ಎಚ್. ಡಿ. ಕೋಟೆ : ತಹಶೀಲ್ದಾರ್ ಶ್ರೀನಿವಾಸ್ , ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ಮಹದೇವ ಪ್ರಸಾದ್ ,ಆರೋಗ್ಯಾಧಿಕಾರಿಗಳಾದ ಡಾ”ರವಿಕುಮಾರ್ ರವರು ಪ್ರಧಾನ ಮಂತ್ರಿ ಜನ ಮನ್ ಕಾರ್ಯಕ್ರಮದ ಅಡಿಯಲ್ಲಿ ಎಚ್. ಡಿ. ಕೋಟೆ ತಾಲ್ಲೂಕಿನ ಉದ್ಬೂರು ಆಶ್ರಮ ಶಾಲೆಯಲ್ಲಿ ಆಯೋಜಿಸಿದ್ದ ಶಿಬಿರಕ್ಕೆ ಭೇಟಿ ನೀಡಿ ಆಧಾರ್ ಕಾರ್ಡ್, ವೋಟರ್ ಐಡಿ, PMJAY ಕಾರ್ಡ್, ಇನ್ನಿತರ ಸರ್ಕಾರಿ ಸೌಲಭ್ಯಗಳ ಬಗ್ಗೆ ಪರಿಶೀಲನೆ ನಡೆಸಿದರು .
ನಂತರ ತಹಶೀಲ್ದಾರ್ ರವರು ಮಾತನಾಡಿ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಕಂದಾಯ ಇಲಾಖೆ ಸಿಬ್ಬಂದಿ ವರ್ಗದವರು ಪ್ರತಿ ಮನೆಗಳನ್ನು ಸಮೀಕ್ಷೆ ಮಾಡಿ ಆಧಾರ್ ಕಾರ್ಡ್, ವೋಟರ್ ಐಡಿ, ರೇಷನ್ ಕಾರ್ಡ್, ಜಾತಿ ಪ್ರಮಾಣ ಪತ್ರ ಇಲ್ಲದಿದ್ದವರ ವರದಿ ನೀಡಿದರೆ, ದಿನ ಎಲ್ಲಾ ಹಾಡಿಯಲ್ಲಿ ಶಿಬಿರವನ್ನು ಮಾಡಿ ಜನರಿಗೆ ಸ್ಥಳದಲ್ಲೇ ಆಧಾರ್ ಕಾರ್ಡ್ ರೇಷನ್ ಕಾರ್ಡ್ ವೋಟರ್ ಐಡಿಯನ್ನು ಮಾಡಿಸಲಾಗುತ್ತದೆ ಎಂದು ತಿಳಿಸಿದರು,ನಂತರ ಜಿಲ್ಲಾ ಸರ್ವೇಕ್ಷಣಾಧಿಕಾರಿಗಳ ಮಹದೇವ್ ಪ್ರಸಾದ್ ರವರು ಮಾತನಾಡಿ ತಾಲ್ಲೂಕು ಆರೋಗ್ಯಾಧಿಕಾರಿಗಳ ಕಚೇರಿ ವತಿಯಿಂದ ಆರೋಗ್ಯ ತಪಾಸಣೆ ಶಿಬಿರವನ್ನು ಆಯೋಜಿಸಲಾಗಿದೆ.
ಈ ಶಿಬಿರದಲ್ಲಿ ಸಿಬ್ಬಂದಿ ವರ್ಗದವರು ,ಸಿಕಲ್ ಸೆಲ್ ಅನೀಮಿಯಾ ಪರೀಕ್ಷೆ,ಕ್ಷಯ ರೋಗ ಪರೀಕ್ಷೆ,PMJAY ಕಾರ್ಡ್ ಗಳನ್ನು ಮಾಡಿ ಹಾಡಿಯ ಜನರಿಗೆ ಆರೋಗ್ಯ ತಪಾಸಣೆಯನ್ನು ಸಹ ಮಾಡುತ್ತೇವೆ, ಆದುದರಿಂದ ಸಾರ್ವಜನಿಕ ಹೆಚ್ಚಿನ ರೀತಿಯಲ್ಲಿ ಬಂದು ತಪಾಸಣೆಯನ್ನು ಮಾಡಿಸಿಕೊಳ್ಳಬೇಕೆಂದು ತಿಳಿಸಿದರು.ಈ ಸಂದರ್ಭದಲ್ಲಿ ತಾಲ್ಲೂಕು ಆರೋಗ್ಯಾಧಿಕಾರಿಗಳಾದ ಡಾ” ರವಿಕುಮಾರ್ ,ಸಿಬ್ಬಂದಿ ವರ್ಗದವರು ಟ್ರಿಬಲ್ ಆಫೀಸರ್, ನಾರಾಯಣ ಸ್ವಾಮಿ,ADLR ಜಗನ್ನಾಥ್, ಕಂದಾಯ ಇಲಾಖೆ ಸಿಬ್ಬಂದಿ ವರ್ಗದವರು , ಸಾರ್ವಜನಿಕರು,ಇನ್ನಿತರರು ಹಾಜರಿದ್ದರು.
