ಪಿರಿಯಾಪಟ್ಟಣ: ಸಹಕಾರ ಸಂಘಗಳ ಅಭಿವೃದ್ಧಿಯಲ್ಲಿ ಶೇರುದಾರರ ಪಾತ್ರ ಪ್ರಮುಖವಾದುದು ಎಂದು ಹಿಟ್ನೆಹೆಬ್ಬಾಗಿಲು ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘ ನಿಯಮಿತದ ಅಧ್ಯಕ್ಷ ಹೆಚ್.ಎಂ ವಿನೋದ್ ಕುಮಾರ್ ತಿಳಿಸಿದರು.ಸಂಘದ ಕಚೇರಿಯಲ್ಲಿ ನೂತನ 2024ನೇ ವರ್ಷದ ಕ್ಯಾಲೆಂಡರ್ ಬಿಡುಗಡೆ ಮಾಡಿ ಬಳಿಕ ಅವರು ಮಾತನಾಡಿದರು.

ಸಂಘದಿಂದ ಪಡೆದ ಸಬ್ಸಿಡಿ ದರದ ಸಾಲವನ್ನು ನಿಗದಿತ ಸಮಯಕ್ಕೆ ಪಾವತಿಸಿ ಅಭಿವೃದ್ಧಿಗೆ ಸಹಕಾರ ನೀಡಬೇಕು, ನೂತನ ವರ್ಷದಲ್ಲಿ ಸಕಾಲಕ್ಕೆ ಮಳೆಯಾಗಿ ರೈತರ ಬಾಳು ಆರ್ಥಿಕವಾಗಿ ಬೆಳಗಲಿ, ಹಿಂದಿನ ವರ್ಷದ ಕಹಿ ಘಟನೆಗಳು ಮರೆಯಾಗಿ ನೂತನ ವರ್ಷದಲ್ಲಿ ನಾಡಿನ ಜನತೆ ಎಲ್ಲರ ಬಾಳು ಹಸನಾಗಲಿ ಎಂದು ಶುಭ ಕೋರಿದರು.
ಈ ಸಂದರ್ಭ ಸಂಘದ ಉಪಾಧ್ಯಕ್ಷ ಈರೇಗೌಡ, ನಿರ್ದೇಶಕರಾದ ಕೆ.ಕೆ ಹರೀಶ್, ಹೆಚ್.ಎಸ್ ಕುಮಾರ, ಎಚ್.ಸಿ ಮಹದೇವ, ಹೆಚ್.ಪಿ ಅನಿಲ್ ಕುಮಾರ್, ಚಂದ್ರ, ಪಾರ್ವತಿ, ಕಾವೇರಮ್ಮ, ಎಚ್.ಡಿ ಮಹದೇವ, ಮಹೇಶ ನಾಯಕ, ಹೆಚ್.ಕೆ ಅಮೃತೇಶ್, ಮೇಲ್ವಿಚಾರಕರಾದ ಎಚ್.ಕೆ ಜಗದೀಶ್, ಸಿಈಓ ಕೆ.ಪಿ ಜಯರಾಮ, ಗುಮಾಸ್ತರಾದ ಎಚ್.ಕೆ ನಟರಾಜ, ಎಚ್.ಎಲ್ ಸಂತೋಷ್, ಸಿಬ್ಬಂದಿ ಶ್ರೀನಿವಾಸ್ ಹಾಗೂ ಶೇರುದಾರ ಸದಸ್ಯರು ಇದ್ದರು.