ಗುಂಡ್ಲುಪೇಟೆ : ತಾಲ್ಲೂಕಿನ ಸೋಮಳ್ಳಿ ಗ್ರಾಮದ ಹೆಚ್.ರಂಗದಾಸಯ್ಯ (85)ವರ್ಷ ರವರು ಶುಕ್ರವಾರ ಮಧ್ಯಾಹ್ನ ನಿಧನರಾಗಿದ್ದಾರೆ.
ಹೆಚ್.ರಂಗದಾಸಯ್ಯ ರವರು ಉಪ ಅರಣ್ಯ ಸಂರಕ್ಷಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿ ನಿವೃತ್ತಿ ಹೊಂದಿದ್ದರು.
ಮೂಲತಃ ಗುಂಡ್ಲುಪೇಟೆ ತಾಲೂಕಿನ ಸೋಮಹಳ್ಳಿ ಗ್ರಾಮದವರಾಗಿದ್ದು ಇವರು ಮೂರು ಜನ ಗಂಡು ಮಕ್ಕಳು ಒಬ್ಬ ಮಗಳು, ಅಳಿಯ, ಮೊಮ್ಮಕ್ಕಳು ಮತ್ತು ಅಕ್ಕ-ತಂಗಿ ಹಾಗೂ ಅಪಾರ ಬಂಧುಗಳನ್ನು ಬಿಟ್ಟು ಅಗಲಿದ್ದಾರೆ.
ಇವರ ಅಂತ್ಯಕ್ರಿಯೆ ಶನಿವಾರ ಸ್ವಗ್ರಾಮ ಸೋಮಹಳ್ಳಿಯ ತೋಟದಲ್ಲಿ ಮಧ್ಯಾಹ್ನ ನಡೆಯಲಿದೆ ಎಂದು ಕುಟುಂದವರು ತಿಳಿಸಿರುತ್ತಾರೆ.