Sunday, April 20, 2025
Google search engine

Homeರಾಜ್ಯಚಾಮರಾಜಪೇಟೆಯಲ್ಲಿ 32 ಕೋಟಿ ರೂ. ವೆಚ್ಚದ ಅಭಿವೃದ್ಧಿ ಕಾಮಗಾರಿಗಳಿಗೆ ಸಚಿವ ಜಮೀರ್ ಅಹಮದ್ ಖಾನ್ ಚಾಲನೆ

ಚಾಮರಾಜಪೇಟೆಯಲ್ಲಿ 32 ಕೋಟಿ ರೂ. ವೆಚ್ಚದ ಅಭಿವೃದ್ಧಿ ಕಾಮಗಾರಿಗಳಿಗೆ ಸಚಿವ ಜಮೀರ್ ಅಹಮದ್ ಖಾನ್ ಚಾಲನೆ

ಬೆಂಗಳೂರು : ಚಾಮರಾಜ ಪೇಟೆ ಕ್ಷೇತ್ರದಲ್ಲಿ ಮುಖ್ಯಮಂತ್ರಿ ನವ ನಗರೋತಾನ ಯೋಜನೆಯಡಿ 29.31 ಕೋಟಿ ರೂ. ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಸಚಿವ ಜಮೀರ್ ಅಹಮದ್ ಖಾನ್ ಬುಧವಾರ ಗುದ್ದಲಿ ಪೂಜೆ ನೆರವೇರಿಸಿದರು.
ವಾರ್ಡ್ ಸಂಖ್ಯೆ 140 ಹಾಗೂ 137 ವ್ಯಾಪ್ತಿ ಗೆ ಬರುವ ಎನ್ ಟಿ ಪೇಟೆ, ಮಕ್ಕಳ ಕೂಟ, ಚಾಮರಾಜಪೇಟೆ ಮೂರನೇ ಹಾಗೂ ನಾಲ್ಕನೇ ಮುಖ್ಯ ರಸ್ತೆ ಯಲ್ಲಿ ರಸ್ತೆ ಅಭಿವೃದ್ಧಿ, ಶೌಚಾಲಯ ನಿರ್ಮಾಣ, ಒಳಚರಂಡಿ ಕಾಮಗಾರಿಗಳಿಗೆ ಚಾಲನೆ ನೀಡಿದರು.
ಇದೇ ವೇಳೆ ರಾಯಪುರಂ ನಲ್ಲಿ ಸ್ಮಾರ್ಟ್ ಸಿಟಿ ಯೋಜನೆಯಡಿಯಲ್ಲಿ ಎರಡು ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿ ಪಡಿಸಿರುವ ಬಿಬಿಎಂಪಿ ಕಾಲೇಜು ಉದ್ಘಾಟನೆ ಮಾಡಿದರು.


60 ಲಕ್ಷ ರೂ. ವೆಚ್ಚದಲ್ಲಿ ಒಳಚರಂಡಿ ಕೊಳವೆ ಅಳವಡಿಕೆ ಕಾಮಗಾರಿಗೂ ಗುದ್ದಲಿ ಪೂಜೆ ನೆರವೇರಿಸಲಾಯಿತು.
ಸ್ಥಳೀಯ ಮುಖಂಡರಾದ ಅಲ್ತಾಫ್ ಖಾನ್,ಚಂದ್ರಶೇಖರ್, ಸರ್ವರ್ ಬೇಗ್, ಗೌಸಿ, ವಿನಾಯಕ್, ನಾರಾಯಣ ಸ್ವಾಮಿ, ಸತ್ಯಣ್ಣ ಮತ್ತಿತರರು ಉಪಸ್ಥಿತರಿದ್ದರು.

RELATED ARTICLES
- Advertisment -
Google search engine

Most Popular