜ್ರಿವಾಲ್ ಅವರಿಗೆ ಎರಡು ಬಾರಿ ಸಮನ್ಸ್ ನೀಡಲಾಗಿದ್ದು ಇದಕ್ಕೆ ಹಾಜರಾಗದ ಕರಣ ಮೂರನೇ ಸಮನ್ಸ್ ನೀಡಲಾಗಿದೆ ಎನ್ನಲಾಗಿದೆ.

ಮೊದಲ ಬಾರಿಗೆ ನವೆಂಬರ್ 2 ರಂದು ಅವರಿಗೆ ಸಮನ್ಸ್ ಜಾರಿ ಮಾಡಲಾಗಿತ್ತು. ಇದಾದ ಬಳಿಕ ಡಿಸೆಂಬರ್ 21ರಂದು ಸಮನ್ಸ್ ಜಾರಿ ಮಾಡಲಾಗಿತ್ತು. ಎರಡೂ ಸಮನ್ಸ್ ನಂತರ ಇಡಿ ಮುಂದೆ ಹಾಜರಾಗಿರಲಿಲ್ಲ. ಡಿಸೆಂಬರ್ 21 ರಂದು, ಇಡಿಯಿಂದ ಸಮನ್ಸ್‌ಗೆ ಮುಂಚೆಯೇ, ಕೇಜ್ರಿವಾಲ್ ವಿಪಸ್ಸನಾಗೆ ಹೋಗಿದ್ದರು ಇದಾದ ಬಳಿಕ ಡಿಸೆಂಬರ್ 30 ರಂದು ಮರಳಿದರು. ಕೇಜ್ರಿವಾಲ್ ಅವರು ತನಿಖಾಧಿಕಾರಿಗೆ ಪತ್ರ ಬರೆದು ತಮ್ಮ ವಿರುದ್ಧ ಖುದ್ದು ಹಾಜರಾತಿಗಾಗಿ ನೀಡಿರುವ ನೋಟಿಸ್ ಕಾನೂನಿಗೆ ಅನುಸಾರವಾಗಿಲ್ಲ ಮತ್ತು ಅದನ್ನು ಹಿಂಪಡೆಯಬೇಕು ಎಂದು ಹೇಳಿದ್ದಾರೆ.

ಕೇಜ್ರಿವಾಲ್ ಅವರು ನವೆಂಬರ್ 2 ಮತ್ತು ಡಿಸೆಂಬರ್ 21 ರ ಹಿಂದಿನ ಎರಡು ಸಮನ್ಸ್‌ ಗಳಲ್ಲಿ ತನಿಖಾ ಸಂಸ್ಥೆಯ ಮುಂದೆ ಹಾಜರಾಗಲು ನಿರಾಕರಿಸಿದ ನಂತರ ಇದು ಮೂರನೇ ನೋಟಿಸ್ ಆಗಿದೆ.

ಕೇಜ್ರಿವಾಲ್ ಅವರು ತನಿಖಾ ಏಜೆನ್ಸಿಯೊಂದಿಗೆ ಸಹಕರಿಸಲು ಸಿದ್ಧರಿದ್ದಾರೆ ಆದರೆ ತನಿಖಾ ಏಜೆನ್ಸಿಯ ಉದ್ದೇಶ ತನಿಖೆ ನಡೆಸುವುದಲ್ಲಾ ಬದಲಾಗಿ ಬಂಧಿಸುವುದು ಉದ್ದೇಶವಾಗಿದೆ ಹಾಗಾಗಿ ವಿಚಾರಣೆಗೆ ಹಾಜರಾಗುತ್ತಿಲ್ಲ ಎಂದು ಪಕ್ಷ ಹೇಳಿದೆ.

ಚುನಾವಣೆಗೂ ಮುನ್ನವೇ ನೋಟಿಸ್ ಕಳುಹಿಸಿದ್ದು ಏಕೆ? ಕೇಜ್ರಿವಾಲ್ ಅವರನ್ನು ಚುನಾವಣಾ ಪ್ರಚಾರದಿಂದ ತಡೆಯುವ ಪ್ರಯತ್ನವೇ ನೋಟೀಸ್,’’ ಎಂದು ಪಕ್ಷ ಆರೋಪಿಸಿದೆ.

RELATED ARTICLES
- Advertisment -
Google search engine

Most Popular