ಮೈಸೂರು: ತಮಿಳುನಾಡಿನ ಬಣ್ಣಾರಿ ಹೆದ್ದಾರಿಯಲ್ಲಿ ಮರಕ್ಕೆ ಕಾರು ಡಿಕ್ಕಿಯಾಗಿ ಓರ್ವ ವ್ಯಕ್ತಿ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ನಡೆದಿದೆ.
ಹುಣಸೂರು ತಾಲೂಕಿನ ರತ್ನಪುರಿಯ ನಾಸೀರ್(46) ಮೃತ ವ್ಯಕ್ತಿ.
ಕಾರಿನಲ್ಲಿದ್ದ ಸಿಕಂದರ್, ಮುಜೀಬ್ ಗೆ ಗಾಯಗಳಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಮೂವರು ಕೆಲಸದ ನಿಮಿತ್ತ ಕೊಯಿಮತ್ತೂರಿಗೆ ತೆರಳಿದ್ದರು. ಅಲ್ಲಿಂದ ವಾಪಸ್ಸು ಬರುವಾಗ ಚಾಲಕನ ನಿಯಂತ್ರಣ ತಪ್ಪಿ, ರಸ್ತೆ ಬದಿಯ ಮರಕ್ಕೆ ಕಾರು ಡಿಕ್ಕಿ ಹೊಡೆದಿದೆ.