Monday, April 21, 2025
Google search engine

Homeರಾಜ್ಯರಾಗಿ ಮುದ್ದೆ, ನಾಟಿ ಕೋಳಿ ಸಾರು ಊಟದ ಸ್ಪರ್ಧೆ: ಬರೋಬ್ಬರಿ 10 ಮುಂದೆ ಉಂಡ ಈರೇಗೌಡ

ರಾಗಿ ಮುದ್ದೆ, ನಾಟಿ ಕೋಳಿ ಸಾರು ಊಟದ ಸ್ಪರ್ಧೆ: ಬರೋಬ್ಬರಿ 10 ಮುಂದೆ ಉಂಡ ಈರೇಗೌಡ

ಮಂಡ್ಯ: ಸಿರಿಧಾನ್ಯ ಹಬ್ಬ ಹಿನ್ನೆಲೆ ಮಂಡ್ಯದ ಅಂಬೇಡ್ಕರ್ ಭವನದಲ್ಲಿ ರಾಗಿ ಮುದ್ದೆ, ನಾಟಿ ಕೋಳಿ ಸಾರು ಊಟದ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು.

ಊಟದ ಸ್ಪರ್ಧೆಯಲ್ಲಿ 2 ಕೆಜಿ 717 ಗ್ರಾಂ ತೂಕದ ಬರೋಬ್ಬರಿ 10 ಮುದ್ದೆ ತಿಂದು ಪ್ರಥಮ ಬಹುಮಾನವನ್ನು ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನ ಅರಕೆರೆಯ ಈರೇಗೌಡ ಪಡೆದುಕೊಂಡಿದ್ದಾರೆ.

ರಾಜ್ಯದ ವಿವಿಧೆಡೆ ನಡೆದ ಸ್ಪರ್ಧೆಯಲ್ಲಿ ಭಾಗವಹಿಸಿ ಹಲವು ಬಹುಮಾನವನ್ನು ಈರೇಗೌಡ ಗೆದ್ದಿದ್ದಾರೆ.

1ಕೆಜಿ 652 ಗ್ರಾಂ ತೂಕದ 6 ಮುದ್ದೆ ತಿಂದ ದಿಲೀಪ್ ದ್ವಿತೀಯ ಸ್ಥಾನ, 1ಕೆಜಿ 544 ಗ್ರಾಂ ತೂಕದ 6 ಮುದ್ದೆ ಸೇವಿಸಿದ ರವೀಂದ್ರ ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ.

7 ಮುದ್ದೆ ತಿಂದು ಸ್ಪರ್ಧಾಳುಗಳನ್ನ ಕೃಷಿ ಇಲಾಖೆ ಜಂಟಿ ನಿರ್ದೇಶಕ ಅಶೋಕ್ ಹುರಿದುಂಬಿಸಿದ್ದಾರೆ.

RELATED ARTICLES
- Advertisment -
Google search engine

Most Popular