ಕೆ.ಆರ್.ಪೇಟೆ: ತಾಲೂಕಿನ ಅಕ್ಕಿಹೆಬ್ಬಾಳು ಹೋಬಳಿಯ ಪುರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಶಿಕ್ಷಕರಾದ ಅಂಬುಜಾಕ್ಷಮ್ಮ ಹಾಗೂ ಹೊನ್ನಚಾರಿ ಅವರಿಗೆ ಗ್ರಾಮಸ್ಥರು ಹಾಗೂ ಹಿರಿಯ ವಿದ್ಯಾರ್ಥಿಗಳ ಸಂಘದ ವತಿಯಿಂದ ಹೃದಯಸ್ಪರ್ಷಿಯಾಗಿ ಗೌರವಿಸಲಾಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಸಮಾಜ ಸೇವಕ ಹಾಗೂ ಆರ್.ಟಿ.ಓ ಅಧಿಕಾರಿ ಮಲ್ಲಿಕಾರ್ಜುನ್, ತಾಲೂಕಿನ ಗಡಿ ಭಾಗದಲ್ಲಿ ಇಂತಹ ಶಿಕ್ಷಕರನ್ನು ಪಡೆದ ಕಾರಣ ನೂರಾರು ವಿದ್ಯಾರ್ಥಿಗಳು ಇಂದು ವೈದ್ಯರು, ಇಂಜಿನಿಯರ್, ಶಿಕ್ಷಕರು ಹಾಗೂ ಇನ್ನಿತರ ಇಲಾಖೆಗಳಲ್ಲಿ ಸೇವೆ ಸಲ್ಲಿಸಲು ಅವಕಾಶ ಸಿಕ್ಕಿದೆ ಎಂಬುದನ್ನು ನೋಡಿದರೆ ಇಂತಹ ಶಿಕ್ಷಕರನ್ನು ಪಡೆದ ವಿದ್ಯಾರ್ಥಿಗಳು, ಪೋಷಕರು, ಗ್ರಾಮಸ್ಥರು ಧನ್ಯರು ಎಂದರು. ಹಿರಿಯ ವಿದ್ಯಾರ್ಥಿ ಡಾ.ರೋಹಿತ್ ಮಾತನಾಡಿ, ನನ್ನ ಸಾಧನೆಗೆ ಅಡಿಪಾಯ ನನ್ನ ಶಿಕ್ಷಕರು. ನಾನು ಇವರಿಗೆ ಎಷ್ಟು ಮಾಡಿದರು ಇವರ ಋಣವನ್ನು ತೀರಿಸಲಾಗುವುದಿಲ್ಲ. ನಾನು ವೃತ್ತಿಯಲ್ಲಿ ವೈದ್ಯನಾಗಿ ಇವರ ಮುಂದೆ ನಿಂತಿದ್ದೇನೆ ಎಂದರೆ ನನ್ನ ಶಿಕ್ಷಕರೇ ಸಾಕ್ಷಿಯಾಗಿದ್ದಾರೆ ಎಂದರು.
ತಹಶೀಲ್ದಾರ್ ನಿಸರ್ಗಪ್ರಿಯ, ಡಾ,ಲೋಹಿತ್, ಕರ್ನಾಟಕ ಸರ್ಕಾರಿ ನೌಕರ ಸಂಘದ ರಾಜ್ಯ ಉಪಾಧ್ಯಕ್ಷ ಎಲ್.ಎಸ್.ಧರ್ಮಪ್ಪ, ತಾಲೂಕು ಅಧ್ಯಕ್ಷ ಶಿವರಾಮೇಗೌಡ, ಜಿಲ್ಲಾ ಉಪಾಧ್ಯಕ್ಷರಾದ ಮೋಹನ್ ಕುಮಾರಿ, ಖಜಾಂಚಿ ಶಿವಲಿಂಗೇಗೌಡ, ಪ್ರಧಾನ ಕಾರ್ಯದರ್ಶಿ ಪಿ.ಜೆ.ಕುಮಾರ್, ಪ್ರಾ,ಶಾ,ಶಿ ಸಂಘದ ಅಧ್ಯಕ್ಷ ರಾಜೇನಹಳ್ಳಿ ಪದ್ಮೇಶ್, ಶಿವಲಿಂಗೇಗೌಡ, ಅಂಚಿ ಸಣ್ಣಸ್ವಾಮಿಗೌಡ, ಎಸ್.ಡಿ.ಎಂ.ಸಿ ಅಧ್ಯಕ್ಷ ಲೋಕೇಶ್, ಗ್ರಾಪಂ ಅಧ್ಯಕ್ಷರಾದ ಜಯಲಕ್ಷ್ಮಮ್ಮ, ಸದಸ್ಯರಾದ ಮಂಜುಳ ಮಹೇಶ್, ವಸಂತ್ ಕುಮಾರ್, ಚಂದ್ರೇಗೌಡ, ಶಿಕ್ಷಕರಾದ ಬಸವರಾಜು, ತನುಶ್ರೀ, ರಕ್ಷಿತಾ ಮುಖಂಡರುಗಳಾದ ಅಜಯ್, ದೇವಕುಮಾರ್, ರವೀಶ್, ಸೇರಿದಂತೆ ಇತರರು ಉಪಸ್ಥಿತರಿದ್ದರು.