ರಾಮನಗರ: ಟೊಯೋಟಾ ಕರ್ಲೋಸ್ಕರ್ ಆಟೋ ಪಾರ್ಟ್ಸ್ ಬಿಡದಿ ಕೈಗಾರಿಕಾ ಪ್ರದೇಶ ಕಂಪನಿಯ ಮುಖ್ಯಸ್ಥರಿಂದ ಸಾಮಾಜಿಕ ಹೊಣೆಗಾರಿಕೆ ಕಾರ್ಯನೀತಿ (ಸಿಎಸ್‌ಆರ್) ಅಡಿಯಲ್ಲಿ ರಾಮನಗರ ಅಗ್ನಿಶಾಮಕ ಠಾಣೆಯಲ್ಲಿ ಮಲ್ಟಿಜಿಮ್ ಸೆಟ್‌ನ್ನು ಅಳವಡಿಸಿ ಡಿ. ೪ರ ಗುರುವಾರ ಉದ್ಘಾಟನೆ ಮಾಡಲಾಯಿತು.
ಕಂಪನಿಯ ನಿರ್ದೇಶಕ ತಬರೇಜ್ ಅಹ್ಮದ್ ಅವರು ಮಾತನಾಡಿ, ಅಗ್ನಿಶಾಮಕ ಇಲಾಖೆಯ ಅಧಿಕಾರಿ ಮತ್ತು ಸಿಬ್ಬಂದಿಗಳು ಅಗ್ನಿ ಕರೆಯಲ್ಲಿ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದ್ದು, ರಾಮನಗರ ಅಗ್ನಿಶಾಮಕ ಠಾಣೆಯ ಅಧಿಕಾರಿ ಮತ್ತು ಸಿಬ್ಬಂದಿಯವರಿಗೆ ತಮ್ಮ ಶರೀರವನ್ನು ಸಧೃಡವಾಗಿ ಇಟ್ಟುಕೊಳ್ಳುವ ಕಾರಣ ಟೊಯೋಟಾ ಕರ್ಲೋಸ್ಕರ್ ಆಟೋ ಪಾರ್ಟ್ಸ್ ವತಿಯಿಂದ ಮಲ್ಟಿಜಿಮ್ ಸೆಟ್‌ನ್ನು ಅಳವಡಿಸಲಾಗಿದೆ ಎಂದು ತಿಳಿಸಿದರು.
ಜಿಲ್ಲಾ ಅಗ್ನಿಶಾಮಕ ಅಧಿಕಾರಿಗಳು ಮಾತನಾಡಿ, ರಾಮನಗರ ಅಗ್ನಿಶಾಮಕ ಠಾಣೆಯಲ್ಲಿರುವ ಸಿಬ್ಬಂದಿರವರಿಗೆ ಬಿಡುವಿನ ಸಮಯದಲ್ಲಿ ಆರೋಗ್ಯದ ಹಿತದೃಷ್ಠಿಯಿಂದ ವ್ಯಾಯಾಮ ಮಾಡಲು ಶರೀರವನ್ನು ಸಧೃಡವಾಗಿಟ್ಟುಕೊಳ್ಳಲು ಮಲ್ಟಿಜಿಮ್ ಸೆಟ್‌ನ್ನು ವಿತರಿಸಿರುವ ಟೋಯೋಟಾ ಕರ್ಲೋಸ್ಕರ್ ಆಟೋಪಾರ್ಟ್ಸ್ನ ನಿರ್ದೇಶಕರಿಗೆ ಹಾಗೂ ತಂಡದವರಿಗೆ ಧನ್ಯವಾದಗಳನ್ನು ಹೇಳಿ ಇಲಾಖೆ ಪರವಾಗಿ ಸನ್ಮಾನ ಮಾಡಿದರು.
ವ್ಯವಸ್ಥಾಪಕ ನಿರ್ದೇಶಕ ಬಿ.ಎಸ್. ನಾಗರಾಜು, ಕೆ.ಜಿ. ಶ್ರೀನಿವಾಸ್, ಇಎ, ಸಿಎಸ್‌ಆರ್, ಟಿಕೆಇಪಿ ಮತ್ತು ಸೇಪ್ಟಿ ತಂಡದವರು ಉಪಸ್ಥಿತರಿದ್ದರು.
