ಮಂಡ್ಯ: ಗಂಡನ ಜೊತೆ ಸೇರಿ ತಾಯಿಯನ್ನೆ ಕೊಲೆ ಕೊಲೆ ಮಾಡಿ ರಾತ್ರೋರಾತ್ರಿ ಶವ ಹೂತಿಟ್ಟ ಘಟನೆ ಮಂಡ್ಯ ತಾಲೂಕಿನ ಹೆಬ್ಬಾಕವಾಡಿ ಗ್ರಾಮದಲ್ಲಿ ನಡೆದಿದೆ.
ಗಂಡನ ಮನೆಯಲ್ಲಿ ಕೊಲೆ ಮಾಡಿ ತವರಲ್ಲಿ ಮಗಳು-ಅಳಿಯ ಮಣ್ಣು ಮಾಡಿದ್ದಾರೆ ಎನ್ನಲಾಗಿದ್ದು, ಒಂದು ವರ್ಷದ ಬಳಿಕ ತಡವಾಗಿ ಕೊಲೆ ಪ್ರಕರಣ ಬೆಳಕಿಗೆ ಬಂದಿದೆ.
ಗ್ರಾಮದ ಶಾರದಮ್ಮ(50) ಮೃತ ಮಹಿಳೆ
ಶಾರದಮ್ಮ ಮಗಳು ಅನುಷಾ ಹಾಗೂ ಅಳಿಯ ದೇವರಾಜ್ ರಿಂದ ಕೊಲೆ ಆರೋಪ ಹೊತ್ತವರು.
ಅನುಷಾಳನ್ನು ಮೈಸೂರಿನ ಹಾರೋಹಳ್ಳಿಯ ದೇವರಾಜ್ ಗೆ ಕೊಟ್ಟು ಮದುವೆ ಮಾಡಲಾಗಿತ್ತು.
ಒಬ್ಬಳೇ ಮಗಳಾಗಿದ್ದರಿಂದ ಆಗಾಗ್ಗೆ ಹಾರೋಹಳ್ಳಿಗೆ ಶಾರದಮ್ಮ ಹೋಗಿ ಬರ್ತಿದ್ರು. ಮಗಳ ಮನೆಗೆ ಹೋಗಿದ್ದ ಸಮಯದಲ್ಲಿ 2022 ರ ನವಂಬರ್ ನಲ್ಲಿ ಜಗಳ ನಡೆದಿದೆ. . ತಾಯಿ ಹಾಗೂ ಮಗಳ ನಡುಗೆ ಜಗಳ ಉಂಟಾಗಿ ತಾಯಿಯ ಕೊಲೆಯಲ್ಲಿ ಅಂತ್ಯವಾಗಿತ್ತು. ಆನಂತರ ಅನುಷಾ ಹಾಗೂ ದೇವರಾಜ್ ಸೇರಿ ಶವವನ್ನು ಹಾರೋಹಳ್ಳಿಯಿಂದ ಹೆಬ್ಬಕವಾಡಿಗೆ ರಾತ್ರೋರಾತ್ರಿ ಸಾಗಿಸಿ ಸ್ಮಶಾನದಲ್ಲಿ ಮಣ್ಣು ಮಾಡಿದ್ರು. ಬಳಿಕ ಶಾರದಮ್ಮ ಯಾರದ್ದೊ ಜೊತೆಯಲ್ಲಿ ಓಡಿ ಹೋಗಿದ್ದಾಳೆ ಎಂದು ಸುದ್ದಿ ಹಬ್ಬಿಸಿ, ಆರೇಳು ತಿಂಗಳು ಸುಮ್ಮನಿದ್ದರು.
2023 ರ ಜೂನ್ 22 ರಂದು ವರುಣಾ ಪೊಲೀಸ್ ಠಾಣೆಯಲ್ಲಿ ಮಗಳು ಅನುಷಾ ಮಿಸ್ಸಿಂಗ್ ದೂರು ದಾಖಲಿಸಿದ್ದಳು. ಇಷ್ಟು ದಿನಗಳ ಕಾಲ ಹುಡುಕಿದ್ರೂ ಸಿಗದಿದ್ದಾಗ ಅಳಿಯ ಮಗಳನ್ನೇ ಪೊಲೀಸರು ವಿಚಾರಣೆ ಮಾಡಿದ್ದಾರೆ. ಈ ವೇಳೆ ಗಂಡ-ಹೆಂಡತಿ ಸತ್ಯ ಬಾಯ್ಬಿಟ್ಟಿದ್ದಾರೆ.
ಆನಂತರ ಕೊಲೆ ಪ್ರಕರಣವನ್ನು ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆಗೆ ವರ್ಗಾವಣೆ ಮಾಡಲಾಗಿದೆ.
ಈ ಹಿನ್ನೆಲೆ ಮಂಡ್ಯ ತಹಶೀಲ್ದಾರ್ ಶಿವಕುಮಾರ್ ಬಿರಾದರ್ ನೇತೃತ್ವದಲ್ಲಿ ಮರಣೋತ್ತರ ಪರೀಕ್ಷೆಗಾಗಿ ಹೆಬ್ಬಕವಾಡಿಯ ಸ್ಮಶಾನದಲ್ಲಿ ಹೂತಿಟ್ಟ ಮೃತದೇಹ ಹೊರತೆಗೆಯಲು ಪೊಲೀಸರು ಮುಂದಾಗಿದ್ದು, ನಿನ್ನೆ ರಾತ್ರಿಯಾದ್ರೂ ಶವ ದೊರಕದ ಹಿನ್ನಲೆ ಇಂದು ಕಾರ್ಯಚರಣೆ ಮುಂದುವರೆಸಲಿದ್ದಾರೆ.
ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.