Sunday, April 20, 2025
Google search engine

Homeಸ್ಥಳೀಯಆದಿವಾಸಿಗಳ ಸಮಗ್ರ ಅಭಿವೃದ್ಧಿ ಅನುಷ್ಟಾನಕ್ಕೆ ಸಮೀಕ್ಷೆ

ಆದಿವಾಸಿಗಳ ಸಮಗ್ರ ಅಭಿವೃದ್ಧಿ ಅನುಷ್ಟಾನಕ್ಕೆ ಸಮೀಕ್ಷೆ

ಎಡತೊರೆ ಮಹೇಶ್

ಎಚ್.ಡಿ.ಕೋಟೆ: ಪ್ರಧಾನ ಮಂತ್ರಿ ಜನ್ ಜಾತಿ ಆದಿವಾಸಿ ನ್ಯಾಯ ಮಹಾ ಅಭಿಯಾನ ಯೋಜನೆಯಡಿಯಲ್ಲಿ ದುರ್ಬಲ ಬುಡಕಟ್ಟು ಸಮುದಾಯಗಳ ಅಭಿವೃದ್ಧಿಗಾಗಿ ಕರ್ನಾಟಕದಲ್ಲಿ 153 ಹಾಡಿಗಳಲ್ಲಿ ಜೇನುಕುರುಬ ಜನಾಂಗವನ್ನು ಸಮೀಕ್ಷೆ ಮಾಡಬೇಕಾಗಿದೆ.

ಅದರಂತೆ ಮೈಸೂರು ಜಿಲ್ಲೆಯ ಹೆ.ದೇ.ಕೋಟೆ ತಾಲೋಕಿನ ಎಲ್ಲಾ ಜೇನುಕುರುಬ ಹಾಡಿಗಳಿಗೆ ಜಿಲ್ಲಾ ಮಟ್ಟದ ನೋಡಲ್ ಅಧಿಕಾರಿಗಳು ನಿಯೋಜನೆ ಮಾಡಿದ್ದು ಇಂದಿನಿಂದ ಪ್ರತಿ ಹಾಡಿಗಳಲ್ಲೂ ಸಮೀಕ್ಷೆ ಕಾರ್ಯ ಪ್ರಾರಂಭವಾಗಿದೆ.

ಈ ಸಮೀಕ್ಷೆ ಯಿಂದ ಜೇನುಕುರುಬರ ವಾಸ್ತವ ಸ್ಥಿತಿಗತಿಗಳನ್ನು ವರದಿ ಮಾಡುವ ಉದ್ದೇಶವಾಗಿದ್ದು. ಮನೆ. ಶೌಚಾಲಯ. ವಿದ್ಯುತ್. ನೀರು. ಗ್ಯಾಸ್. ಜಮೀನು. ಆಧಾರ. ಜನನ ಪ್ರಮಾಣ ಪತ್ರ. ಜಾತಿ/ಆದಾಯ. ಆರೋಗ್ಯ ಚೀಟಿ. ನರೇಗಾ. ಮತ್ತಿತರ ಮೂಲಭೂತ ಸವಲತ್ತುಗಳನ್ನು ಸಮಗ್ರವಾಗಿ ತಲುಪಿವೆಯೇ ಮತ್ತು ಎಷ್ಟರ ಮಟ್ಟಿಗೆ ತಲುಪಿವೆ ಎಂಬುದನ್ನ ವರದಿಸಲಾಗುತ್ತಿದೆ.

ಈ ಸಮೀಕ್ಷೆಯ ಮೇಲುಸ್ತುವಾರಿ ವಹಿಸಿರುವ ಯೋಜನಾ ನಿರ್ದೇಶಕರಾದ ಶ್ರೀಮತಿ ಶುಭ ಕುಂಟೇರಿ ಹಾಡಿಗೆ ಭೇಟಿ ನೀಡಿ ಹಾಡಿಯ ಪರಿಸ್ಥಿತಿಯನ್ನು ನೋಡಿ ಬೇಸರ ವ್ಯಕ್ತಪಡಿಸಿ ಇಒ ಧರಣೇಶ್ ರವರನ್ನ ದೂರವಾಣಿ ಮೂಲಕ ಸಂಪರ್ಕಿಸಿ ಸಂಭಂದಪಟ್ಟ ಗ್ರಾಮ ಪಂಚಾಯತಿ ಅಧಿಕಾರಿಗಳಿಗೆ  ಭೇಟಿ ನೀಡಿ ಸಮಸ್ಯೆ ಬಗೆಹರಿಸಲು ಸೂಚಿಸುವಂತೆ ತಿಳಿಸಿದರು. ಹಾಗೆ ವಿಷಯವನ್ನ ಜಿಲ್ಲಾಧಿಕಾರಿಗಳ ಗಮನಕ್ಕೆ ತರುವಂತೆ ಮಾಹಿತಿ ನೀಡಿದರು.

ಇದೆ ವೇಳೆ ಹಾಡಿಯ ಯುವತಿ ಪ್ರಶಾಂತಿ ಮತ್ತು ಅರಣ್ಯ ಹಕ್ಕು ಸಮಿತಿ ಸದಸ್ಯ ರಘು ಹಾಡಿಯ ಮೂಲಭೂತ ಸಮಸ್ಯೆಗಳನ್ನು ಎಳೆ ಎಳೆಯಾಗಿ ಬಿಚ್ವಿಟ್ಟರು ಮತ್ತು ಮನೆ ಮನೆ ಹತ್ತಿರ ಕರೆದು ತೋರಿಸಿದರು.

ಇದೇ ವೇಳೆಯಲ್ಲಿ ಪುರಸಭಾ ಮುಖ್ಯಾಧಿಕಾರಿ ಪಿ.ಸುರೇಶ್. ಜೀವಿಕ ಉಮೇಶ್. ಬಿ. ನೂರಲಕುಪ್ಪೆ. ಸಮೀಕ್ಷೆ ಅಧಿಕಾರಿಗಳಾದ ಡಾ. ಬಿ. ಎಸ್. ಶಂಕರ್. ಹೆಚ್. ಬಿ.  ಶ್ರೀನಿವಾಸ. ಕಾಮರಾಜ್. ಸಂತೋಷ. ಮಹೇಶ್. ತೇಜುಗುರುಮಲ್ಲು. ಹಾಜರಿದ್ದರು.

RELATED ARTICLES
- Advertisment -
Google search engine

Most Popular