ರಾಮನಗರ: ಹಾರೋಹಳ್ಳಿ ಕುಂಬಾರ ಕಾಲೋನಿಯಲ್ಲಿರುವ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯ ಆವರಣದಲ್ಲಿ ಜ. ೮ರ ಸೋಮವಾರ ಬೆಳಿಗ್ಗೆ ೧೦ ಗಂಟೆಗೆ ಜಿಲ್ಲಾ ಮಟ್ಟದ ಶಿಶಿಕ್ಷು ಮೇಳ ಹಮ್ಮಿಕೊಳ್ಳಲಾಗಿದೆ.
ಮೇಳದಲ್ಲಿ ಹಲವು ಉದ್ಯಮಗಳು ಭಾಗವಹಿಸಲಿದ್ದು, ಶಿಶಿಕ್ಷುಗಳನ್ನು ಆಯ್ಕೆ ಮಾಡಲಾಗುವುದು. ಆದ್ದರಿಂದ ಸರ್ಕಾರಿ ಹಾಗೂ ಖಾಸಗಿ ಕೈಗಾರಿಕಾ ತರಬೇತಿ ಸಂಸ್ಥೆಗಳಲ್ಲಿ ತರಬೇತಿ ಪಡೆದು ತೇರ್ಗಡೆಯಾಗಿರುವ ಅಭ್ಯರ್ಥಿಗಳು, ಹಾಲಿ ತರಬೇತಿ ಪಡೆಯುತ್ತಿರುವ ಎರಡನೇ ವರ್ಷದ ತರಬೇತಿದಾರರು, ಡಿಪ್ಲೊಮಾ ಪದವೀಧರರು ಹಾಗೂ ಎಸ್.ಎಸ್.ಎಲ್.ಸಿ ಪಾಸಾಗಿ ಓದು ಮುಂದುವರಿಸದೇ ಇರುವ ಅಭ್ಯರ್ಥಿಗಳು, ಶಿಶಿಕ್ಷು ಮೇಳದಲ್ಲಿ ಭಾಗವಹಿಸಿ ಈ ಅವಕಾಶವನ್ನು ಸದುಪಯೋಗ ಪಡೆದುಕೊಳ್ಳಲು ತಿಳಿಸಲಾಗಿದೆ.
ಹೆಚ್ಚಿನ ಮಾಹಿತಿಗೆ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ, ಹಾರೋಹಳ್ಳಿ ಇಲ್ಲಿನ ಪ್ರಾಚಾರ್ಯರು ಮೊ.ನಂ. ೯೮೪೫೦೬೧೮೨೨ ಅಥವಾ ತರಬೇತಿ ಅಧಿಕಾರಿಗಳು ಮೊ.ನಂ. ೭೮೯೨೬೧೨೨೦೫ ಇವರನ್ನು ಹಾರೋಹಳ್ಳಿ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯ ಪ್ರಾಚಾರ್ಯರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.