ನವದೆಹಲಿ: ಜನವರಿ 26 ರಂದು ನವದೆಹಲಿಯಲ್ಲಿ ನಡೆಯಲಿರುವ ಗಣರಾಜ್ಯೋತ್ಸವ ಕಾರ್ಯಕ್ರಮದ ಪರೇಡ್ ನಲ್ಲಿ ದೇಶದ ಸೈನ್ಯ ಬಲ ಮತ್ತು ಸಂಸ್ಕೃತಿ ಅನಾವರಣವಾಗುತ್ತದೆ.
ದೇಶದ ವಿವಿಧ ರಾಜ್ಯಗಳಿಂದ ಬರುವ ಟ್ಯಾಬ್ಲೋಗಳು ಪರೇಡ್ ನಲ್ಲಿ ಭಾಗವಹಿಸುತ್ತವೆ. ಈ ಬಾರಿಯ ಗಣರಾಜ್ಯಜ್ಯೋತ್ಸದಲ್ಲಿ ಕರ್ನಾಟಕದಿಂದ “ಬ್ರ್ಯಾಂಡ್ ಬೆಂಗಳೂರು” ಸ್ತಬ್ಧಚಿತ್ರ ಭಾಗಿಯಾಗಲಿದೆ. ಈ ಮೂಲಕ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ, ರಾಜ್ಯ ರಾಜಧಾನಿಯ ‘ಬ್ರ್ಯಾಂಡ್ ಬೆಂಗಳೂರು’ ವೈಭವ ಅನಾವರಣಗೊಳ್ಳಲಿದೆ.
ಬ್ರ್ಯಾಂಡ್ ಬೆಂಗಳೂರು ಬಿಂಬಿಸುವ ಸ್ತಬ್ಧಚಿತ್ರ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗಿಯಾಗಲು ಆಯ್ಕೆ ಸಮಿತಿ ಒಪ್ಪಿಗೆ ನೀಡಿದೆ. ಹೀಗಾಗಿ ರಾಜ್ಯ ವಾರ್ತಾ ಇಲಾಖೆಯಿಂದ ‘ಬ್ರಾಂಡ್ ಬೆಂಗಳೂರು’ ಟ್ಯಾಬ್ಲೋ ರಚನೆ ಕಾರ್ಯ ಆರಂಭವಾಗಿದೆ.
ಇನ್ನು ಗಣರಾಜ್ಯೋತ್ಸವಕ್ಕೆ ರಾಜ್ಯದ ಸ್ತಬ್ಧಚಿತ್ರ ಆಯ್ಕೆಯಾದರೂ ಪರೇಡ್ನಲ್ಲಿ ಸಾಗುವುದು ಅನುಮಾನವಾಗಿದೆ. ಕೆಂಪುಕೋಟೆ ಆವರಣದಲ್ಲಿ ಕೇವಲ ಪ್ರದರ್ಶನಕ್ಕೆ ಮಾತ್ರ ಸೀಮಿತವಾಗಿಸುವ ಸಾಧ್ಯತೆ ಇದೆ.