ಹುಬ್ಬಳ್ಳಿ: ಕೋಮು ರಾಜಕಾರಣ ಮಾಡುವುದಕ್ಕೆ ಕಾಂಗ್ರೆಸ್ ಪಕ್ಷದಲ್ಲಿ ಜಾಗವಿಲ್ಲ. ಜನರು ಬದುಕು, ಉದ್ಯೋಗ ಹಾಗೂ ಅಭಿವೃದ್ಧಿಗೆ ಆದ್ಯತೆ ನೀಡುವುದು ನಮ್ಮ ಕರ್ತವ್ಯ ಎಂದು ಆರೋಗ್ಯ ಸಚಿವ ದಿನೇಶ ಗುಂಡೂರಾವ್ ಹೇಳಿದರು.
ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇಶದಲ್ಲಿ ತುಂಬಾ ದೊಡ್ಡ ದೊಡ್ಡ ಸಮಸ್ಯೆಗಳಿವೆ. ಇಂತಹುದೆಲ್ಲಾ ಚರ್ಚೆ ಆಗಬಾರದು ಎಂಬುವುದು ಬಿಜೆಪಿ ಮುಖ್ಯ ಉದ್ದೇಶ. ಆದ್ದರಿಂದ ಬೇರೆ ವಿಚಾರವಿಟ್ಟುಕೊಂಡು ಗಮನ ಬೇರೆಡೆ ಸೆಳೆಯುತ್ತಿದ್ದಾರೆ ಎಂದು ಆರೋಪಿಸಿದರು.
ಕೇಂದ್ರ ಸರ್ಕಾರದಿಂದ ರಾಜ್ಯ ಸರ್ಕಾರಕ್ಕೆ ಅನ್ಯಾಯವಾಗುತ್ತಿದೆ. ಈ ಬಗ್ಗೆ ಹೆಚ್ಚು ಚರ್ಚೆ ಆಗಬೇಕು. ಎಷ್ಟು ಅನ್ಯಾಯ ಆಗಿದೆ? ಎಷ್ಟು ಹಣ ಬರಬೇಕಿತ್ತು? ಏಕೆ ಕೊಡುತ್ತಿಲ್ಲ ಎಂಬುವುದು ಮಾತನಾಡಬೇಕಿದೆ. ಬರಗಾಲದ ನಯಾ ಪೈಸೆನು ರಾಜ್ಯಕ್ಕೆ ಕೇಂದ್ರವು ನೀಡಿಲ್ಲ. ಈ ವಿಚಾರ ಬಗ್ಗೆ ಚರ್ಚಿಸೋಣ ಎಂದು ಹೇಳಿದರು.