Sunday, April 20, 2025
Google search engine

Homeಸಿನಿಮಾಮಂಗಳೂರು ವಜ್ರದೇಹಿ ಮಠದ ದೈವದ ಮೊರೆ ಹೋದ ರಿಷಬ್ ಶೆಟ್ಟಿ

ಮಂಗಳೂರು ವಜ್ರದೇಹಿ ಮಠದ ದೈವದ ಮೊರೆ ಹೋದ ರಿಷಬ್ ಶೆಟ್ಟಿ

ಮಂಗಳೂರು (ದಕ್ಷಿಣ ಕನ್ನಡ): ರಿಷಬ್ ಶೆಟ್ಟಿ ಅವರು ದೈವದ ವಿಚಾರ ಇಟ್ಟುಕೊಂಡು ಮಾಡಿದ್ದ ‘ಕಾಂತಾರ’ ಸಿನಿಮಾ ಸೂಪರ್ ಹಿಟ್ ಆಗಿತ್ತು. ಇದರ ಬೆನ್ನಲ್ಲೇ ರಿಷಬ್ ಶೆಟ್ಟಿ ಅವರು ‘ಕಾಂತಾರ: ಚಾಪ್ಟರ್ 1’ ಸಿನಿಮಾ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ. ಇದರ ಮಧ್ಯೆ ರಿಷಬ್ ಶೆಟ್ಟಿ ಅವರು ಮಂಗಳೂರಿಗೆ ಭೇಟಿ ನೀಡಿದ್ದಾರೆ. ‘ಕಾಂತಾರ: ಚಾಪ್ಟರ್ 1’ ಕೆಲಸಗಳು ನಿರ್ವಿಘ್ನವಾಗಿ ನಡೆಯಲು ರಿಷಬ್ ಶೆಟ್ಟಿ ಮತ್ತೆ ದೈವದ ಮೊರೆ ಹೋದರೇ ಎನ್ನುವ ಪ್ರಶ್ನೆ ಮೂಡಿದೆ. ಯೆಸ್.
ಮಂಗಳೂರು ವಜ್ರದೇಹಿ ಮಠದ ದೈವ ಕೋಲದಲ್ಲಿ ರಿಷಬ್ ಶೆಟ್ಟಿ ಭಾಗಿಯಾಗಿದ್ದಾರೆ. ಈ ಹಿಂದೆ ವಜ್ರದೇಹಿ ಸ್ವಾಮೀಜಿ ಭೇಟಿಯಾದ ಸಂದರ್ಭದಲ್ಲಿ ಅವರು ಈ ಬಗ್ಗೆ ಇಂಗಿತ ವ್ಯಕ್ತಪಡಿಸಿದ್ದರು. ವಜ್ರದೇಹಿ ಮಠದ ದೈವ ಕೋಲ ವೀಕ್ಷಿಸುವ ಇಚ್ಛೆಯನ್ನು ಹೇಳಿಕೊಂಡಿದ್ದರು. ಹೀಗಾಗಿ ಕೋಲಕ್ಕೆ ವಜ್ರದೇಹಿ ಮಠದ ರಾಜಶೇಖರಾನಂದ ಸ್ವಾಮೀಜಿ ಅವರು ರಿಷಬ್ ಶೆಟ್ಟಿಯನ್ನು ಆಹ್ವಾನಿಸಿದ್ದರು. ಹೀಗಾಗಿ ರಿಷಬ್ ಇದರಲ್ಲಿ ಭಾಗಿಯಾಗಿದ್ದಾರೆ.
‘ಧೈರ್ಯ ಕಳೆದುಕೊಳ್ಳದಂತೆ, ಏನೇ ಸಮಸ್ಯೆ ಎದುರಾದರೂ ಕುಗ್ಗಬೇಡಿ, ಹಿಂದೆ ನಾನಿದ್ದೇನೆ’ ಎಂದು ದೈವ ಸೂಚನೆ ನೀಡಿದೆ ಎನ್ನಲಾಗಿದೆ. ‘ಕಾಂತಾರ’ ಶೂಟಿಂಗ್ ಸಂದರ್ಭದಲ್ಲೂ ದೈವದ ಅಭಯ ಚಿತ್ರಕ್ಕೆ ಸಿಕ್ಕಿತ್ತು. ಈಗ ‘ಕಾಂತಾರ: ಚಾಪ್ಟರ್ 1’ ಸಂದರ್ಭದಲ್ಲೂ ಧನಾತ್ಮಕ ಪ್ರಕ್ರಿಯೆ ಸಿಕ್ಕಿರುವುದರಿಂದ ರಿಷಬ್ ಶೆಟ್ಟಿ ಖುಷಿಯಾಗಿದ್ದಾರೆ.
ರಿಷಬ್ ಶೆಟ್ಟಿ ನಟನೆಯ ‘ಕಾಂತಾರ’ ಬಾಕ್ಸ್ ಆಫೀಸ್​ನಲ್ಲಿ 400 ಕೋಟಿ ರೂಪಾಯಿ ಬಿಸ್ನೆಸ್ ಮಾಡಿತ್ತು. ಹೀಗಾಗಿ, ಇದಕ್ಕೆ ಪ್ರೀಕ್ವೆಲ್ ಮಾಡಲು ರಿಷಬ್ ಆಸಕ್ತಿ ತೋರಿಸಿದ್ದಾರೆ. ‘ಕಾಂತಾರ: ಚಾಪ್ಟರ್ 1’ ಚಿತ್ರವನ್ನು ರಿಷಬ್ ಅವರೇ ನಿರ್ದೇಶನ ಮಾಡುತ್ತಿದ್ದಾರೆ. ಕನ್ನಡ ಮಾತ್ರವಲ್ಲದೆ ಹಿಂದಿ, ತೆಲುಗು, ತಮಿಳು, ಮಲಯಾಳಂ, ಬೆಂಗಾಲಿ ಹಾಗೂ ಪಂಜಾಬಿ ಭಾಷೆಯಲ್ಲಿ ಸಿನಿಮಾ ಮೂಡಿಬರುತ್ತಿದೆ. ಹೊಂಬಾಳೆ ಫಿಲ್ಮ್ಸ್ ಅಡಿಯಲ್ಲಿ ವಿಜಯ್ ಕಿರಗಂದೂರು ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ.

RELATED ARTICLES
- Advertisment -
Google search engine

Most Popular