ಮೈಸೂರು: ಜಿಲ್ಲೆಯಲ್ಲಿ ಸಾಮಾಜಿಕ ಬದ್ಧತೆ ಹಾಗೂ ಸೇವಾ ಮನೋಭಾವದಿಂದ ಕೆಲಸ ಮಾಡಬೇಕೆಂಬ ನಿಟ್ಟಿನಲ್ಲಿ ಮಮತಾ ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ಸ್ಪಂದನ ಸ್ವಯಂ ಸೇವಾ ಸಂಸ್ಥೆ, ಮೈಸೂರು ಎಂಬ ಹೆಸರಿನಲ್ಲಿ ಸ್ಥಳೀಯ ಜಿಲ್ಲಾ ಸದಸ್ಯರನ್ನೊಳಗೊಂಡ ಸ್ವಯಂ ಸೇವಾ ಸಂಸ್ಥೆಗೆ ಇಂದು ಅಧಿಕೃತವಾಗಿ ಚಾಲನೆ ನೀಡಲಾಯಿತು.
ಮೈಸೂರಿನ ಕಲ್ಯಾಣಗಿರಿ ಬಡಾವಣೆಯ ರಾಜಕುಮಾರ್ ರಸ್ತೆಯಲ್ಲಿರುವ ಬಲಮುರಿ ಶಕ್ತಿ ಗಣಪತಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಗಣ್ಯರ ಸಮ್ಮುಖದಲ್ಲಿ ಜ್ಯೋತಿ ಬೆಳಗಿಸುವ ಮೂಲಕ ಸಂಸ್ಥೆ ವಿದ್ಯುಕ್ತವಾಗಿ ಉದ್ಘಾಟನೆಗೊಂಡಿತು.
ಉದ್ಘಾಟನಾ ಕಾರ್ಯಕ್ರಮದಲ್ಲಿ ಸಂಸ್ಥೆಯ ಬಿ. ಆರ್.ಚೇತನ್ ( ಉಪಾಧ್ಯಕ್ಷರು), ಭಾಗ್ಯ (ನಿರ್ದೇಶಕರು) ಕಾರ್ಯದರ್ಶಿಗಳಾದ ಸರಸ್ವತಿ, ಜಿ. ಎಮ್. ಮಹೇಶ್ (ಸಹ ಕಾರ್ಯದರ್ಶಿ) , ಕೆ. ವಸುಂದರಾ. ಕೆ (ಜಂಟಿ ಕಾರ್ಯದರ್ಶಿ) ಎಸ್. ಎನ್.ಗುರುಸ್ವಾಮಿ (ಖಜಾಂಜಿ) ಹಾಗೂ ಕೆ. ಸಿ. ರಾಘವೇಂದ್ರ (ಸಂಘಟನಾ ಕಾರ್ಯದರ್ಶಿ) ಪದಾಧಿಕಾರಿಗಳು ಪಾಲ್ಗೊಂಡು ಶುಭ ಹಾರೈಸಿದರು.