Wednesday, April 23, 2025
Google search engine

Homeಅಪರಾಧಅಂಚೆ ಇಲಾಖೆ ಉದ್ಯೋಗ ನೇಮಕಾತಿಯಲ್ಲಿ ಎಸ್‍'ಎಸ್‍’ಎಲ್‍’ಸಿ ನಕಲಿ ಅಂಕಪಟ್ಟಿ ನೀಡಿ ಸಿಕ್ಕಿಬಿದ್ದ ಅಭ್ಯರ್ಥಿಗಳು

ಅಂಚೆ ಇಲಾಖೆ ಉದ್ಯೋಗ ನೇಮಕಾತಿಯಲ್ಲಿ ಎಸ್‍’ಎಸ್‍’ಎಲ್‍’ಸಿ ನಕಲಿ ಅಂಕಪಟ್ಟಿ ನೀಡಿ ಸಿಕ್ಕಿಬಿದ್ದ ಅಭ್ಯರ್ಥಿಗಳು

ಕಲಬುರಗಿ: ಅಂಚೆ ಇಲಾಖೆಯ 1714 ಹುದ್ದೆಗಳ ನೇಮಕಾತಿಯಲ್ಲಿ ಉದ್ಯೋಗ  ಪಡೆಯಲು ಕಲಬುರಗಿಯಲ್ಲಿ ಅಭ್ಯರ್ಥಿಗಳು ಎಸ್‍’ಎಸ್‍’ಎಲ್‍’ಸಿ ನಕಲಿ ಅಂಕಪಟ್ಟಿ ನೀಡಿ ಸಿಕ್ಕಿಬಿದ್ದಿದ್ದಾರೆ.

ಅಂಚೆ ಇಲಾಖೆಯಿಂದ ಎಸ್ ​ಎಸ್ ​ಎಲ್ ​ಸಿ ಅಂಕಪಟ್ಟಿ ಪರಿಶೀಲನೆ ವೇಳೆ ಎಂಟು ಮಂದಿ ಅಭ್ಯರ್ಥಿಗಳು ಸಿಕ್ಕಿಬಿದ್ದಿದ್ದು, ನಕಲಿ ಅಂಕಪಟ್ಟಿ ಸಲ್ಲಿಸಿದ ಅಭ್ಯರ್ಥಿಗಳ ವಿರುದ್ಧ ಅಂಚೆ ಇಲಾಖೆಯಿಂದ ವಂಚನೆ ದೂರು‌ ನೀಡಲು ಸಿದ್ಧತೆ ನಡೆಸಲಾಗುತ್ತಿದೆ.

ಈ ಹಿಂದೆ 545 ಪಿಎ ಸ್​ಐ ನೇಮಕಾತಿ ಪರೀಕ್ಷೆ, ಕೆಇಎ ವಿವಿಧ ಹುದ್ದೆಗಳ ನೇಮಕಾತಿ ಸೇರಿದಂತೆ ವಿವಿಧ ಇಲಾಖೆಯಲ್ಲಿನ ನೇಮಕಾತಿಯಲ್ಲಿ ಅಕಮ್ರ ಎಸಗಲಾಗಿದೆ. ವ್ಯಾಪಕ ಅಕ್ರಮ ನಡೆಯುತ್ತಿರುವುದರಿಂದ ಜಿಲ್ಲೆಯಲ್ಲಿ ನೇಮಕಾತಿ ಪರೀಕ್ಷೆ ನಡೆಸದಿರುವ ನಿರ್ಧಾರಕ್ಕೆ ಬರಲಾಗಿದೆ.

ಕರ್ನಾಟಕ ರಾಜ್ಯ ಸಹಾಯಕ ಪ್ರಾಧ್ಯಾಪಕರ ಅರ್ಹತಾ (KSET 2023) ಪರೀಕ್ಷೆ ಜನವರಿ 13 ರಂದು ರಾಜ್ಯಾದ್ಯಂತ ನಡೆಯಲಿದೆ. ಆದರೆ, ಕಲಬುರಗಿಯಲ್ಲಿ ನೇಮಕಾತಿ ಪರೀಕ್ಷೆ ನಡೆಸದೆ ನಿಗದಿ ಮಾಡಲಾಗಿರುವ ಪರೀಕ್ಷಾ ಕೇಂದ್ರವನ್ನು ಬೆಂಗಳೂರಿಗೆ ಸ್ಥಳಾಂತರಿಸಲಾಗಿದೆ.

RELATED ARTICLES
- Advertisment -
Google search engine

Most Popular